Advertisement

ಉಗ್ರ ಪಟ್ಟಿಗೆ ಪಿಎಫ್ಐ? 42 ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಲು ಕೇಂದ್ರ ಚಿಂತನೆ

11:46 PM Sep 26, 2022 | Team Udayavani |

ಹೊಸದಿಲ್ಲಿ: ಕಳೆದ ವಾರ ನಡೆದ “ಆಪರೇಷನ್‌ ಅಕ್ಟೋಪಸ್‌’ನಲ್ಲಿ ಬಂಧಿತರಾದ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ)ದ ಕೆಲವು ಮುಖಂಡರು ವಿಚಾರಣೆ ವೇಳೆ ಹಲವು ಆಘಾತಕಾರಿ ಅಂಶಗಳನ್ನು ಬಾಯಿಬಿಟ್ಟ ಬೆನ್ನಲ್ಲೇ ಆ ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.

Advertisement

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಸೆಕ್ಷನ್‌ 35ರ ಅನ್ವಯ ದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವ 42 ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಪಿಎಫ್ಐ ಅನ್ನೂ ಸೇರಿಸಲು ಸರಕಾರ ಸಿದ್ಧತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಭಯೋತ್ಪಾದಕ ಕೃತ್ಯ ಎಸಗಿದ ಅಥವಾ ಅಂಥ ಚಟುವಟಿಕೆಗಳಲ್ಲಿ ಭಾಗಿಯಾಗು ವಂಥ, ಅದಕ್ಕೆ ಸಂಚು ರೂಪಿಸುವಂಥ, ಉಗ್ರವಾ ದ ವನ್ನು ಪ್ರಚೋದಿಸುವ ಸಂಘಟ ನೆಗಳು ನಿಷೇಧಕ್ಕೆ ಅರ್ಹವಾಗುತ್ತವೆ ಎಂದು ಈ ಸೆಕ್ಷನ್‌ ಹೇಳುತ್ತದೆ.

ಈಗ 106ಕ್ಕೂ ಹೆಚ್ಚು ಪಿಎಫ್ಐ ಶಂಕಿತರ ಪ್ರಾಥಮಿಕ ವಿಚಾರಣೆ, ಸಿಕ್ಕ ಸಾಕ್ಷ್ಯಗಳು ಹಾಗೂ ಗುಪ್ತಚರ ಮಾಹಿತಿಗಳನ್ನು ಆಧರಿಸಿ ಜಾರಿ ಮತ್ತು ಗುಪ್ತಚರ ಸಂಸ್ಥೆಗಳು ಈ ಸಂಘಟನೆಯನ್ನು ನಿಷೇಧಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಲಿವೆ. ಈಗಾಗಲೇ ರಾಷ್ಟ್ರೀಯ ಭದ್ರತ ಅಧಿಕಾರಿಗಳು ಎಲ್ಲ ಸಾಕ್ಷ್ಯಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸುತ್ತಿವೆ ಎಂದೂ ಮೂಲಗಳು ತಿಳಿಸಿವೆ.

ಅ.3ರ ವರೆಗೆ ಎಟಿಎಸ್‌ ವಶಕ್ಕೆ: ಕಳೆದ ವಾರ ಪಿಎಫ್ಐ ಮುಖಂಡರ ಮನೆಗಳ ಮೇಲೆ ನಡೆದ ದಾಳಿ ವೇಳೆ ಮಹಾರಾಷ್ಟ್ರದಲ್ಲಿ ಬಂಧಿ ತರಾಗಿದ್ದ ಐವರು ಪಿಎಫ್ಐ ಕಾರ್ಯಕತ ì ರನ್ನು ಸೋಮವಾರ ಅ.3ರ ವರೆಗೆ ಎಟಿಎಸ್‌ ವಶಕ್ಕೆ ಒಪ್ಪಿಸಿ ಮುಂಬಯಿಯ ಕೋರ್ಟ್‌ ಆದೇಶ ನೀಡಿದೆ. ರಾಜ್ಯದಲ್ಲಿ ಒಟ್ಟು 20 ಮಂದಿ ಯನ್ನು ಕಳೆದ ವಾರ ಬಂಧಿಸಲಾಗಿತ್ತು. ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿ, ಸಮು ದಾಯಗಳ ನಡುವೆ ದ್ವೇಷ ಹುಟ್ಟಿಸುವುದು ಮತ್ತು ದೇಶದ ವಿರುದ್ಧ ಯುದ್ಧ ಸಾರಿದ ಆರೋಪಗಳು ಇವರ ಮೇಲಿದೆ.

