Advertisement

ಶೈಕ್ಷಣಿಕ ವರ್ಷದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಆರಂಭ: ಸಿಎಂ ಪ್ರಮೋದ್ ಸಾವಂತ್

05:32 PM Feb 11, 2023 | Team Udayavani |

ಪಣಜಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬರುವ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿದೆ.  ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ  ರಾಜ್ಯದ ಕಾಲೇಜು ಶಿಕ್ಷಕರಿಗೆ ಐಐಟಿ ಮತ್ತು ಎನ್‍ಐಟಿಗಳ ತಜ್ಞರಿಗೆ ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. ಅಖಿಲ ಭಾರತ ಪ್ರಾಂಶುಪಾಲರ ಸಂಘವು ಗೋವಾದ  ಸಲ್ಗಾಂವ್ಕರ್ ಇನ್ಸ್ಟಿಟ್ಯೂಟ್ ಆಫ್ ಇಂಟನ್ರ್ಯಾಷನಲ್ ಹಾಸ್ಪಿಟಾಲಿಟಿ ಎಜುಕೇಶನ್ ಕಾಲೇಜು ರಾಯ್‍ಯಲ್ಲಿ ಆಯೋಜಿಸಿದ್ದ ಎರಡು ದಿನಗಳ ರಜತ ಮಹೋತ್ಸವ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಹೊಸ ಶಿಕ್ಷಣ ನೀತಿಯು ನವ ಭಾರತವನ್ನು ರಚಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು ಮತ್ತು ಈ ಹೊಸ ನೀತಿಯು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಆಶಿಸಿದರು. ವಿದ್ಯಾರ್ಥಿಗಳಿಗೆ ಕೈಗಾರಿಕಾ ವಲಯದಲ್ಲಿ ಅನುಭವವನ್ನು ನೀಡಲು ಸರ್ಕಾರವು ಕೆಲವು ಉದ್ಯಮ ಗುಂಪುಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕುತ್ತದೆ ಮತ್ತು ಕಾಲೇಜಿನಿಂದ ಪದವಿ ಪಡೆದ ವಿದ್ಯಾರ್ಥಿಯು ಕೇವಲ ಪದವೀಧರನಾಗಿರದೆ ನಿಜವಾದ ತರಬೇತಿಯನ್ನು ಹೇಗೆ ಪಡೆಯುತ್ತಾನೆ ಎಂಬುದರ ಕುರಿತು ಗಮನ ಹರಿಸುತ್ತದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದರು.

ಈ ಸಮ್ಮೇಳನದಲ್ಲಿ ದೇಶಾದ್ಯಂತ 370 ಪ್ರಾಂಶುಪಾಲರು ಭಾಗವಹಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಗೋವಾ ವಿಶ್ವವಿದ್ಯಾನಿಲಯದ ಉಪಕುಲಪತಿ ಹರಿಲಾಲ್ ಮೆನನ್, ಉನ್ನತ ಶಿಕ್ಷಣ ನಿರ್ದೇಶಕ ಪ್ರಸಾದ್ ಲೋಲಾಯೇಕರ್, ಗುಜರಾತ್‍ನ ಜಿಎಲ್‍ಎಸ್ ವಿಶ್ವವಿದ್ಯಾಲಯದ ಅಧ್ಯಕ್ಷ ಸುಧೀರ್ ನಾನಾವತಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಸಂಸ್ಥಾಪಕ ಉಪಕುಲಪತಿ ಪ್ರೊ.ಎಂ.ಕೆ.ಶ್ರೀಧರ್ ಮುಖ್ಯ ಭಾಷಣ ಮಾಡಿದರು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ವಿ.ಎಸ್. ಆರ್.ಎಸ್. ಶಿರಗೂರಕರ ಮತ್ತಿತರ ಗಣ್ಯರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ಗೋವಾ ವಿಭಾಗದ ಅಧ್ಯಕ್ಷ ದಿಲೀಪ್ ಅರೋಲ್ಕರ್ ಅತಿಥಿಗಳನ್ನು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next