Advertisement
ಇದೊಂದು ಆಧುನಿಕ ಕಾಲದ ಅದ್ಭುತ ಜಾತ್ರೆ. ಹತ್ತಾರು ದೇಶಗಳಿಂದ ಬಂದ ಪ್ರತಿನಿಧಿಗಳು ಸೂಟುಬೂಟು ಧರಿಸಿಕೊಂಡು ಓಡಾಡುತ್ತಿದ್ದಾರೆ. ಅವರ ಕೈಯಲ್ಲಿ ತಮ್ಮ ಕಂಪೆನಿಯ ಉತ್ಪನ್ನಗಳನ್ನು ಪರಿಚಯಿಸುವ ಪುಸ್ತಿಕೆಗಳಿವೆ. ನಮ್ಮ ಕಂಪೆನಿಯ ಉತ್ಪನ್ನಗಳು ಪರಿಶುದ್ಧವಾಗಿವೆ, ನಮ್ಮ ಪದಾರ್ಥಗಳು ಕಲ್ಮಶ ದೂರವಾಗಿವೆ, ನಮ್ಮ ಗುಣಮಟ್ಟ ಸ್ಥಿರವಾಗಿದೆ ಎಂದೆಲ್ಲ ಹೇಳಿಕೊಂಡರಷ್ಟೇ ಸಾಲದು, ಗ್ರಾಹಕರು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರಗಳನ್ನು ಸಿದ್ಧಪಡಿಸಬೇಕು. ವಿವರಿಸಲು ಸುಂದರವಾದ ಭಾಷೆ ಬೇಕು, ಗ್ರಾಹಕರಿಗೆ ಇಷ್ಟವಾಗಲು ವೇಷಭೂಷಣ ಸುಂದರವಾಗಿರಬೇಕು. ಒಟ್ಟಿನಲ್ಲಿ ಎಲ್ಲರ ಲಕ್ಷ್ಯ ಏನೆಂದರೆ ತಮ್ಮ ಕಂಪೆನಿಗಳ ಉತ್ಪನ್ನಗಳಿಗೆ ಆದಷ್ಟು ಬೇಡಿಕೆಗಳನ್ನು ಹೆಚ್ಚಿಸುವುದು, ತಮ್ಮ ಕಂಪೆನಿಯ ವ್ಯವಹಾರಗಳನ್ನು ಅಧಿಕಗೊಳಿಸುವುದು. ದೇಶ-ವಿದೇಶಗಳ ಗ್ರಾಹಕರನ್ನು ಆಕರ್ಷಿಸುವ ಕಲೆಯನ್ನು ಕರಗತಗೊಳಿಸಿದಂತೆ ಕಂಪೆನಿಗಳ ಪ್ರತಿನಿಧಿಗಳು ವ್ಯವಹರಿಸುತ್ತಾರೆ.
Related Articles
Advertisement
ಸರಕಾರದ ಅನುಮತಿ ಪಡೆಯಬೇಕು. ಹಣಕಾಸನ್ನು ಸಮರ್ಥವಾಗಿ ವಿನಿಯೋಗಿಸಲು ಬುದ್ಧಿವಂತ ಕೆಲಸಗಾರರ ಪಡೆ ಬೇಕು. ಕಾರ್ಯಕ್ಷಮತೆ ಉಳ್ಳವರನ್ನು ನೇಮಕಾತಿ ಮಾಡಿಕೊಳ್ಳಬೇಕು. ಯಂತ್ರಗಳನ್ನು ನಿಭಾಯಿಸಲು ತಂತ್ರಜ್ಞಾನಿಗಳ ತಂಡ ಬೇಕು. ಉತ್ಪಾದನೆಯ ಗುಣಮಟ್ಟ ಕಾಯ್ದುಕೊಳ್ಳಬೇಕು. ಉತ್ಪಾದನಾ ವಸ್ತುಗಳನ್ನು ಮಾರುಕಟ್ಟೆ ಮಾಡಬೇಕು.
ಮಾರುಕಟ್ಟೆಯಿಂದ ಗ್ರಾಹಕರಿಗೆ ತಲುಪಿಸಬೇಕು. ಉತ್ಪಾದನೆ ಮೂಲದ ಕೈಗಾರಿಕೆಗಳು ಮಾರುವ ಸಂಖ್ಯೆಯನ್ನು ಅಧಿಕಗೊಳಿಸಲು ಈ ಚಕ್ರದ ಸುತ್ತ ತಿರುಗುತ್ತಲೇ ಇರುತ್ತವೆ. ಒಮ್ಮೆ ಗುರಿಯನ್ನು ಸಾಧಿಸಿದರೆ ಸಾಲದು, ಮತ್ತೆ ಹೊಸ ಗುರಿ, ಹೆಚ್ಚಿನ ಗುರಿ ಎದುರಾಗಿಬಿಡುತ್ತವೆ.
