Advertisement

“ಗೋ ಸ್ವದೇಶಿ’ವಸ್ತ್ರಮೇಳ

03:19 PM Jun 09, 2018 | |

ದೇಶದಲ್ಲಿನ ಸಂಸ್ಕೃತಿ, ಆಚಾರ ವಿಚಾರಗಳು ಕೆಲವೇ ಕಿ.ಮೀ ವ್ಯಾಪ್ತಿಯ ದೂರಕ್ಕೆ ಬದಲಾಗುತ್ತಿರುತ್ತದೆ. ವೈವಿಧ್ಯಮಯ ದೇಶವೆಂದು ಹೇಳುವುದು ಸುಮ್ಮನೇ ಅಲ್ಲ. ವಿವಿಧತೆಯಲ್ಲಿ ಏಕತೆ ಎಂಬ ಮಾತನ್ನು ನಿಜವಾಗಿಸುವ ಮೇಳವೊಂದು ನಗರದಲ್ಲಿ ನಡೆಯುತ್ತಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಒರಿಸ್ಸಾ, ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳ ವಸ್ತ್ರ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಈ ಮೇಳದಲ್ಲಿ ನಡೆಯಲಿದೆ. 

Advertisement

ಈ ಮೇಳದ ವೈಶಿಷ್ಟéತೆ ಎಂದರೆ ಇದು ಸಂಪೂರ್ಣ ಸ್ವದೇಶಿ ಎಂಬುದು. ಇಳಕಲ್‌ ಸೀರೆ, ಬಂಗಾಳದ ಜಾಮಾªನಿ ಸೀರೆ ಮತ್ತು ತಂಗೈಲ್‌ ಸೀರೆ ಇನ್ನೂ ಹತ್ತು ಹಲವು ಬಗೆಯ ಸೀರೆಗಳನ್ನು ಗ್ರಾಹಕರು ಇಲ್ಲಿ ಖರೀದಿಸಬಹುದು. ನಮ್ಮ ದೇಶದ ನೇಕಾರರ ಕುಶಲತೆಯನ್ನು ತಿಳಿಯಲಾದರೂ ಈ ಮೇàಳಕ್ಕೆ ಭೇಟಿ ನೀಡಬಹುದು. “ಗೋ ಸ್ವದೇಶಿ’ ಮೇಳವನ್ನು ಗೋ ಕೂಪ್‌ ಸಂಸ್ಥೆ ಆಯೋಜಿಸಿದೆ. ಮೇಳದಲ್ಲಿ ಬ್ಯಾಗುಗಳು, ದುಪಟ್ಟಾಗಳು ಮತ್ತು ಗೃಹಾಲಂಕಾರಿ ವಸ್ತುಗಳನ್ನೂ ಕೊಳ್ಳಬಹುದು.

ಎಲ್ಲಿ?: ಶಿಲ್ಪಕಲಾ ಮಂಟಪ, 9ನೇ ಕ್ರಾಸ್‌, ಜೆ.ಪಿ.ನಗರ 3ನೇ ಹಂತ
ಯಾವಾಗ?: ಜೂನ್‌ 9- 10, ಬೆಳಗ್ಗೆ 11- ರಾತ್ರಿ 9

Advertisement

Udayavani is now on Telegram. Click here to join our channel and stay updated with the latest news.

Next