Advertisement

ಜಿ ಮೇಲ್‌ ಸಿಂಪಲ್‌ ಟ್ರಿಕ್‌ಗಳು

09:10 PM Sep 29, 2019 | Lakshmi GovindaRaju |

1. ಇಮೇಲ್‌ ಟೈಪ್‌ ಮಾಡಿ ಸೆಂಡ್‌ ಬಟನ್‌ ಒತ್ತಿದ ಮೇಲೆ ಮೇಲ್‌ ರವಾನೆಯಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಎಷ್ಟೋ ಸಲ, ಸೆಂಡ್‌ ಬಟನ್‌ ಒತ್ತಿದ ಮೇಲೆ ಮೇಲ್‌ನಲ್ಲಿ ಇರುವ ತಪ್ಪು ಅಥವಾ ಬರೆಯದೇ ಬಿಟ್ಟು ಹೋದ ಸಂಗತಿ ನೆನಪಿಗೆ ಬರುವುದುಂಟು. ಆ ಸಮಯದಲ್ಲಿ ಒಮ್ಮೆ ಕಳಿಸಿದ ಮೇಲನ್ನು ಹಿಂದಕ್ಕೆ ಪಡೆದುಕೊಳ್ಳುವಂತಿದ್ದರೆ ಚೆನ್ನಾಗಿತ್ತು ಎಂದನ್ನಿಸುವುದು ಸುಳ್ಳಲ್ಲ. ನಿಮಗೆ ಗೊತ್ತಾ? ಕಳಿಸಿದ ಮೇಲ್‌ಅನ್ನು ಹಿಂದಕ್ಕೆ ಪಡೆದುಕೊಳ್ಳುವಂಥ ಅವಕಾಶವನ್ನೂ ಜಿಮೇಲ್‌ ಬಳಕೆದಾರರಿಗೆ ಒದಗಿಸುತ್ತದೆ. ಇಮೇಲ್‌ ಕಳಿಸಿದ ತಕ್ಷಣ ಕೆಳಗಡೆ ಎಡದ ಕಡೆ ಚಿಕ್ಕ ಬಾಕ್ಸ್‌ನಲ್ಲಿ ಸೆಂಡಿಂಗ್‌ ಎಂಬ ಸಂದೇಶ ಮೂಡುತ್ತದೆ. ಅದರ ಪಕ್ಕದಲ್ಲೇ ಅನ್‌ ಡು(Undo) ಎಂಬ ಆಯ್ಕೆ ಇರುತ್ತದೆ. ಅದನ್ನು ಒತ್ತಿದರೆ ಮೇಲ್‌ ಹೋಗುವುದಿಲ್ಲ. ಅರ್ಧದಿಂದಲೇ ಹಿಂದಕ್ಕೆ ಬರುತ್ತದೆ. ಈ Undo ಆಯ್ಕೆ ಮೂಡುವುದು ಸೆಂಡ್‌ ಬಟನ್‌ ಒತ್ತಿದ ನಂತರದ 30 ಸೆಕೆಂಡುಗಳ ಕಾಲ ಮಾತ್ರ. 30 ಸೆಕೆಂಡು ಕಳೆದು ಹೋದರೆ ಆಯ್ಕೆ ಮಾಯವಾಗುತ್ತದೆ ಮತ್ತು ಇಮೇಲ್‌ ತಲುಪಬೇಕಾದವರಿಗೆ ತಲುಪಿರುತ್ತದೆ.

Advertisement

2. ಒಂದೇ ಬ್ರೌಸರ್‌ನಲ್ಲಿ ಬೇರೆ ಬೇರೆ ಟ್ಯಾಬ್‌ಗಳಲ್ಲಿ ಒಂದಕ್ಕಿಂತ ಹೆಚ್ಚು ಜಿಮೇಲ್‌ ಖಾತೆಗಳಿಗೆ ಲಾಗ್‌ ಇನ್‌ ಆಗಲು ಸಾಧ್ಯವಿಲ್ಲ. ಹಾಗೆ ಮಾಡಲು ಬಲಗಡೆ ಟಾಪ್‌ನಲ್ಲಿ ಅಕೌಂಟ್‌ ಪ್ರೌಫೈಲ್‌ ಪಿಕ್‌ ಕಾಣುವತ್ತ ಕ್ಲಿಕ್‌ ಮಾಡಿದರೆ ಆಯಾ ಖಾತೆಯ ಇಮೇಲ್‌ ಐಡಿಯನ್ನು ತೇರಿಸುವುದು. ಅಲ್ಲೇ ಕೆಳಗಡೆ ಆ್ಯಡ್‌ ಅಕೌಂಟ್‌ ಎಂಬ ಆಯ್ಕೆ ಇರುತ್ತದೆ. ಅದನ್ನು ಒತ್ತಿದರೆ ಹೊಸದೊಂದು ಟ್ಯಾಬ್‌ ತೆರೆದುಕೊಳ್ಳುತ್ತದೆ. ಅಲ್ಲಿ ಮತ್ತೂಂದು ಜಿಮೇಲ್‌ ಖಾತೆಯ ವಿವರಗಳನ್ನು ಟೈಪಿಸಿ ಲಾಗಿನ್‌ ಆಗಬಹುದು.

