ಮುಂಬಯಿ, ಜೂ. 23: ದೇಶದ ಎಲ್ ಐಸಿ ಹೊಸ ಕೇಂದ್ರೀಕೃತ ವೆಬ್ ಆಧಾರಿತ ಕಾರ್ಯವನ್ನು ಪ್ರಾರಂಭಿಸುವ ಮೂಲಕ ಮತ್ತೂಂದು ಮೈಲಿಗಲ್ಲು ಸ್ಥಾಪಿಸಿದೆ. ಅದರ ಗುಂಪು ವ್ಯವಹಾರ ಕಾರ್ಯಾಚರಣೆಗಳಿಗಾಗಿ ನ್ಯೂ ಸೆಂಟ್ರಲೈಸ್ಡ್ ವೆಬ್-ಬೇಸೆಡ್-ವರ್ಕ್ ಫ್ಲೊ-ಬೇಸ್ಡ್ ಐಟಿ ಪ್ಲಾಟ್‌ಫಾರ್ಮ್ ಅನ್ನು ಸ್ಥಾಪಿಸಲಾಗಿದ್ದು, ಎಲ್‌ಐಸಿ ಕಾರ್ಯಾಧ್ಯಕ್ಷ ಎಂ. ಆರ್. ಕುಮಾರ್ ಜೂ. 22ರಂದು ಔಪಚಾರಿಕ ಸಮಾರಂಭದಲ್ಲಿ ಗೋ-ಲೈವ್ ಆಫ್ ಪ್ರಾಜೆಕ್ಟ್ ಇ-ಪಿಜಿಎಸ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಂಬಯಿಯ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ವಿಪಿನ್ ಆನಂದ್, ಮುಖೇಶ್ ಗುಪ್ತಾ, ರಾಜ್ ಕುಮಾರ್ ಮತ್ತು ಎಸ್. ಮೊಹಂತಿ ಉಪಸ್ಥಿತರಿದ್ದರು. ಐಡಿಬಿಐ ಬ್ಯಾಂಕ್‌ನ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಕೇಶ್ ಶರ್ಮಾ ಅವರು ಮೊದಲ ಡಿಜಿಟಲ್ ರಶೀದಿಯನ್ನು ಪಡೆದರು.
ಎಂ. ಆರ್. ಕುಮಾರ್ ಮುಂದಾಳತ್ವದಲ್ಲಿ ನಡೆದ ಸಮಾರಂಭದಲ್ಲಿ ಟೆಕ್ ಮಹೀಂದ್ರಾ ಇದರ ಮುಖ್ಯಸ್ಥ ಸುಜಿತ್ ಬಕ್ಷಿ, ಐಸಿಐಸಿಐ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ವಿಶಾಖಾ ಲಿಮಾಯೆ ಹಾಗೂ ಬ್ಯಾಂಕ್‌ನ ತಂಡಗಳು ಭಾಗವಹಿಸಿದ್ದವು. ದೇಶದ ವಿವಿಧ ವಲಯದಾದ್ಯಂತದ 204 ಸ್ಥಳಗಳಿಂದ ಎಲ್ಲ ವಲಯ ವ್ಯವಸ್ಥಾಪಕರು, ಕೇಂದ್ರ ಕಚೇರಿಯ ಉಸ್ತುವಾರಿ ಕಾರ್ಯನಿರ್ವಾಹಕ ನಿರ್ದೇಶಕರು, ಇಲಾಖೆಗಳು, ಪ್ರಾದೇಶಿಕ ವ್ಯವಸ್ಥಾಪಕರು, ಘಟಕ ಮುಖ್ಯಸ್ಥರು ಮತ್ತು ಎಲ್‌ಐಸಿಯ ಗ್ರೂಪ್ ಬಿಸಿನೆಸ್‌ನ ಎಲ್ಲ ಉದ್ಯೋಗಿಗಳು ಆನ್‌ಲೈನ್ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಭಾರತದ ಹೊಸ ತಂತ್ರಜ್ಞಾನ ವೇದಿಕೆಯನ್ನು ಕೇಂದ್ರೀಕೃತ ಸಂಗ್ರಹ ಮತ್ತು ಪಾವತಿಗಾಗಿ ವಿನ್ಯಾಸಗೊಳಿಸಲಾಗಿದೆ. ಸ್ವಯಂಚಾಲಿತ ಸಾಮರಸ್ಯದೊಂದಿಗೆ ತಡೆರಹಿತ ಮತ್ತು ಸಂಯೋಜಿತ ಬ್ಯಾಂಕಿಂಗ್‌ನ ನವೀನ ಲಕ್ಷಣಗಳೊಂದಿಗೆ ಸಿಸ್ಟಮ… ಇ-ಪಿಜಿಎಸ್ ಗ್ರಾಹಕರ ಮೂಲಕ ಸಮಗ್ರ ಸ್ವಯಂ ಸೇವೆಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.
