Advertisement

ಇತರೆ ಪಕ್ಷಗಳೊಂದಿಗೆ ಮೈತ್ರಿಯ ಪ್ರಶ್ನೆಯೇ ಇಲ್ಲ : ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ತಾನಾವಡೆ

12:29 PM Aug 10, 2021 | Team Udayavani |

ಪಣಜಿ : 2022 ರಲ್ಲಿ ನಡೆಯಲಿರುವ ಗೋವಾ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಚುನಾವಣಾಪೂರ್ವ ಮೈತ್ರಿಯ ಪ್ರಶ್ನೆಯೇ ಇಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಹೇಳಿದ್ದಾರೆ.

Advertisement

ಬಿಜೆಪಿ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ತಾನಾವಡೆ, ಬಿಜೆಪಿಯು ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲಿದೆ. ಗೋವಾ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನಾವು ಬೇರೆ  ಪಕ್ಷ ಅಥವಾ ಮೈತ್ರಿ ಕೂಟದೊಂದಿಗೆ ಕೈಜೋಡಿಸುವ ಮಾತೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ : ಅಧಿಕಾರ ದಾಹದ ಕಚ್ಚಾಟದಲ್ಲಿರುವ ಸರ್ಕಾರ ಸ್ವಾತಂತ್ರ್ಯೋತ್ಸವವನ್ನೂ ಮರೆತಿದೆ: ಕಾಂಗ್ರೆಸ್

ಸದ್ಯಕ್ಕೆ ಮೈತ್ರಿ ವಿಷಯಕ್ಕೆ ಸಂಬಂಧಿಸಿದಂತೆ ನಾನು ಏನನ್ನೂ ಹೇಳಲಾರೆ. ಚುನಾವಣೆಗೆ ಇನ್ನೂ ಸಮಯವಿದೆ. ಗೋವಾ ಬಿಜೆಪಿ ಪ್ರಭಾರಿ ಸಿ.ಟಿ ರವಿ ಯವರು ಆಗಷ್ಟ 17 ಮತ್ತು 18 ರಂದು ಗೋವಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಸದಾನಂದ ತಾನಾವಡೆ ಮಾಹಿತಿ ನೀಡಿದ್ದರು.

ಈ ಸಂದರ್ಭದಲ್ಲಿ ದಕ್ಷಿಣ ಗೋವಾ ಮಾಜಿ ಸಂಸದ ನರೇಂದ್ರ ಸಾವೈಕರ್, ಬಿಜೆಪಿ ಪ್ರಮುಖ ದಾಮು ನಾಯ್ಕ ಉಪಸ್ಥಿತರಿದ್ದರು.

Advertisement

  2017 ರಲ್ಲಿ ಸರ್ಕಾರ ರಚಿಸಿದ ಬಿಜೆಪಿ :

2017 ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 13 ಸ್ಥಾನ ಪಡೆದುಕೊಂಡಿದ್ದ ಬಿಜೆಪಿ ವಿರೋಧ ಪಕ್ಷವಾದ ಕಾಂಗ್ರೇಸ್ ಮತ್ತು ಪ್ರಾದೇಶಿಕ ಪಕ್ಷವನ್ನು ವಿಭಜಿಸುವಲ್ಲಿ ಯಶಸ್ವಿಯಾಗಿತ್ತು. ನಂತರ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ಬಿಜೆಪಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. 2017 ರಲ್ಲಿ ದಿ. ಮನೋಹರ್ ಪರೀಕರ್ ನೇತೃತ್ವದಲ್ಲಿ ಬಿಜೆಪಿಯು ಮೈತ್ರಿ ಸರ್ಕಾರ ರಚಿಸಲು ಗೋವಾ ಫೊರ್‍ ವರ್ಡ್, ಎಂಜಿಪಿ ಮತ್ತು ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚನೆ ಮಾಡಲಾಗಿತ್ತು.

ಇದನ್ನೂ ಓದಿ : ನೆಗೆಟಿವ್ ಟ್ರೆಂಡ್ ನಡುವೆ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 257 ಅಂಕ ಜಿಗಿತ, ನಿಫ್ಟಿ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next