ಪಣಜಿ : ಗೋವಾದಲ್ಲಿ ಖಾಯ್ದೆ ಮತ್ತು ಸುವ್ಯವಸ್ಥೆಯ ಗಂಭೀರ ಪ್ರಶ್ನೆ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪಾಲಕರ ಮೇಲೆಯೆ ಜವಾಬ್ದಾರಿ ಹೋರಿಸಿ ಪಾಲಕರ ಮೇಲೆ ಆರೋಪ ಮಾಡಿರುವ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಈ ವಿಷಯದ ಮೇಲೆ ಪ್ರತಿಯೊಂದೂ ತಾಲೂಕಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗೋವಾ ಶಿವಸೇನೆ ಎಚ್ಚರಿಕೆ ನೀಡಿದೆ.
ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಹೇಳಿಕೆಯನ್ನು ಖಂಡಿಸಿ ಪೆಡ್ನೆಯ ಹಳೇಯ ಬಸ್ ನಿಲ್ದಾಣದ ಎದುರು ಇಂದು(ಶುಕ್ರವಾರ, ಆಗಸ್ಟ್ 6) ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ : ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿಐ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 215 ಅಂಕ ಕುಸಿತ
ಈ ಸಂದರ್ಭದಲ್ಲಿ ಶಿವಸೇನೆಯ ಪ್ರಮುಖ ಜಿತೇಶ್ ಕಾಮತ್ ಮಾತನಾಡಿ- ಬಾಣಾವಲಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ರಾಜ್ಯದಲ್ಲಿ ಖಾಯ್ದೆ ಮತ್ತು ಸುಸ್ಯವಸ್ಥೆ ಕುಸಿದಿದೆ. ಇದಕ್ಕೆ ಸರ್ಕಾರವೇ ಜವಾಬ್ದಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಇದಕ್ಕೆ ಪಾಲಕರೇ ಜವಾಬ್ದಾರಿ ಎಂದು ಹೇಳುತ್ತಿದ್ದಾರೆ. ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವ ಮುಖ್ಯಮಂತ್ರಿಗಳು ಕೂಡಲೆ ಕ್ಷಮೆಯಾಚಿಸಬೇಕು ಎಂದು ಶಿವಸೇನೆ ಆಘ್ರಹಿಸಿದೆ.
ಈ ಸಂದರ್ಭದಲ್ಲಿ ಗೋವಾ ರಾಜ್ಯ ಶಿವಸೇನೆಯ ಪ್ರಮುಖ ಸುಭಾಷ ಕೇರಕರ್, ಮಿಲಿಂದ ಗಾವಸ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ವರ್ಕ್ ಫ್ರಮ್ ಹೋಮ್ ಒತ್ತಡ ನಿವಾರಿಸುವ ತನುಮನಕ್ಕೆ ಮಾರಕವಾಗದಿರಲಿ