Advertisement
ಭಾರತೀಯ ಜನತಾ ಪಾರ್ಟಿಯ ಕೂಳೂರು ಶಕ್ತಿ ಕೇಂದ್ರದ ಅಧ್ಯಕ್ಷ, ಸ್ಥಳೀಯ ನಾಗರಿಕ ಹಿತರಕ್ಷಣ ಸಮಿತಿ ಸಂಚಾಲಕ ಗಂಗಾರಿ ಗುರುಚಂದ್ರ ಹೆಗ್ಡೆಯವರು ಇದರ ಹಿಂದಿನ ಚಾಲನಾ ಶಕ್ತಿ.
55ರ ವಯಸ್ಸಿನ ಇವರು, ಪತ್ನಿ, ಇಬ್ಬರು ಗಂಡು ಮಕ್ಕಳೊಂದಿಗೆ ಕೂಳೂರಿನಲ್ಲಿ ಸ್ವಂತ ಮನೆ ಕಟ್ಟಿ ನೆಮ್ಮದಿಯ ಬದುಕು ಕಂಡವರು. ನಂದನವನವಾದ ಕಥೆ
ತನ್ನ ಕಚೇರಿಯ ಎದುರಿಗೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಫ್ಲೈ ಓವರ್ ಕೆಳಗಿರುವ ಖಾಲಿ ಜಾಗದಲ್ಲಿ ಭಿಕ್ಷುಕರು, ಗೂಡಂಗಡಿಗಳು, ಪಾನಿಪುರಿ ಅಂಗಡಿಗಳು, ಫಾಸ್ಟ್ ಫುಡ್ ಬಿಡಾರಗಳು ಬೀಡು ಬಿಟ್ಟಿದ್ದವು. ಅವುಗಳ ಕೊಳಚೆ ನೀರು, ತ್ಯಾಜ್ಯ ವಸ್ತುಗಳಿಂದ ಬೀದಿ ನಾಯಿಗಳ ರಂಪಾಟ, ನೊಣ- ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಪರಿಣಮಿಸಿತ್ತು. ಇದರಿಂದ ಮುಕ್ತಿ ಕಾಣಲು ಊರವರ ಸಹಕಾರ ಪಡೆದು, ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಗಿಟ್ಟಿಸಿಕೊಂಡು ಉದ್ಯಾನ ನಿರ್ಮಾಣಕ್ಕೆ ಮುಂದಾದರು. ಒಟ್ಟೂ 4.50 ಲಕ್ಷ ರೂ. ಪೈಕಿ ಊರವರಿಂದ 1.10 ಲಕ್ಷ ರೂ. ದೇಣಿಗೆ ರೂಪದಲ್ಲಿ ಬಂದಿತು. ಉಳಿದದ್ದನ್ನು ತಾವೇ ಭರಿಸಿ ಸುಮಾರು 1800 ಚದರಡಿ ಜಾಗಕ್ಕೆ 3 ಕಡೆ 5 ಅಡಿ ಅಗಲದ ಇಂಟರ್‌ಲಾಕ್ ನಿರ್ಮಿಸಿದರು. ಫ್ಲೈ ಓವರ್ ಅಡಿಭಾಗದ ಇಡೀ ಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಲಾಯಿತು. ಹತ್ತು ಹಲವು ಬಗೆಯ ಬೊನ್ಸಾಯಿ ತಳಿಯ 30 ಗಿಡಗಳನ್ನು ನೆಟ್ಟು, ಬಣ್ಣಗಳಿಂದ ಆಕರ್ಷಕ ಕಲಾಕೃತಿ ರಚಿಸಿ ಮಾದರಿ ಉದ್ಯಾನ ರೂಪಿಸಲಾಯಿತು. ದಿನಾ ಬೆಳಿಗ್ಗೆ 5.30ಕ್ಕೆ ಬಂದು ಗಿಡಗಳಿಗೆ ನೀರುಣಿಸಿ ತಮ್ಮ ಮಕ್ಕಳಂತೆ ಪೋಷಿಸಿದರು. ಇದನ್ನು ಕಂಡು ಖಾಸಗಿ ಚಾನೆಲ್ ವೊಂದು ಪಬ್ಲಿಕ್ ಹೀರೋ ಎಂದು ಬಿಂಬಿಸಿತು.
Related Articles
Advertisement
ಮಾರ್ಗದರ್ಶನ ನೀಡುವೆನನ್ನ ಆತ್ಮ ತೃಪ್ತಿಗಾಗಿ ಮಾಡಿದ ಕಾರ್ಯವಿದು.ಇದನ್ನು ಸಮಾಜ ಗುರುತಿಸಿರುವುದು ಸಂತೋಷ ತಂದಿದೆ. ಈ ಕಾರ್ಯವನ್ನು ಆರ್ಥಿಕವಾಗಿ ಸ್ವಯಂ ಆಗಿ ಮುಂದುವರಿಸಲು ಸಾಧ್ಯವಿಲ್ಲ. ಸರಕಾರ,ಹೆದ್ದಾರಿ ಪ್ರಾಧಿಕಾರ,ಸ್ಥಳೀಯ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಮುಂದಾದಲ್ಲಿ ಮಾರ್ಗದರ್ಶನ ನೀಡುವೆ. ಹತ್ತು ಹಲವು ಸೇತುವೆಗಳ ಕೆಳಭಾಗ ನೈರ್ಮಲ್ಯ ಕಾಪಾಡಲು ಇದಕ್ಕಿಂತ ಒಳ್ಳೆಯ ಉಪಾಯ ಬೇರೊಂದಿಲ್ಲ. ಮಂಗಳೂರು ಸ್ಮಾರ್ಟ್ ಸಿಟಿಗೆ ಪೂರಕವಾಗಿ ಸ್ಮಾರ್ಟ್ ಪರಿಸರವನ್ನು ರೂಪಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
– ಗುರುಚಂದ್ರ ಹೆಗ್ಡೆ ಗಂಗಾರಿ