ಪಣಜಿ : ಗೋವಾದಲ್ಲಿ ಕಳೆದ 61 ದಿನಗಳಿಂದ ಬಂದ್ ಆಗಿದ್ದ ಮೀನುಗಾರಿಕೆ ಅಗಷ್ಟ 1 ರಿಂದ ಪುನರಾರಂಭಗೊಂಡಿದೆ. ಆದರೆ ಕರ್ನಾಟಕ, ಕೇರಳ, ಭಾಗಗಳಿಂದ ಮೀನುಗಾರಿಕಾ ಬೋಟ್ ಗೆ ಕೆಲಸಗಾರರು ಇದುವರೆಗೂ ಆಗಮಿಸದ ಕಾರಣ ಹೆಚ್ಚಿನ ಬೋಟ್ ಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಾಗದೆಯೇ ದಡದಲ್ಲಿಯೇ ನಿಲ್ಲುವಂತಾಗಿದೆ.
ಇದನ್ನೂ ಓದಿ : ಮಹದಾಯಿ ತೀರ ವಾಸಿಗಳ ಬದುಕಿಗೆ ಆಸರೆಯಾಗಿ : ಸರ್ಕಾರಕ್ಕೆ ಆಗ್ರಹ
ಈ ಕುರಿತಂತೆ ಮೀನುಗಾರಿಕಾ ಇಲಾಖೆಯ ಅಧೀಕ್ಷಕ ಮೇಧಾ ಕೇರಕರ್ ಮಾತನಾಡಿ, ರಾಜ್ಯದಲ್ಲಿ ಮೀನುಗಾರಿಕೆ ಇಂದಿನಿಂದ(ಭಾನುವಾರದಿಂದ, ಆಗಷ್ಟ್ 1) ಆರಂಭಗೊಂಡಿದೆ. ಆದರೆ ಕಾರ್ಮಿಕರ ಕೊರತೆಯಿಂದಾಗಿ ತೊಂದರೆಯಾಗಿದೆ. ಸಮುದ್ರದಲ್ಲಿ 75 ಕಿ.ಮಿ ಗಿಂತ ಮುಂದೆ ಮೀನುಗಾರಿಕೆಗೆ ತೆರಳಲು ಹವಾಮಾನ ಇಲಾಖೆ ನಿರ್ಬಂಧ ಹೇರಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ ಪ್ರತಿ ವರ್ಷ ಜೂನ್ 1 ರಿಂದ ಜುಲೈ 31 ರ ವರೆಗೆ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತದೆ. ಈ ಸಮಯವು ಮೀನುಗಳ ಪ್ರಜನನ ಸಮಯವಾಗಿದ್ದರಿಂದ ಈ 61 ದಿನಗಳ ಕಾಲ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತದೆ. ಆದರೆ ಇದೀಗ ರಾಜ್ಯದಲ್ಲಿ ಮೀನುಗಾರಿಕೆ ಪುನರಾರಂಭಗೊಂಡರೂ ಕೂಡ ಕಾರ್ಮಿಕರ ಕೊರತೆ ಎದುರಾಗಿದೆ.
ಇದನ್ನೂ ಓದಿ : ಐಇಎಸ್ ಪರೀಕ್ಷೆಯಲ್ಲಿ ಎರಡನೇ ರ್‍ಯಾಂಕ್ : ಕಾಶ್ಮೀರದ ರೈತನ ಮಗನ ಸಾಧನೆ