Advertisement

Panaji: ಭಾಷಾ ಪುರಸ್ಕಾರಗಳಿಂದ ಹೊಸ ಬರಹಗಾರರು ಸ್ಫೂರ್ತಿ ಪಡೆಯಬೇಕು: ಗೋವಾ ಸಿಎಂ

03:22 PM Mar 07, 2024 | Team Udayavani |

ಪಣಜಿ: ಪೋರ್ಚುಗೀಸರ ದಬ್ಬಾಳಿಕೆಯ ಆಳ್ವಿಕೆಯಲ್ಲಿಯೂ ಬರಹಗಾರರು ಧೈರ್ಯದಿಂದ ಬರೆದಿದ್ದಾರೆ. ಏಕೆಂದರೆ ‘ಬರಹಗಾರರು’ ಯಾವಾಗಲೂ ‘ಹೋರಾಟಗಾರರು’. ಹಾಗಾಗಿ ಇಂದಿನ ಭಾಷಾ ಪುರಸ್ಕಾರಗಳಿಂದ ಹೊಸ ಬರಹಗಾರರು ಸ್ಫೂರ್ತಿ ಪಡೆಯಬೇಕು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭಾಷಾ ಸಂರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದರು.

Advertisement

ಸಂಸ್ಕೃತಿ ಭವನದ ವಿವಿಧೋದ್ದೇಶ ಸಭಾಂಗಣದಲ್ಲಿ ಅಧಿಕೃತ ಭಾಷಾ ನಿರ್ದೇಶನಾಲಯದ 2019-20, 2020-21 ಮತ್ತು 2021-22ನೇ ಸಾಲಿನ ಭಾಷಾ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮುಖ್ಯಮಂತ್ರಿಗಳು ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿಕ್ಷಣ ಕ್ಷೇತ್ರದ ಲೇಖಕರು ವಿದ್ಯಾರ್ಥಿಗಳನ್ನು ಓದಲು ಮತ್ತು ಬರೆಯಲು ಪ್ರೇರೇಪಿಸಬೇಕು. ಎಲ್ಲವನ್ನೂ ಸರ್ಕಾರದ ಮೇಲೆ ಬಿಡಬೇಡಿ ಎಂದು ಮುಖ್ಯಮಂತ್ರಿ ಮನವಿ ಮಾಡಿದರು. ಸ್ಟಾಫ್ ಸೆಲೆಕ್ಷನ್ ಕಮಿಷನ್ ಪರೀಕ್ಷೆಯಲ್ಲಿ ಅಧಿಕೃತ ಭಾಷೆಯನ್ನು ಕಡ್ಡಾಯಗೊಳಿಸಿರುವುದು ಉತ್ತಮ ಫಲಿತಾಂಶವನ್ನು ತೋರಿಸಿದೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಭಾಷಾ ನಿರ್ದೇಶನಾಲಯದ ನಿರ್ದೇಶಕ ರಾಜು ಗವಾಸ್, ಉಪನಿರ್ದೇಶಕ ಅನಿಲ್ ಸಾವಂತ್, ಗೋವಾ ಕೊಂಕಣಿ ಅಕಾಡೆಮಿ ಪ್ರಭಾರಿ ಅಧ್ಯಕ್ಷ ವಸಂತ ಭಗವಂತ ಸಾವಂತ್ ಉಪಸ್ಥಿತರಿದ್ದರು.

ಇದನ್ನೂ ಓದಿ: BJP Leader: ಆಮಂತ್ರಣ ಪತ್ರಿಕೆ ನೀಡುವ ನೆಪದಲ್ಲಿ ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ

Advertisement

Udayavani is now on Telegram. Click here to join our channel and stay updated with the latest news.

Next