Advertisement
ಗೋವಾದ ಫೋಂಡಾದಲ್ಲಿ ನಡೆದ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಸಮಾರೋಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1000 ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸುವ ಗುರಿಯನ್ನು ಹೊಂದಲಾಗಿದೆ. ಜತೆಗೆ ದಿ ಕೇರಳ ಸ್ಟೋರಿ ಚಲನಚಿತ್ರದ ನಂತರ ದೇಶಾದ್ಯಂತ ಲವ್ ಜಿಹಾದ್ ನ ಭೀಕರತೆಯನ್ನು ತೋರಿಸುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಸಮಯದಲ್ಲಿ ಹಿಂದೂ ಹೆಣ್ಣುಮಕ್ಕಳು ಹಾಗೂ ಅವರ ಪೋಷಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯ ಇರುವುದರಿಂದ ಲವ್ ಜಿಹಾದ್ ವಿರುದ್ಧ ವರ್ಷವಿಡೀ ಅಭಿಯಾನ ನಡೆಸಲಾಗುವುದು. ಅಲ್ಲದೆ ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಹಿಂದೂಹಿತಾಸಕ್ತಿಯ ಉಪಕ್ರಮಗಳನ್ನು ಚುರುಕುಗೊಳಿಸಲು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸಿ ದೇಶಾದ್ಯಂತ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
Related Articles
Advertisement
1. ಭಾರತದ ಬಹುಸಂಖ್ಯಾತ ಹಿಂದೂಗಳಿಗೆ ನ್ಯಾಯ ಕೊಡಿಸಲು ಸಂವಿಧಾನದಿಂದ ಸೆಕ್ಯುಲರ್ ಮತ್ತು ಸೋಶಿಯಾಲಿಸ್ಟ್ ಪದಗಳನ್ನು ಅಳಿಸಿ ಅಲ್ಲಿ ಸ್ಪಿರಿಚ್ಯುವಲ್ ಪದಗಳನ್ನು ಸೇರಿಸಬೇಕು ಮತ್ತು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು.2. ನೇಪಾಳವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು, ನೇಪಾಳದಲ್ಲಿರುವ ಹಿಂದೂಗಳ ಬೇಡಿಕೆಯನ್ನು ಈ ಅಧಿವೇಶನವು ಸಂಪೂರ್ಣವಾಗಿ ಬೆಂಬಲಿಸುತ್ತದೆ.
3. ದೇಶಾದ್ಯಂತ ಶ್ರದ್ಧಾ ವಾಲಕರ್, ಸಾಕ್ಷಿ, ಅನುಪಮಾ ಈ ರೀತಿಯ ಅನೇಕ ಹಿಂದೂ ಹುಡುಗಿಯರನ್ನು ಲವ್ ಜಿಹಾದಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಈ ಸಮಸ್ಯೆಗೆ ಪರಿಹಾರವೆಂದು, ದೇಶದ ಮಟ್ಟದಲ್ಲಿ ಕಟ್ಟುನಿಟ್ಟಾದ ಲವ್ ಜಿಹಾದ್ ವಿರೋಧಿ ಕಾನೂನು ಮಾಡಬೇಕು, ಅದೇ ರೀತಿ ಪ್ರತಿ ವರ್ಷವೂ ಪ್ರತಿ ರಾಜ್ಯದಿಂದ ಸಾವಿರಾರು ಹುಡುಗಿಯರು ಮತ್ತು ಮಹಿಳೆಯರು ಕಣ್ಮರೆಯಾಗುತ್ತಿದ್ದಾರೆ. ಇದರ ಹಿಂದೆ ಷಡ್ಯಂತ್ರ ಇದೆಯೇ ಎಂಬುದನ್ನು ಪತ್ತೆ ಹಚ್ಚಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
4. ಹಿಂದೂಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991 ಮತ್ತು ವಕ್ಫ್ ಕಾಯಿದೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಕಾಶಿ, ಮಥುರಾ, ತಾಜಮಹಲ್, ಭೋಜಶಾಲಾ ಮುಂತಾದ ಮೊಘಲ್ ಆಕ್ರಮಣಕಾರರಿಂದ ಸಾವಿರಾರು ದೇವಾಲಯಗಳು ಮತ್ತು ಭೂಮಿಯನ್ನು ವಶಪಡಿಸಿಕೊಳ್ಳಬೇಕು. ಹಿಂದೂಗಳಿಗೆ ಹಸ್ತಾಂತರಿಸಬೇಕು.