Advertisement

ತನಿಖೆಯಾಗಲಿ: ತಮಿಳುನಾಡಿನ ವಿವಿಧೆಡೆ ನಡೆದಿರುವ ಪೆಟ್ರೋಲ್‌ ಬಾಂಬ್‌ ದಾಳಿಗಳ ಹಿಂದೆ ಬಿಜೆಪಿ ಮತ್ತು ಆರೆಸ್ಸೆಸ್‌ ಕಾರ್ಯಕರ್ತರ ಕೈವಾಡವಿದೆಯೇ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಆಡಳಿತಾರೂಢ ಡಿಎಂಕೆ ಪಕ್ಷದ ಮುಖವಾಣಿ “ಮುರಸೋಳಿ’ ಯಲ್ಲಿ ಪ್ರಕಟವಾದ ಲೇಖನದಲ್ಲಿ ಆಗ್ರಹಿಸ ಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ನಾರಾಯ  ಣನ್‌ ತಿರುಪತಿ, ಈ ಎಲ್ಲ ದಾಳಿಗಳ ಹಿಂದೆ ಪಿಎಫ್ಐ ಮತ್ತು ಎಸ್‌ಡಿ ಪಿಐ ಕಾರ್ಯಕರ್ತರೇ ಇರುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಕಾರ್ಯಕರ್ತರಿಗೆ ಬೆದರಿಕೆ
ಕೇರಳದಲ್ಲಿ ಎಸ್‌ಡಿಪಿಐ ನಾಯಕರೊಬ್ಬರು ಆರೆಸ್ಸೆಸ್‌ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿರುವ ವೀಡಿಯೋವೊಂದು ಸೋಮವಾರ ವೈರಲ್‌ ಆಗಿದೆ. “ಒಂದೋ ನಮ್ಮ ಸಿದ್ಧಾಂತವೇ ಗೆಲ್ಲಬೇಕು ಅಥವಾ ನಾವು ನಮ್ಮ ಕನಸಿನಂತೆಯೇ ಹುತಾತ್ಮರಾಗುತ್ತೇವೆ. ಆರೆಸ್ಸೆಸ್‌ನವರೇ, ನೀವು ಕತ್ತಲಲ್ಲಿ ನಮ್ಮ ಮೇಲೆ ದಾಳಿ ನಡೆಸಿದರೆ, ನಾವು ಹಗಲಲ್ಲೇ, ಅದೂ ಕೇವಲ 10 ಸೆಕೆಂಡಲ್ಲೇ ನಿಮ್ಮನ್ನು ನೋಡಿಕೊಳ್ಳುತ್ತೇವೆ’ ಎಂದು ಎಸ್‌ಡಿಪಿಐ ನಾಯಕ ಬೆದರಿಕೆಯೊಡ್ಡಿದ್ದಾರೆ.

ಅಮಿತ್‌ ಶಾಗೆ ಅಣ್ಣಾಮಲೈ ಪತ್ರ
ತಮಿಳುನಾಡಿನಲ್ಲಿ ಸರಣಿ ಪೆಟ್ರೋಲ್‌ ಬಾಂಬ್‌ ದಾಳಿ ಪ್ರಕರಣಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಅಮಿತ್‌ಶಾ ರಿಗೆ ಪತ್ರವೊಂದನ್ನು ಬರೆದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ಕಳೆದ ಕೆಲವು ದಿನಗಳಿಂದ ಪಿಎಫ್ಐ, ಎಸ್‌ಡಿಪಿಐ ಕಾರ್ಯಕರ್ತರು ಬಿಜೆಪಿ ಹಾಗೂ ಆರೆಸ್ಸೆಸ್‌ ನಾಯಕರ ಮನೆಗಳ ಮೇಲೆ ಬಾಂಬ್‌ ಎಸೆಯುತ್ತಿದ್ದಾರೆ. ನೀವು ಕೂಡಲೇ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಅಣ್ಣಾಮಲೈ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next