Advertisement

ಇಂದು ಗೋವಾಗೆ ದಿನೇಶ್ ಗುಂಡೂರಾವ್ : ನಾಳೆ ಕಾರ್ಯಕರ್ತರೊಂದಿಗೆ ಚರ್ಚೆ  

04:04 PM Aug 04, 2021 | Team Udayavani |

ಪಣಜಿ : ಕಾಂಗ್ರೇಸ್ ಗೋವಾ ಪ್ರಭಾರಿ ದಿನೇಶ್ ಗುಂಡೂರಾವ್ ರವರು ಇಂದು(ಬುಧವಾರ, ಆಗಷ್ಟ 4) ರಂದು ಗೋವಾಕ್ಕೆ ಆಗಮಿಸಲಿದ್ದು, ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗೋವಾದ ವಿವಿಧ ಮತಕ್ಷೇತ್ರಗಳಿಗೆ ತೆರಳಿ ಕಾಂಗ್ರೇಸ್ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದುಕೊಳ್ಳಲಿದ್ದಾರೆ.

Advertisement

ಇದನ್ನೂ ಓದಿ : ಟೋಕಿಯೊ ಒಲಿಂಪಿಕ್ಸ್; ಕುಸ್ತಿ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ದಹಿಯಾ, ಫೈನಲ್ ಗೆ ಲಗ್ಗೆ

ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೇಸ್ ಗಟ ಸಮೀತಿಯ ಸದಸ್ಯರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಗೋವಾ ಪ್ರದೇಶ ಕಾಂಗ್ರೇಸ್ ಸಮೀತಿಯ ಉಪಾಧ್ಯಕ್ಷ ಎಂ.ಕೆ.ಶೇಖ್ ಮಾಹಿತಿ ನೀಡಿದ್ದಾರೆ.

ಕಾಂಗ್ರೇಸ್ ಗೋವಾ ಪ್ರಭಾರಿ ದಿನೇಶ್ ಗುಂಡೂರಾವ್ ರವರು  ನಾಳೆ(ಆಗಷ್ಟ 5, ಗುರುವಾರ) ರಂದು ಗೋವಾದ ಸಾಂಗೆಮ್‍ ನಲ್ಲಿ ಕಾಂಗ್ರೇಸ್ ಗಟ ಸಮೀತಿಯೊಂದಿಗೆ ಚರ್ಚೆ ನಡೆಸಲಿದ್ದಾರೆ.

ಸಂಜೆ 5 ಗಂಟೆಗೆ ಕುಡಚಡೆಯಲ್ಲಿ ಕಾಂಗ್ರೇಸ್ ಕಾರ್ಯರ್ತರನ್ನು ಭೇಟಿ ಮಾಡಲಿದ್ದಾರೆ. ಸಂಜೆ 6.30 ಕ್ಕೆ ಬಾಳ್ಳಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಆಗಷ್ಟ 6 ರಂದು ಬೆಳಿಗ್ಗೆ ಶ್ರೀಸ್ಥಳದಲ್ಲಿ, ಸಂಜೆ 4 ಗಂಟೆಗೆ ವೆಳ್ಳಿ ಗಟ ಸಮೀತಿಯೊಂದಿಗೆ, 5.30 ಕ್ಕೆ ಕುಂಕಳ್ಳಿ ಗಟ ಸಮೀತಿಯೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಇದನ್ನೂ ಓದಿ : ದ್ವಿಚಕ್ರ ವಾಹ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ : 17 ಲಕ್ಷ ರೂ. ಮೌಲ್ಯದ ಸೊತ್ತು ವಶ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next