Advertisement
ಹಲ್ಲುಜ್ಜುವ ಬ್ರಶ್‌ಗಳು ಮತ್ತು ಟೂತ್‌ಪೇಸ್ಟ್ ಗಳನ್ನು ಆವಿಷ್ಕರಿಸುವುದಕ್ಕೆ ಮುನ್ನ ಜನರು ಒರಟು ಬಟ್ಟೆಗಳು, ಉಪ್ಪು, ಗಿಡಗಂಟಿಗಳ ಕಡ್ಡಿಗಳು ಅಥವಾ ಇದ್ದಿಲನ್ನು ಹಲ್ಲುಜ್ಜಲು ಉಪಯೋಗಿಸುತ್ತಿದ್ದರು. ಹಲ್ಲುಜ್ಜುವ ವ್ಯವಸ್ಥೆಗಳು, ಸಾಧನಗಳು ಮತ್ತು ಪೇಸ್ಟ್‌ಗಳು ಆವಿಷ್ಕಾರಗೊಂಡಿದ್ದು, ದಂತಗಳ ನೈರ್ಮಲ್ಯಕ್ಕೆ ಅನೇಕ ಬಗೆಯ ಪರ್ಯಾಯಗಳು ಲಭ್ಯವಿವೆ.
Related Articles
Advertisement
ಬಿದಿರಿನಿಂದ ಮಾಡಿರುವ ಹಲ್ಲುಜ್ಜುವ ಬ್ರಶ್‌ಗಳ ಕೆಲವು ಪ್ರಯೋಜನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
ಬಿದಿರಿನಲ್ಲಿ ಫಂಗಸ್‌ನಿರೋಧಕ ಗುಣವೂ ಇದೆ. ಬಿದಿರು ಮತ್ತು ಮರದಿಂದ ಕಟ್ಟಿಂಗ್ ಬೋರ್ಡ್ ಮತ್ತು ಪಾತ್ರೆಗಳನ್ನು ನಿರ್ಮಿಸುವುದಕ್ಕೆ ಒಂದು ಉದ್ದೇಶವಿರುತ್ತದೆ. ಬಿದಿರಿನ ಅಂತರ್ಗತ ಗುಣಗಳು ಅದರ ಮೇಲ್ಮೈಯನ್ನು ಪ್ರವೇಶಿಸುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವಂತಿವೆ. ಇದರಿಂದಾಗಿ ಸೂಕ್ಷ್ಮಜೀವಿಗಳಿಂದ ದೀರ್ಘಾವಧಿಯಲ್ಲಿ ರಕ್ಷಣೆ ಸಿಗುತ್ತದೆ.
ಬಿದಿರು ಒಂದು ಹುಲ್ಲಿನ ಜಾತಿಯ ಸಸ್ಯವಾದ್ದರಿಂದ ಇದನ್ನು ಎಲ್ಲಿ ಬೇಕಾದರಲ್ಲಿ ಪರಿಸರಕ್ಕೆ ಧಕ್ಕೆ ಉಂಟು ಮಾಡದೆಯೇ ಬೆಳೆಸಬಹು ದಾಗಿದೆ. ಇದರ ಕಾಂಡಗಳು ಕ್ಷಿಪ್ರವಾಗಿ ಬೆಳೆಯುತ್ತವೆ ಮತ್ತು ಅವುಗ ಳಿಗೆ ಯಾವುದೇ ರಸಗೊಬ್ಬರ ಅಥವಾ ಕೀಟನಾಶಕ ಬೇಕಾಗಿಲ್ಲ.
ಬಿದಿರು ಸಂಪೂರ್ಣವಾಗಿ ನೈಸರ್ಗಿಕ ವಾತಾವರಣದಲ್ಲಿ ಬೆಳೆಯುತ್ತದದಾದ್ದರಿಂದ ಅದು ಬಳಕೆಗೆ ಸಂಪೂರ್ಣ ಸುರಕ್ಷಿತ. ಬಿದಿರನ ಕಾಂಡಗಳನ್ನು ಕತ್ತರಿಸುವಲ್ಲಿ ಅಥವಾ ಸಂಸ್ಕರಿಸುವಲ್ಲಿ ಯಾವುದೇ ವಿಷಕಾರಿ ಸಂಯುಕ್ತಗಳನ್ನು ಬಳಸುವುದಿಲ್ಲ. ಏಶ್ಯಾ ಮತ್ತು ಆಫ್ರಿಕಾದ ಹಲವು ಪ್ರದೇಶಗಳು ಮತ್ತು ಸಂಸ್ಕೃತಿಗಳಲ್ಲಿ ಬಿದಿರಿನ ಮೊಳಕೆ ಅಥವಾ “ಕಣಿಲೆ’ ಖಾದ್ಯವಾಗಿ ಬಳಕೆಯಾಗುತ್ತದೆ.
ಬಿದಿರಿನಿಂದ ಮಾಡಿರುವ ಹಲ್ಲುಜ್ಜುವ ಬ್ರಶ್‌ಗಳು ಪ್ಲಾಸ್ಟಿಕ್ ಬ್ರಶ್‌ಗಳಿಗಿಂತ ಸ್ವಲ್ಪ ಹೆಚ್ಚು ಬೆಲೆಯನ್ನು ಹೊಂದಿರಬಹುದು. ಆದರೆ ಅವುಗಳ ಬಳಕೆಯಿಂದ ಅಂತಿಮವಾಗಿ ನಮಗೆ ಮತ್ತು ಈ ಸುಂದರ ಜಗತ್ತಿಗೆ ಉಂಟಾಗುವ ಪ್ರಯೋಜನಗಳು ಬೆಲೆಕಟ್ಟಲಾಗದವುಗಳಾಗಿವೆ.
-ಡಾ| ಆನಂದದೀಪ್ ಶುಕ್ಲಾ,
ಅಸೋಸಿಯೇಟ್ ಪ್ರೊಫೆಸರ್,
ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ,
ಎಂಸಿಡಿಒಎಸ್, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ, ಎಂಸಿಡಿಒಎಸ್, ಮಂಗಳೂರು)