ಪಣಜಿ : ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಗೋವಾ ರಾಜ್ಯವನ್ನು ಅಭಿವೃದ್ಧಿಪಡಿಸುವ ಧ್ಯೇಯವನ್ನು ನಮ್ಮ ಸರ್ಕಾರ ಇಟ್ಟುಕೊಂಡಿದೆ. ರಾಜ್ಯದಲ್ಲಿ 151 ವಿವಿಧ ಯೋಜನೆಗಳನ್ನು ಆನ್ ಲೈನ್ ಮೂಲಕ ಲಭಿಸುವಂತೆ ಮಾಡಿರುವ ಏಕೈಕ ರಾಜ್ಯ ಗೋವಾ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಇದನ್ನೂ ಓದಿ : ಸಿಎಂ ಬೊಮ್ಮಾಯಿ-ಬಿಎಸ್‌ವೈರಿಂದ ತರಳಬಾಳು ಜಗದ್ಗುರುಗಳ ಭೇಟಿ
ರಾಜ್ಯದ ವಿವಿಧ ಪಂಚಾಯತಿಗಳಲ್ಲಿ ನಿಯುಕ್ತಿಗೊಳಿಸಿದ ಸ್ವಯಂಪೂರ್ಣ ಮಿತ್ರರೊಂದಿಗೆ ವೀಡಿಯೊ ಸಂವಾದ ನಡೆಸಿದ ಸಾವಂತ್, ರಾಜ್ಯದಲ್ಲಿನ 10 ಪಂಚಾಯತಿಗಳ ಪಂಚಾಯತ್ ಅಧ್ಯಕ್ಷರು ಮತ್ತು ಸ್ವಯಂಪೂರ್ಣ ಮಿತ್ರರೊಂದಿಗೆ ಸಪ್ಟೆಂಬರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೊ ಸಂವಾದ ನಡೆಸಲಿದ್ದಾರೆ ಎಂದಿದ್ದಾರೆ.
ರಾಜ್ಯದ ವಿವಿಧ ಊರುಗಳಲ್ಲಿ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸ್ವಯಂಪೂರ್ಣ ಮಿತ್ರರು ಆರಮಭಿಸಿರುವ ಪ್ರಯತ್ನಕ್ಕೆ ನಾನು ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಪಂಚಾಯತಿ ಹಾಗೂ ಸ್ವಯಂಪೂರ್ಣ ಮಿತ್ರರಿಗೆ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಎಥೆನಾಲ್ ಘಟಕ, ಸಕ್ಕರೆ ಉತ್ಪಾದನೆ ಮೂಲಕ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಯೋಜನೆ