Advertisement

‌ ಕರ್ಫ್ಯೂ ಕಾಲಾವಧಿಯನ್ನು ಸೆಪ್ಟೆಂಬರ್ 6 ರವರೆಗೆ ವಿಸ್ತರಿಸಿದ ಗೋವಾ ಸರ್ಕಾರ

03:07 PM Aug 30, 2021 | Team Udayavani |

ಪಣಜಿ: ನೆರೆಯ ರಾಜ್ಯಗಳಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಗೋವಾದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಕಾಲಾವಧಿಯನ್ನು ಸೆಪ್ಟೆಂಬರ್ 6 ರವರೆಗೆ ವಿಸ್ತರಣೆ ಮಾಡಲಾಗಿದೆ.

Advertisement

ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳ ಖರೀದಿಗೆ ಜನ ದಟ್ಟಣೆ ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಅನಗತ್ಯ ಜನದಟ್ಟಣೆ ತಡೆಯಲು ಕೂಡ ಮುಂದಾಗಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ಫ್ಯೂ ಕಾಲಾವಧಿಯನ್ನು ಸರ್ಕಾರ ಇನ್ನೂ ಒಂದು ವಾರಗಳ ಕಾಲ ವಿಸ್ತರಣೆ ಮಾಡಿದೆ.

ಇದನ್ನೂ ಓದಿ:ಪ್ರವಾಸಿಗರಿಲ್ಲದೇ ಹಂಪಿ ಭಣ ಭಣ!

ಹೊರ ರಾಜ್ಯಗಳಿಂದ ಗೋವಾಕ್ಕೆ ಆಗಮಿಸಲು ಕೋವಿಡ್ ನೆಗೆಟಿವ್ ವರದಿ ಅಥವಾ ವ್ಯಾಕ್ಸಿನೇಶನ್ ಎರಡೂ ಡೋಸ್ ಪಡೆದಿರುವುದು ಖಡ್ಡಾಯವಾಗಿದೆ. ಕೇರಳದಿಂದ ಗೋವಾಕ್ಕೆ ಆಗಮಿಸಲು ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಖಡ್ಡಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next