ಹಾಗಾಗಿ ಮಾರುಕಟ್ಟೆಯ ಪ್ರವೃತ್ತಿಯಲ್ಲಿ ವಿರಾಮ ಎಂಬುದಿಲ್ಲ! ಉತ್ಪಾದನಾ ರಹಿತ ಕಂಪೆನಿಗಳು ಬೇರೆ ಇವೆ. ಅಲ್ಲಿಯೂ ಮಾರಾಟದ ತಂತ್ರ ಇದ್ದೇ ಇದೆ. ಯಾವ ಸಾಫ್ಟ್ವೇರ್ ಕೆಲಸಗಳನ್ನು ಗುತ್ತಿಗೆ ಆಧಾರದಲ್ಲಿ ಹೇಗೆ ದಕ್ಕಿಸಿಕೊಳ್ಳುವುದೆಂಬ ಯೋಚನೆ ಸದಾ ಜಾಗ್ರತವಾಗಿರುತ್ತದೆ. ಉದ್ಯೋಗಿಗಳನ್ನು ನೇಮಿಸಿಕೊಂಡ ಬಳಿಕ ಕೆಲಸವು ನಿರೀಕ್ಷಿತ ಪ್ರಮಾಣದಲ್ಲಿ ಸಿಗದೆ ಅವರು ಉದ್ಯೋಗವಿದ್ದು ನಿರುದ್ಯೋಗಿಗಳಾಗಿರಬೇಕಾಗುತ್ತದೆ. ಸಾಫ್ಟ್ವೇರ್ ಕಂಪೆನಿಗಳಲ್ಲಿ “ಮಾರಾಟ’ ಅಧಿಕವಾದರೆ ಉದ್ಯೋಗಿಗಳಿಗೆ ವಿದೇಶಕ್ಕೆ ಹೋಗುವ ಅವಕಾಶವೂ ಸಿಗುತ್ತದೆ.
ಮಾರುವ ಚಾತುರ್ಯ ಇರುವ ಏಜೆನ್ಸಿಗಳನ್ನು ಕೆಲವು ಕಂಪೆನಿಗಳು ನೇಮಿಸಿಕೊಂಡಿರುತ್ತವೆ. ಅವುಗಳು ನಿರ್ದಿಷ್ಟ ಪ್ರಮಾಣದ ಠೇವಣಿ ಇಟ್ಟು ಕಂಪೆನಿಯಿಂದ ವಸ್ತುಗಳನ್ನು ಪಡೆದು ಮಾರಬೇಕು. ಉದಾಹರಣೆಗೆ ವಾಹನ, ಬಣ್ಣ, ಗೊಬ್ಬರ, ಮೊಬೈಲ್, ಇಂಧನ ಯಾವುದೂ ಇರಬಹುದು. ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರನ್ನು ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಆ ಏಜೆನ್ಸಿಗಳು ರದ್ದಾಗುತ್ತವೆ. ಒಟ್ಟಿನಲ್ಲಿ ಮಾರುಕಟ್ಟೆಯ ಪ್ರವೃತ್ತಿಯನ್ನು ಜೀವಂತವಾಗಿಡಲು ಎಲ್ಲರೂ ತೊಡಗಿಕೊಂಡಿರುತ್ತಾರೆ. ಉತ್ಪಾದಿಸುವುದು ಮತ್ತು ಮಾರುವುದು ಈ ಕಾಲದ ಎರಡು ಮುಖ್ಯ ಪ್ರಕ್ರಿಯೆಗಳಾಗಿವೆ.
