ಅಹಮದಾಬಾದ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಶುಕ್ರವಾರ (ಡಿ.30) ಮುಂಜಾನೆ ಇಹಲೋಕ ತ್ಯಜಿಸಿದರು. ಶತಾಯುಷಿಯಾದ ಹೀರಾಬೆನ್ ಅವರು ಕಳೆದೆರಡು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು.
ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಧಾನಿ ಮೋದಿ, “ಭವ್ಯವಾದ ಶತಮಾನವು ದೇವರ ಪಾದದಲ್ಲಿ ನೆಲೆಯಾಗಿದೆ” ಎಂದು ಭಾವುಕರಾಗಿ ಬರೆದಿದ್ದಾರೆ.
ತಮ್ಮ ಚಿತ್ರವನ್ನು ಹಂಚಿಕೊಂಡ ಪ್ರಧಾನಿ, “ಅಮ್ಮ ನಿಮ್ಮಲ್ಲಿ ನಾನು ಯಾವಾಗಲೂ ತ್ರಿಮೂರ್ತಿಗಳನ್ನು ಕಂಡಿದ್ದೇನೆ, ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನ” ಎಂದಿದ್ದಾರೆ.
ಇದನ್ನೂ ಓದಿ:ಮಂಗಳೂರು: ಕಾರಿನ ಸಹಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದು ದಂಡ !
“ಅವರ 100 ನೇ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದಾಗ, ಅವರು ಒಂದು ಮಾತನ್ನು ಹೇಳಿದರು, ಯಾವಾಗಲೂ ನೆನಪಿಟ್ಟು, ಬುದ್ಧಿವಂತಿಕೆಯಿಂದ ಕೆಲಸ ಮಾಡು, ಪರಿಶುದ್ಧತೆಯಿಂದ ಬದುಕು ಎಂದಿದ್ದರು” ಎಂದು ಮೋದಿ ತಾಯಿಯ ಬಗ್ಗೆ ಬರೆದುಕೊಂಡಿದ್ದಾರೆ.
ತಾಯಿಯ ನಿಧನದ ಸುದ್ದಿ ತಿಳಿದ ಪ್ರಧಾನಿ ಮೋದಿ ಅವರು ಕೂಡಲೇ ಅಹಮದಾಬಾದ್ ಗೆ ತೆರಳಿದ್ದಾರೆ.