Advertisement

ಗೋವಾ:ಕೋವಿಡ್-19 ನಿಂದ ನಿಧನರಾದ ಸಂತ್ರಸ್ತ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ

05:59 PM Jul 03, 2021 | Team Udayavani |

ಪಣಜಿ: ಕೋವಿಡ್-19 ನಿಂದ ನಿಧನರಾದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ರೂಪದಲ್ಲಿ 2 ಲಕ್ಷ ರೂ ಆರ್ಥಿಕ ನೆರವು ನೀಡುವ ಯೋಜನೆಗೆ ಸಂಬಂಧಿಸಿದಂತೆ ಗೋವಾ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.

Advertisement

ವಾರ್ಷಿಕ ಆದಾಯ 8 ಲಕ್ಷ ರೂ ಮೀರದ ಮತ್ತು ಗೋವಾದಲ್ಲಿ ಕನಿಷ್ಠ 15 ವರ್ಷ ವಾಸಿಸುವ ದಾಖಲಾತಿ ಹೊಂದಿರುವ ಕುಟುಂಬಗಳಲ್ಲಿ ಯಾರಾದರೂ ಕೋವಿಡ್‍ನಿಂಸದ ಮೃತರಾಗಿದ್ದರೆ ಅಂತವರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಸಮಾಜ ಕಲ್ಯಾಣ ಇಲಾಖೆ ಜಾರಿಗೆ ತಂದಿರುವ ಈ ಯೋಜನೆಯ ಲಾಭ ಪಡೆಯಲು  ಕೋವಿಡ್ ಮೃತರ ಕುಟುಂಬಗಳಿಗೆ ಒಬ್ಬರಿಗೆ ಮಾತ್ರ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಒಂದು ಕುಟುಂಬದಲ್ಲಿ ಕೋವಿಡ್‍ನಿಂದ ಎಷ್ಟೇ ಜನರು ಸಾವನ್ನಪ್ಪಿದ್ದರೂ ಕೂಡ ಒಬ್ಬರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next