Advertisement

Goa ‘ಅಟಲ್ ಸೇತು’ಭ್ರಷ್ಟಾಚಾರದ ಸಂಕೇತ : Congress ವಾಗ್ದಾಳಿ

07:03 PM Apr 06, 2023 | Team Udayavani |

ಪಣಜಿ: ಮಾಂಡವಿ ನದಿಯ ಮೂರನೇ ಸೇತುವೆ ‘ಅಟಲ್ ಸೇತು’ ಭ್ರಷ್ಟಾಚಾರದ ಸಂಕೇತವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ವಕ್ತಾರ ತುಲಿಯೊ ಡಿಸೋಜಾ, ಪಣಜಿ ಸ್ಮಾರ್ಟ್ ಸಿಟಿಯನ್ನು ಭ್ರಷ್ಟಾಚಾರದಲ್ಲಿ ಭಾಗಿಯಾಗಿಸುವುದು ಬೇಡ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಡಾ.ಪ್ರಮೋದ ಸಲಗಾಂವಕರ, ಜಿಲ್ಲಾಧ್ಯಕ್ಷ ವೀರೇಂದ್ರ ಶಿರೋಡಕರ, ಕಾರ್ಯದರ್ಶಿ ವರದ ಮರ್ಡೋಳಕರ ಉಪಸ್ಥಿತರಿದ್ದರು.

ಅಟಲ್ ಸೇತು ನಿರ್ಮಾಣಗೊಂಡು ಐದು ವರ್ಷಗಳು ಪೂರ್ಣಗೊಂಡಿಲ್ಲ. ದುರಸ್ತಿಗಾಗಿ ಸೇತುವೆಯನ್ನು ಆಗಾಗ್ಗೆ ಮುಚ್ಚಲಾಗುತ್ತದೆ. ಇದು ಭ್ರಷ್ಟಾಚಾರ ಹೇಗೆ ತಾಂಡವವಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಮತ್ತು ಈಗ ಪಣಜಿ ಸ್ಮಾರ್ಟ್ ಸಿಟಿಯ ಕಾಮಗಾರಿಯೂ ಅದೇ ಭ್ರಷ್ಟಾಚಾರದ ಹಾದಿಯಲ್ಲಿ ಸಾಗುತ್ತಿದೆ ಎಂದು ತುಲಿಯೊ ಆರೋಪಿಸಿದ್ದಾರೆ.

ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸರ್ಕಾರದಿಂದ ಜನರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಪಣಜಿಯಲ್ಲಿ ಸ್ಮಾರ್ಟ ಸಿಟಿ ಹೆಸನಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು ಹಲವು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಪಣಜಿಯಲ್ಲಿ ಓಡಾಟ ನಡೆಸಲು ಜನರು ಪರದಾಡುವಂತಾಗಿದೆ ಎಂದು ಕಾಂಗ್ರೇಸ್ ವಕ್ತಾರ ತುಲಿಯೋ ಡಿಸೋಜಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next