Advertisement

ದಾವಣಗೆರೆಯಲ್ಲಿ ವೈಭವದ ವಿಜಯ ದಶಮಿ ಶೋಭಾಯಾತ್ರೆ

02:23 PM Oct 05, 2022 | Team Udayavani |

ದಾವಣಗೆರೆ: ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿ ವತಿಯಿಂದ ದಸರಾ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ವೆಂಕಟೇಶ್ವರ ವೃತ್ತದಿಂದ ಬೃಹತ್ ಶೋಭಾಯಾತ್ರೆ ನಡೆಯಿತು.

Advertisement

41ನೇ ವರ್ಷದ ಸಾರ್ವಜನಿಕ ವಿಜಯದಶಮಿ ಅಂಗವಾಗಿ ಬೆಳಗ್ಗೆ 11-30ಕ್ಕೆ ಬೃಹತ್‌ ಶೋಭಾಯಾತ್ರೆ ಚಾಲನೆ ನೀಡಲಾಯಿತು. ಶ್ರೀ ಬಾಲಯೋಗಿ ಜಗದೀಶ್ವರ ಮಹಾಸ್ವಾಮೀಜಿ, ಶ್ರೀ ಅಭಿನವ ಹಾಲ ಸ್ವಾಮೀಜಿ, ಶ್ರೀ ಶಿವಾನಂದ ಮಹಾಸ್ವಾಮಿಜಿ ನೇತೃತ್ವದಲ್ಲಿ ಶೋಭಾಯಾತ್ರೆ ಉದ್ಘಾಟನೆಗೊಂಡಿತು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಜಯಮ್ಮ ಗೋಪಿನಾಯ್ಕ, ಉಪ ಮೇಯರ್ ಗಾಯತ್ರಿಬಾಯಿ, ದೂಡಾ ಅಧ್ಯಕ್ಷ ಕೆ.ಎಂ.‌ ಸುರೇಶ್, ಡಾ.‌ಎ.ಎಚ್. ಶಿವಯೋಗಿ ಸ್ವಾಮಿ, ಎಂ. ಬಸವರಾಜ ನಾಯ್ಕ, ಮಾಜಿ ಮೇಯರ್ ಗಳಾದ ಎಸ್.ಟಿ.‌ ವೀರೇಶ್, ಬಿ.ಜಿ. ಅಜಯ್ ಕುಮಾರ್, ದೂಡಾ ಅಧ್ಯಕ್ಷ ಕೆ.ಎಂ. ಸುರೇಶ್, ಮಾಜಿ ಅಧ್ಯಕ್ಷ ರಾದ ರಾಜನಹಳ್ಳಿ ಶಿವಕುಮಾರ್, ದೇವರಮನೆ ಶಿವಕುಮಾರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್. ಎಂ. ವೀರೇಶ್ ಹನಗವಾಡಿ, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮುಖಂಡರಾದ ಯಶವಂತ ರಾವ್ ಜಾಧವ್, ಶಂಕರನಾರಾಯಣ, ಸತೀಶ್ ಪೂಜಾರಿ, ಎನ್. ರಾಜಶೇಖರ್, ವೈ. ಮಲ್ಲೇಶ್, ಪಿ.ಸಿ. ಶ್ರೀನಿವಾಸ್, ಆರ್.ಎಲ್. ಶಿವಪ್ರಕಾಶ್, ಡಾ. ನಸೀರ್ ಅಹಮದ್, ಜೆ. ಅಮಾನುಲ್ಲಾ ಖಾನ್, ಶೇಖ್ ಅಹಮದ್ ಇತರರು ನೇತೃತ್ವ ವಹಿಸಿದ್ದರು.

ಅಲ್ಪಸಂಖ್ಯಾತ ಮುಖಂಡರು ಶೋಭಾಯಾತ್ರೆ ಚಾಲನೆಗೆ ಸಾಕ್ಷಿಯಾದರು. ಹಿಂದೂ ಅಲ್ಪಸಂಖ್ಯಾತ ಮುಖಂಡರ ಸನ್ಮಾನಿಸಲಾಯಿತು. ‌ಪರಸ್ಪರ ಸಿಹಿ ವಿತರಣೆ ಮಾಡಿಕೊಂಡು ಶುಭ ಕೋರುವ ಮೂಲಕ ಭಾವೈಕ್ಯತೆಯ ಮೆರೆದರು.

ಸಮಾಳ, ನಂದಿಕೋಲು, ವೀರಗಾಸೆ, ಕೊಂಬು ಕಹಳೆ, ಡೊಳ್ಳು ಇತ್ಯಾದಿ ಅನೇಕ ವಿಶೇಷವಾಗಿ ಸಾಂಪ್ರದಾಯಕ ವಾದ್ಯಗಳು,ಸ್ಥಬ್ದಚಿತ್ರಗಳು,ಕೋಲಾಟ ಇತರೆ ಜಾನಪದ ಕಲೆಗಳ ಪ್ರದರ್ಶನ ಶೋಭಾಯಾತ್ರೆಯ ಶೋಭೆ ಹೆಚ್ಚಿಸಿದವು.

Advertisement

ನಾಡ ದೇವತೆ ಶ್ರೀ ಚಾಮುಂಡೇಶ್ವರಿ, ಭಾರತ ಮಾತೆ, ದುರ್ಗಾಂಬಿಕಾ ದೇವಿ, ವಿವೇಕಾನಂದ, ಭಗತ್ ಸಿಂಗ್, ವಾಲ್ಮೀಕಿ, ಸಾರ್ವಕರ್, ಮಹಾತ್ಮ ಗಾಂಧಿ ಇತರರ ಸ್ತಬ್ದಚಿತ್ರ, ರೂಪಕ ಗಮನ ಸೆಳೆದವು.

ವೆಂಕಟೇಶ್ವರ ವೃತ್ತದಿಂದ ಮೆರವಣಿಗೆ ಹೊರಟು ವಿವಿಧ ದೇವಸ್ಥಾನಗಳ ಉತ್ಸವ ಮೂರ್ತಿಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ಮುಕ್ತಾಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next