ಕಾರ್ಪೊರೇಟ್ ಗ್ರಾಹಕರು ತಮ್ಮ ಡೇಟಾವನ್ನು ವೀಕ್ಷಿಸಲು, ಕ್ರಿಯಾತ್ಮಕ ಪ್ರಕ್ರಿಯೆಗಳನ್ನು ಪ್ರಾರಂಭಿಸಲು, ಲಾಡ್ಜ್ ಮಾಡಲು ಇದರಿಂದ ಸಾಧ್ಯವಾಗುತ್ತದೆ. ವಿವಿಧ ಗುಂಪು ಧನಸಹಾಯ ಯೋಜನೆಗಳನ್ನು ವೀಕ್ಷಿಸಲು, ನೈಜ ಸಮಯದ ಆಧಾರದ ಮೇಲೆ ಖಾತೆಗಳು, ನಿಧಿಯ ಸ್ಥಾನವನ್ನು ಅರಿಯಬಹುದು. ಅಲ್ಲದೆ ವಿವಿಧ ಎಲ್ಲ ವೈಶಿಷ್ಟ್ಯಗಳು ಮತ್ತು ಸೇವೆಗಳನ್ನು ಮುಂದಿನ ಮೂರು ತಿಂಗಳುಗಳಲ್ಲಿ ಹಂತಹಂತವಾಗಿ ಪ್ರಾರಂಭಿಸಲಾಗುವುದು. ಹೊಸ ತಂತ್ರಜ್ಞಾನ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದ್ದು, ತಂತ್ರಜ್ಞಾನವು ತೀವ್ರವಾದ ಕಾರ್ಪೊರೇಟ್ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುತ್ತದೆ.
ಗುಂಪು ವ್ಯವಹಾರ ವೇದಿಕೆಯಲ್ಲಿ ಗ್ರಾಹಕರ ಸೇವೆ, ಹೊಸ ವ್ಯವಸ್ಥೆಯು ಉನ್ನತ ಮಟ್ಟದ ಏಕೀಕರಣಕ್ಕೆ ಸಮರ್ಥವಾಗಿದೆ. ಡೇಟಾ ಮತ್ತು ಸೇವೆಗಳ ತಡೆರಹಿತ ವರ್ಗಾವಣೆಗಾಗಿ ಗ್ರಾಹಕರ ತಂತ್ರಜ್ಞಾನ ವ್ಯವಸ್ಥೆಗಳೊಂದಿಗೆ ಹೊಸ ಅವಿಷ್ಕಾರ ವೇದಿಕೆಯಾಗಿದೆ. ಹೊಸ ಐಟಿ ಸಿಸ್ಟಮ್ ಸಾಮರ್ಥ್ಯಗಳಿಗಾಗಿ ಗ್ರಾಹಕರ ಜಾಗೃತಿ ಅಭಿಯಾನವು ಪ್ರಯೋಜನಗಳನ್ನು ಪಡೆಯಬಹುದು. ಎಲ್ಲ ಗ್ರಾಹಕರು ಸಮಯ ಮತ್ತು ಶಕ್ತಿಯನ್ನು ಉಳಿಸಲು ಇದರಿಂದ ಸಾಧ್ಯವಾಗಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ವಿಪಿನ್ ಆನಂದ್ ಮಾಹಿತಿ ನೀಡಿ ಶುಭ ಹಾರೈಸಿದರು.
ಜೀವ ವಿಮಾ ಉದ್ಯಮದ ಗುಂಪು ವ್ಯವಹಾರದಲ್ಲಿ ಶೇ. 77.69ರಷ್ಟು ಪಾಲನ್ನು ಹೊಂದಿರುವ ನಿಗಮ, ವಿಶ್ವದರ್ಜೆಯ ಮಟ್ಟದಲ್ಲಿ ಗ್ರಾಹಕರ ಅನುಭವವನ್ನು ಹೆಚ್ಚಿಸಲು ಹೊಸ ಐಟಿ ಪ್ಲಾಟ್‌ಫಾರ್ಮ್ ಅನ್ನು ನಿಯಂತ್ರಿಸುತ್ತದೆ. ಗುಂಪು ವ್ಯವಹಾರ ಕಾರ್ಯಾಚರಣೆಗಳ ಮಾರ್ಕೆಟಿಂಗ್ ಮತ್ತು ಸೇವೆಗಳಲ್ಲಿ ಇದು ಬೆಂಬಲಿಸುತ್ತದೆ. ಗುಂಪು ವ್ಯವಹಾರ ಎಲ… ಐಸಿಯ ವಿವಿಧ ಅವಧಿಯ ವಿಮಾ ಅಗತ್ಯಗಳನ್ನು ಮತ್ತು ನಿವೃತ್ತಿ ಪರಿಹಾರಗಳನ್ನು ವಿಶೇಷವಾಗಿ ಪೂರೈಸುತ್ತದೆ. ಹೊಸ ಐಟಿ ಪ್ಲಾಟ್‌ಫಾರ್ಮ್ ನ ಹೊಸ ಯುಗದ ಆರಂಭವಾಗಿದೆ ಎಂದು ಭಾವಿಸಲಾಗಿದೆ ಎಂದು ಗ್ರೂಪ್ ಬಿಸಿನೆಸ್ ಕಾರ್ಯನಿರ್ವಾಹಕ ನಿರ್ದೇಶಕ ಕೆ. ಎಸ್. ನಾಗ್ನಾಲ್ ಮಾಹಿತಿ ನೀಡಿದರು.