3. ಜಿ ಮೇಲ್‌ ಇನ್‌ಬಾಕ್ಸ್‌ನಲ್ಲಿ ಮೇಲ್‌ಗ‌ಳ ಪಕ್ಕದಲ್ಲಿ ಸ್ಟಾರ್‌ ಇರುವುದನ್ನು ಗಮನಿಸಿದ್ದೀರಾ. ಅದರ ಮೇಲೆ ಕ್ಲಿಕ್‌ ಮಾಡಿದರೆ ಚಿನ್ನದ ಬಣ್ಣವನ್ನು ಪಡೆದುಕೊಳ್ಳುತ್ತದೆ. ಅದರ ಅರ್ಧ ಆ ಇಮೇಲ್‌ ಬಳಕೆದಾರರಿಗೆ ಬಹಳ ಮುಖ್ಯವಾದುದು ಎಂದು. ಇಮೇಲ್‌ ಅನ್ನು ಜಾಲಾಡುವ ಸಂದರ್ಭದಲ್ಲಿ ಸ್ಟಾರ್‌ ಇದ್ದರೆ ಹುಡುಕುವುದು ಸುಲಭವಾಗುತ್ತದೆ.

4. ನಮಗೆ ಬೇಕಾದ ಟೈಮಿಗೆ ಅಲಾರಮ್‌ ಹೊಡೆಯುವಂತೆ ಟೈಮ್‌ ಸೆಟ್‌ ಮಾಡುತ್ತೇವಲ್ಲ, ಅದೇ ರೀತಿ ಜಿ ಮೇಲ್‌ನಲ್ಲೂ “ಸ್ನೂಝ್’ ಎನ್ನುವ ಒಂದು ಸವಲತ್ತಿದೆ. ಯಾವುದೋ ಇಮೇಲ್‌ ನಿಮಗೆ ಈಗ ಮುಖ್ಯವಾಗಿದೆ ಎಂದಿಟ್ಟುಕೊಳ್ಳಿ. ಆದರೆ ಅದರ ಅಗತ್ಯ ನಿಮಗೆ ಬೀಳುವುದು ಒಂದು ವಾರದ ನಂತರ ಎಂದುಕೊಳ್ಳೋಣ. ಆದರೆ, ಆ ಒಂದು ವಾರದಲ್ಲಿ ಬೇರೆ ಬೇರೆ ಇಮೇಲ್‌ಗ‌ಳು ಇನ್‌ಬಾಕ್ಸ್‌ಗೆ ಬಂದು ಬೀಳುವುದರಿಂದ ಈ ಮುಖ್ಯವಾದ ಇಮೇಲ್‌ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಅದಕ್ಕೆ ಪರಿಹಾರವೇ ಸ್ನೂಝ್. ಅದನ್ನು ಬಳಸಿ ಆ ಇಮೇಲ್‌ ನಿರ್ದಿಷ್ಟ ದಿನದಂದು, ನಿರ್ದಿಷ್ಟ ಸಮಯದಲ್ಲಿ ಇನ್‌ಬಾಕ್ಸ್‌ನಲ್ಲಿ ಮೇಲ್ಗಡೆ ಮೂಡುವಂತೆ ಮಾಡಬಹುದು.

ಆ ಮುಖ್ಯವಾದ ಇಮೇಲ್‌ನ ಸಾಲಿನಲ್ಲೇ ಮೊದಲಿಗೆ ಒಂದು ಬಾಕ್ಸ್‌ ಇದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ರೈಟ್‌ ಮಾರ್ಕ್‌ ಬೀಳುತ್ತದೆ. ಅದರರ್ಥ ಆ ಇಮೇಲ್‌ ಸೆಲೆಕ್ಟ್ ಆಗಿದೆ ಎಂದು. ಟಿಕ್‌ ಮಾರ್ಕ್‌ ಬಿದ್ದ ಕೂಡಲೆ ಸರ್ಚ್‌ ಬಾಕ್ಸ್‌ ಕೆಳಗೆ ಒಂದಷ್ಟು ಆಯ್ಕೆಗಳು ಮೂಡುತ್ತವೆ. ಅವುಗಳಲ್ಲಿ ಗಡಿಯಾರದ ಚಿತ್ರವಿರುವ ಆಯ್ಕೆಯನ್ನು ಕ್ಲಿಕ್‌ ಮಾಡಿ. ತಕ್ಷಣ, ನಾಳೆ, ನಾಳಿದ್ದು, ಮುಂದಿನ ವಾರ… ಹೀಗೆ, ಒಂದಷ್ಟು ಆಯ್ಕೆಗಳನ್ನು ತೋರಿಸುತ್ತದೆ. ಇದ್ಯಾವುವೂ ಬೇಡವೆಂದರೆ ಕೆಳಗಡೆ ಬಳಕೆದಾರ ತನಗೆ ಬೇಕಾದ ದಿನ, ಸಮಯವನ್ನು ಎಂಟ್ರಿ ಮಾಡಬಹುದು. ಆ ಹೊತ್ತಿಗೆ ಆ ಇಮೇಲ್‌ ಇನ್‌ಬಾಕ್ಸ್‌ನಲ್ಲಿ ಮೇಲ್ಗಡೆ ಕಾಣಿಸಿಕೊಳ್ಳುತ್ತದೆ, ಅಲಾರಂ ಥರ.

Advertisement
Advertisement

Udayavani is now on Telegram. Click here to join our channel and stay updated with the latest news.

Next