ತೆಕ್ಕಟ್ಟೆ: ಉಳ್ತೂರು ಗ್ರಾಮದ ಬಡ ಕುಟುಂಬದ ಸುಮಿತ್ರಾ ಆಚಾರ್ಯ ಎನ್ನುವವರ ಕೊಟ್ಟಿಗೆಯಲ್ಲಿದ್ದ ಹಸುವನ್ನು ಕದ್ದೊಯ್ಯಲಾಗಿದ್ದು, ಈ ಪ್ರಕರಣದಿಂದ ಆತಂಕದಲ್ಲಿದ್ದ ಬಡ ಕುಟುಂಬಕ್ಕೆ ಊರ ಗ್ರಾಮಸ್ಥರು, ಯುವಕರು ಒಂದಾಗಿ ಫೆ.15ರಂದು ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇಗುಲದ ಓಕುಳಿ ಕಾರ್ಯಕ್ರಮದಂದು ಸಂಪ್ರದಾಯದಂತೆ ಗೋ ಪೂಜೆಗೈದು ಗೋದಾನ ಮಾಡಿದರು.
ಗೋದಾನ ಮಾಡಿ ಮಾದರಿಯಾದ ಗ್ರಾಮಸ್ಥರು
ಗೋ ಕಳ್ಳರ ತಂಡ ಉಳ್ತೂರು ದೇವಸ್ಥಾನದ ಸುಮಿತ್ರಾ ಆಚಾರ್ಯ ಎಂಬುವವರ ದನ ಕದ್ದೊಯ್ದಿದ್ದರು. ಈ ಪ್ರಕರಣವನ್ನು ಖಂಡಿಸಿ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಬೃಹತ್ ಪ್ರತಿಭಟನೆಯೂ ಸಹ ನಡೆದಿತ್ತು. ಇದುವರೆಗೂ ಕೂಡ ಪ್ರಕರಣದ ಅಪರಾಧಿಗಳ ಪತ್ತೆ ಆಗಿಲ್ಲ. ಅತ್ಯಂತ ಆರ್ಥಿಕ ಸಂಕಷ್ಟದಲ್ಲಿ ನಲುಗಿರುವ ಈ ಬಡ ಕುಟುಂಬದ ನೆರವಿಗೆ ಊರ ಗ್ರಾಮಸ್ಥರು, ಯುವಕರು ಹಾಗೂ ಉಳ್ತೂರು ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಇದರ ಸದಸ್ಯರು ಒಂದು ಗೋವನ್ನು ಆ ಕುಟುಂಬಕ್ಕೆ ದಾನ ನೀಡುವ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಮಾದರಿಯಾದರು.
ಈ ಸಂದರ್ಭದಲ್ಲಿ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇಗುಲದ ಪ್ರಧಾನ ಅರ್ಚಕರಾದ ಸೀತಾರಾಮ ಅಡಿಗ, ವೆಂಕಟೇಶ್ ಅಡಿಗ ಉಳೂ¤ರು, ರಮೇಶ್ ಅಡಿಗ ಉಳೂ¤ರು, ಗ್ರಾ.ಪಂ.ಸದಸ್ಯ ಪ್ರಶಾಂತ್ ಶೆಟ್ಟಿ, ಅವಿನಾಶ್ ಉಳ್ತೂರು, ಮಲ್ಯಾಡಿ ಸುಧೀರ್ ಶೆಟ್ಟಿ, ಪ್ರತಾಪ್ ಶೆಟ್ಟಿ , ರಾಮ ದೇವಾಡಿಗ, ಹರೀಶ್ ದೇವಾಡಿಗ, ಮಹೇಶ್ ಶೆಟ್ಟಿ, ಗಣೇಶ್ ಶೆಟ್ಟಿ ಮಲ್ಯಾಡಿ ಹಾಗೂ ಯುವಕ ಮಂಡಲದ ಸರ್ವ ಸದಸ್ಯರು, ನಮ್ಮ ಉಳ್ತೂರು ಬಳಗ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.