Advertisement

ಗೋವಾ:  ಪ್ರಮಾಣವಚನ ಸ್ವೀಕರಿಸಿದ ನೂತನ 39 ಶಾಸಕರು

05:21 PM Mar 15, 2022 | Team Udayavani |

ಪಣಜಿ: ಗೋವಾ ರಾಜ್ಯದ 8 ನೇಯ ವಿಧಾನಸಭೆಯ ಮೊದಲ ದಿನ ಅಧಿವೇಶನ ಮಂಗಳವಾರ ನಡೆಯಿತು. ಹೊಸದಾಗಿ ಚುನಾಯಿತರಾದ 39 ಶಾಸಕರು ಪ್ರಮಾಣವಚನ ಸ್ವೀಕರಿಸಿದರು.

Advertisement

ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ರವರು ಹಂಗಾಮಿ ಸಭಾಪತಿಯಾಗಿ ಗಣೇಶ್ ಗಾಂವಕರ್ ರವರಿಗೆ ಪ್ರಮಾಣಚನ ಬೋಧಿಸಿದರು ಮತ್ತು ಇತರ ಶಾಸಕರಿಗೆ ಪ್ರಮಾಣವಚನ ಬೋಧಿಸುವ ಅಧಿಕಾರ ನೀಡಿದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಗೋವಾ ವಿಧಾನಸಭೆಯಲ್ಲಿ ಹಂಗಾಮಿ ಸಭಾಪತಿಗಳು 39 ಜನ ನೂತನ ಶಾಸಕರಿಗೆ ಪ್ರಮಾಣವಚನ ಬೋಧಿಸಿದರು.

ಹೊಸದಾಗಿ ಆಯ್ಕೆಯಾದ ಶಾಸಕರ ಪೈಕಿ 15 ಶಾಸಕರು ಕೊಂಕಣಿಯಲ್ಲಿ, 7 ಶಾಸಕರು ಮರಾಠಿಯಲ್ಲಿ ಮತ್ತು 17 ಶಾಸಕರು ಇಂಗ್ಲೀಷ್‍ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸರ್ಕಾರ ರಚನೆಗೂ ಮುನ್ನ ಶಾಸಕರು ಪ್ರಮಾಣಚನ ಸ್ವೀಕರಿಸಿದ್ದಾರೆ. ಹೋಳಿ ಹಬ್ಬದ ನಂತರವೇ ನೂತನ ಸರ್ಕಾರಿ ರಚನೆಯಾಗಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next