Advertisement
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಒಡೆಯಲು ಬಿಜೆಪಿಯವರು ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ನಾನು ಹೇಳಲಾರೆ ಎಂದರು. ಶಾಸಕ ಮೈಕಲ್ ಲೋಬೋ ಮತ್ತು ದಿಗಂಬರ್ ಕಾಮತ್ ರವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ. ಸದ್ಯ ಕಾಂಗ್ರೇಸ್ 6 ಶಾಸಕರನ್ನು ಹೊಂದಿದ್ದು ಇತರ ಶಾಸಕರು ತಾವು ವಿಚಾರ ಮಾಡಿ ಕೂಡಲೇ ಪಕ್ಷಕ್ಕೆ ಮರಳುವಂತೆ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.
ಶಾಸಕ ಮೈಕಲ್ ಲೋಬೊ, ದಿಗಂಬರ್ ಕಾಮತ್, ಕೇದಾರ್ ನಾಯ್ಕ, ಅಲೆಕ್ಸ ಸಿಕ್ಕೇರಾ, ಕಾರ್ಲೊಸ್ ಪೆರೇರಾ, ಅಲ್ತೊನೊ ಡಿಕೋಸ್ತಾ, ಯೂರಿ ಅಲೆಮಾಂವ, ರಾಜೇಶ್ ಫಳದೇಸಾಯಿ ಈ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಶಾಸಕರು ಕಾಂಗ್ರೆಸ್ ಸಭೆಗೆ ಗೈರು ಹಾಜರಾಗಿದ್ದರು. ಇದನ್ನೂ ಓದಿ :ಗೋವಾ: ಚರ್ಚೆಗೆ ಕಾರಣವಾದ 10 ಕಾಂಗ್ರೆಸ್ ಶಾಸಕರು ಬಿಜೆಪಿಯಲ್ಲಿ ವಿಲೀನ ಸುದ್ದಿ !