Advertisement
ಮಡಗಾಂವ, ಬಾಣಾವಲಿ, ಪರ್ವರಿ, ಬಿಚೋಲಿ, ಸಾಂತಕ್ರೂಜ್ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ 5 ಕ್ಕಿಂತ ಕಡಿಮೆಯಿದೆ. ಶಿವೋಲಿಂನಲ್ಲಿ ಅತಿ ಹೆಚ್ಚು ಅಂದರೆ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಖ್ಯಮಂತ್ರಿ ಪ್ರಮೋದ ಸಾವಂತ್ ಸ್ಫರ್ಧಿಸಿರುವ ಸಾಖಳಿ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Related Articles
Advertisement
ಈ ಕುರಿತು ಶಿವಸೇನೆ ಸಂಸದ ಸಂಜಯ ರಾವುತ್ ತಮ್ಮ ಟ್ವೀಟ್ ಖಾತೆಯಲ್ಲಿ ಟ್ವೀಟ್ ಮಾಡಿ, ನಾವು ನಮ್ಮ ಮಾತನ್ನು ಉಳಿಸಿಕೊಳ್ಳುತ್ತೇವೆ. ಪಣಜಿ ಕ್ಷೇತ್ರದಿಂದ ಶಿವಸೇನೆಯಿಂದ ಸ್ಪರ್ಧಿಸಿದ್ದ ಶೈಲೇಂದ್ರ ವೇಲಿಂಗ್‍ಕರ್ ರವರನ್ನು ಕಣದಿಂದ ಹಿಂಪಡೆದಿದ್ದೇವೆ. ನಮ್ಮ ಕಾರ್ಯಕರ್ತರು ಉತ್ಪಲ್ ಪರೀಕರ್ ರವರನ್ನು ಸಂಪೂರ್ಣವಾಗಿ ಬೆಂಬಲಿಸಲಿದ್ದಾರೆ ಎಂದು ಬರೆದಿದ್ದಾರೆ.
ಸ್ಥಳೀಯ ಕಾಂಗ್ರೆಸ್ ನಾಯಕರಾದ ಉದಯ್ ಮಡಕೈಕರ್, ಸುರೇಂದ್ರ ಫುರ್ತಾದೊ ರವರು ಉತ್ಪಲ್ ರವರಿಗೆ ಬೆಂಬಲ ನೀಡಿದ ಕೆಲ ದಿನಗಳ ನತರ ಶಿವಸೇನೆ ಕೂಡ ತನ್ನ ಸಂಪೂರ್ಣ ಬೆಂಬಲ ಘೋಷಿಸಿದೆ.
ಮಾಧ್ಯಮಗಳಿಗೆ ಉತ್ಪಲ್ ಪರೀಕರ್ ಪ್ರತಿಕ್ರಿಯೆ ನೀಡಿ, ಅಭಿವೃದ್ಧಿ ಕೆಲಸ ಮಾಡಲು ಆಡಳಿತದಲ್ಲಿಯೇ ಇರಬೇಕೆಂದಿಲ್ಲ. ವಿರೋಧ ಪಕ್ಷದಲ್ಲಿದ್ದರೂ ಅದನ್ನು ಮಾಡಬಹುದು. ನನ್ನ ತಂದೆ ಮನೋಹರ್ ಪರ್ರಿಕರ್ ರವರು ಅದನ್ನು ಸಾಬೀತು ಮಾಡಿದ್ದಾರೆ ಎಂದರು.ಉತ್ಪಲ್ ಪಣಜಿ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೆಚ್ಚಿನ ನಿಗಾ ವಹಿಸಿದೆ. ರಾಜ್ಯದಲ್ಲಿ ನೀತಿಸಂಹಿತೆ ಕಟ್ಟು ನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಆಯೋಗವು ತಂಡವನ್ನು ನೇಮಿಸಿದೆ.