5. ದೇಶದಾದ್ಯಂತ ಸರಕಾರದ ನಿಯಂತ್ರಣದಲ್ಲಿರುವ ಎಲ್ಲಾ ದೇವಾಲಯಗಳನ್ನು ಸರಕಾರಿಕಣದಿಂದ ಮುಕ್ತಗೊಳಿಸಿ ಭಕ್ತರಿಗೆ ಹಸ್ತಾಂತರಿಸಬೇಕು ಮತ್ತು ದೇವಾಲಯಕ್ಕಾಗಿ ಹಿಂದೂ ಬೋರ್ಡ್‍ಅನ್ನು ಸ್ಥಾಪಿಸಿ ಅದರಲ್ಲಿ ಶಂಕರಾಚಾರ್ಯರು, ಧರ್ಮಾಚಾರ್ಯರು, ಭಕ್ತರು, ಪುರೋಹಿತರು, ಧರ್ಮನಿಷ್ಠ ನ್ಯಾಯಾಧೀಶರು ಮತ್ತು ವಕೀಲರನ್ನು ಸೇರಿಸಬೇಕು.
6. ಕೇಂದ್ರ ಸರಕಾರವು ದೇಶಾದ್ಯಂತ ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾನೂನುಗಳನ್ನು ಜಾರಿಗೊಳಿಸಬೇಕು.
7. ಸುಮಾರು 700 ಕ್ಕೂ ಹೆಚ್ಚು ಭಯೋತ್ಪಾದಕರಿಗೆ ಕಾನೂನು ನೆರವು ನೀಡುತ್ತಿರುವ ಜಮಿಯತ್-ಎ-ಉಲೇಮಾ ಹಿಂದ್ ಈ ಸಂಘಟನೆಗೆ ಕೇಂದ್ರ ಸರಕಾರವು ಇತ್ತೀಚೆಗೆ ಹಲಾಲ್ ಮಾಂಸದ ಪ್ರಮಾಣೀಕರಣವನ್ನು ಪಡೆಯಲು ಅನುಮತಿ ನೀಡಿದೆ. ಈ ಅನುಮತಿಯನ್ನು ತಕ್ಷಣವೇ ಹಿಂಪಡೆಯಬೇಕು, ಹಾಗೆಯೇ ಭಾರತದಲ್ಲಿ ಎಫ್.ಎಸ್.ಎಸ್.ಎ.ಐ. ಮತ್ತು ಎಫ್.ಡಿ.ಎ. ನಂತಹ ಸರಕಾರಿ ಸಂಸ್ಥೆಗಳಿರುವಾಗ ಧಾರ್ಮಿಕ ಆಧಾರದ ಮೇಲೆ ಸಮಾನಾಂತರ ಆರ್ಥಿಕತೆಯನ್ನು ನಿರ್ಮಿಸುವ ಹಲಾಲ್ ಸರ್ಟಿಫಿಕೇಶನ್ ಕೂಡಲೇ ನಿಲ್ಲಿಸಬೇಕು.
8. ಕಾಶ್ಮೀರ ಕಣಿವೆಯಲ್ಲಿ ಪನೂನ್ ಕಾಶ್ಮೀರ ಈ ಕೇಂದ್ರಾಡಳಿತ ಪ್ರದೇಶವನ್ನು ನಿರ್ಮಿಸುವುದು ಮತ್ತು ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳನ್ನು ಅಲ್ಲಿ ಪುನರ್ವಸತಿ ಮಾಡುವುದು.
9. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಮತ್ತು ಭಾರತ ಸರಕಾರದಿಂದ ತನಿಖೆ ನಡೆಸಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಭದ್ರತೆ ಒದಗಿಸಬೇಕು.
10. ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ಗಡಿಪಾರು ಮಾಡಲು ಸರಕಾರ ಕಠಿಣ ಕಾನೂನನ್ನು ಮಾಡಬೇಕು. ಸಿ.ಎ.ಎ. (ಪೌರತ್ವ ಸುಧಾರಣೆ) ಕಾಯಿದೆಯನ್ನು ಕೂಡಲೇ ಜಾರಿಗೊಳಿಸಬೇಕು.
11. ಕಳೆದ ಕೆಲವು ವರ್ಷಗಳಲ್ಲಿ ಹಿಂದೂಯೇತರ ಜನಸಂಖ್ಯೆಯ ಸ್ಫೋಟವನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಧರ್ಮಗಳ ಜನಸಂಖ್ಯೆಯನ್ನು ಸಮತೋಲನಗೊಳಿಸಲು ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರಬೇಕು.
12. ಮಣಿಪುರದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರಕಾರವು ಅವರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಹಿಂದೂಗಳಿಗೆ ಶಾಶ್ವತ ಭದ್ರತೆಯನ್ನು ಒದಗಿಸಬೇಕು.