Advertisement

ವಾಟ್ಸಾಪ್‌ ಗ್ರೂಪ್‌ನಲ್ಲಿ ನೀಲಿ ಚಿತ್ರ, ಕಾಂಗ್ರೆಸ್‌ಗೆ ತೀವ್ರ ಮುಜುಗರ

11:58 AM Jul 09, 2017 | |

ಪಣಜಿ: ಗೋವಾದ ವಿಪಕ್ಷ ಕಾಂಗ್ರೆಸ್‌ ಪಕ್ಷಕ್ಕೆ  ತೀವ್ರ ಮುಜುಗರಕ್ಕೀಡಾಗುವ ಸನ್ನಿವೇಶವೊಂದರಲ್ಲಿ ಪರ್ತಕರ್ತರೊಂದಿಗೆ ಸಂವಹನಕ್ಕಾಗಿ ಬಳಸುವ ವಾಟ್ಸಾಪ್‌ ಗ್ರೂಪ್‌ನಲ್ಲಿ  ಪಕ್ಷದ ನಾಯಕರೊಬ್ಬರು ಸೆಕ್ಸ್‌ ಚಿತ್ರವೊಂದನ್ನು ಕಳುಹಿಸಿದ್ದಾರೆ.

Advertisement

ಗಂಭೀರ ವಿಚಾರಗಳಿಗೆ ಮಾತ್ರ ವೇದಿಕೆಯಾಗಿದ್ದ ಗ್ರೂಪ್‌ನಲ್ಲಿ 80 ಮಂದಿ ಸದಸ್ಯರಿದ್ದರು. ಈ ಪೈಕಿ ಪತ್ರಕರ್ತರು ಮತ್ತು ಕಾಂಗ್ರೆಸ್‌ ನಾಯಕರು ಸೇರಿದ್ದರು.

ವಿಡಿಯೋ ಕಳುಹಿಸಿದ ನಾಯಕನನ್ನು ಗ್ರೂಪ್‌ನಿಂದ ತೆಗೆದು ಹಾಕಿರುವುದಾಗಿ ಪಕ್ಷದ ವಕ್ತಾರ ಸುನಿಲ್‌ ಕವತಾನಕರ್‌ ಕ್ಷಮೆ ಯಾಚಿಸಿದ್ದಾರೆ. 

ಗೋವಾ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿಯೆ ವಿಡಿಯೋ ಕಳುಹಿಸಿದ್ದು ಎಂದು ವರದಿಯಾಗಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next