ಪಣಜಿ : ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗೋವಾ ಕಾಂಗ್ರೇಸ್ ಪಕ್ಷದ ವರಿಷ್ಠ ನಿರೀಕ್ಷಕ ಹಾಗೂ ಸಮನ್ವಯಕರನ್ನಾಗಿ ಮಾಜಿ ಕೇಂದ್ರ ಅರ್ಥಮಂತ್ರಿ ಪಿ.ಚಿದಂಬರಂ ರವರನ್ನು ನಿಯುಕ್ತಿಗೊಳಿಸಲಾಗಿದೆ.
ಇದನ್ನೂ ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 125 ಅಂಕ ಜಿಗಿತ, 16 ಸಾವಿರ ಅಂಕ ದಾಟಿದ ನಿಫ್ಟಿ
ಸ್ಥಳೀಯ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದ ನಿಲುವು ಸ್ಪಷ್ಟವಾಗದ ಹಿನ್ನೆಲೆಯಲ್ಲಿ ಚುನಾವಣಾ ರಣನೀತಿ ರೂಪಿಸಲು ಕಾಂಗ್ರೇಸ್ ಪಕ್ಷವು ಚಿದಂಬರಂ ರವರನ್ನು ನಿಯುಕ್ತಿಗೊಳಿಸಿದೆ ಎನ್ನಲಾಗಿದೆ.
ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಪಿ.ಚಿದಂಬರಂ ರವರನ್ನು ನಿಯುಕ್ತಿಗೊಳಿಸಿದ ಆದೇಶವನ್ನು ಕಾಂಗ್ರೇಸ್ ರಾಷ್ಟ್ರೀಯ ಪ್ರಮುಖ ಕೆ.ಸಿ ವೇಣುಗೋಪಾಲ್ ಜಾರಿಗೊಳಿಸಿದ್ದಾರೆ.
ಇದನ್ನೂ ಓದಿ : ಆಗಸ್ಟ್ 9 ಮಲೆ(ಳೆ)ನಾಡಿಗರ ಪಾಲಿಗೆ ಕರಾಳ ದಿನ.! ಇನ್ನೂ ತಪ್ಪಲಿಲ್ಲ ಸಂತ್ರಸ್ಥರ ಕಣ್ಣೀರು.. !