ಇವತ್ತು ಮಾರುವ ಸಾಧ್ಯತೆಗಳು ಅತ್ಯಾಧುನಿಕಗೊಂಡಿವೆ. ನೀವು ಆರ್ಡರ್ ಮಾಡಿದರೆ ಸಾಕು, ಕೆಲವೇ ಗಂಟೆಗಳ ಒಳಗಾಗಿ ಗೂಡ್ಸ್‌ಗಳು ನಿಮ್ಮ ಮನೆಬಾಗಿಲಲ್ಲಿ ಸಿದ್ಧ! ಆನ್‌ಲೈನ್ ಮಾರ್ಕೆಟಿಂಗ್ ಇವತ್ತು ಮುಂಚೂಣಿಯಲ್ಲಿದೆ. ಅಮೆಜಾನ್, ಫ್ಲಿಫ್ಕಾರ್ಟ್‌ನಂಥ ಆನ್‌ಲೈನ್ ಸಂಸ್ಥೆಗಳಿಗೆ ವಸ್ತುಗಳನ್ನು ಮಾರುವುದೇ ಮುಖ್ಯ ಬಿಸಿನೆಸ್. ಮೊಬೈಲ್ ಮೂಲಕ ಆದೇಶ ಕೊಟ್ಟರೆ ಹೊಣೆ ಮುಗಿದ ಹಾಗೆ. ಅಂಗಡಿಯತ್ತ ಸುಳಿಯುವ ಅಗತ್ಯವೇ ಇಲ್ಲ. ಡಿಜಿಟಲ್ ಯುಗದಲ್ಲಿ ಮಾರುಕಟ್ಟೆಯ ವಿಧಾನಗಳು ನವೀಕರಣಗೊಂಡಿವೆ. ಮಾರುಕಟ್ಟೆ ನಿರತ ಕಂಪೆನಿಗಳ ಒಳಗೆಯೇ ಪೈಪೋಟಿಗಳಿವೆ, ಮಾರುಕಟ್ಟೆಯನ್ನು ಧ್ರುವೀಕರಣಗೊಳಿಸುವ ಯತ್ನ ನಡೆದಿದೆ. ಸುಪ್ರಸಿದ್ಧ ಗ್ಲೆಕೊÕ ಮತ್ತು ಅಮೆರಿಕನ್ ಎಸ್ಕಯೇಫ್ ಕಂಪೆನಿಗಳು ಪರಸ್ಪರ ಜೊತೆಯಾಗಿವೆ. ವಿಟಮಿನ್ ತಯಾರಿಸಿದ್ದ ಇ-ಮರ್ಕ್ ಇಂದು ಎಮ್‌ಎಸ್‌ಡಿ, ಪಟ್ನಿ ಕಂಪ್ಯೂಟರ್ಸ್ ಅಮ್‌ಗೆಟ್‌ನಲ್ಲಿ ಲೀನವಾಗಿದೆ.
ಮಾರುವ ಪ್ರಕ್ರಿಯೆಯಲ್ಲಿ ಮಾಧ್ಯಮಗಳ ಪಾತ್ರವೂ ದೊಡ್ಡದೇ. ದೂರದರ್ಶನದ ವಾಹಿನಿಗಳಲ್ಲಿ ಜಾಹೀರಾತುಗಳ ನಡುವೆ ಕಾರ್ಯಕ್ರಮಗಳನ್ನು ಹುಡುಕುವ ಸ್ಥಿತಿ ಬಂದಿದೆ. ರಾಜಕಾರಣವೂ ಮಾರುಕಟ್ಟೆಯೇ. ಇದನ್ನು ಬಿಕರಿ ಮಾಡಿಕೊಳ್ಳುವ ಶಕ್ತಿ ಇದ್ದವನು ಮಾತ್ರ ಗೆಲ್ಲುತ್ತಾನೆ. ಒಂದರ್ಥದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರ ಯಶಸ್ಸು ಇರುವುದು ಈ ಕಲೆಯಲ್ಲಿಯೇ. ಇದನ್ನು ಸಮರ್ಥವಾಗಿ ರೂಪಿಸುತ್ತಿರುವವರು ಅವರದೇ ಪಕ್ಷದ ಅಧ್ಯಕ್ಷರಾದ ಅಮಿತ್ ಶಾ.
ಬಹುಶಃ ಮಾರುಕಟ್ಟೆಯ ತೀವ್ರತೆ ಈಗ ಇದ್ದಷ್ಟು ಹಿಂದೆ ಇರಲಿಲ್ಲ. ಈ ಹಿಂದಿನ ಎಷ್ಟೋ ಸಾಮಗ್ರಿಗಳು ಗುಣಮಟ್ಟದಲ್ಲಿಯೇ ಶ್ರೇಷ್ಠವಾಗಿದ್ದುದರಿಂದ ಅವುಗಳಿಗೆ ಮಾರುಕಟ್ಟೆ ತಂತ್ರದ ಅಗತ್ಯವೇ ಇರಲಿಲ್ಲ. ಹಳೆಯ ಎಷ್ಟೋ ವಸ್ತುಗಳು ಈಗಲೂ ಬಾಳಿಕೆ ಬರುತ್ತಿವೆ. ರಾಜ್‌ಕಪೂರ್‌ನಿಂದ ತೊಡಗಿ ರಾಜಕುಮಾರ್‌ವರೆಗೆ ಯಾರೂ ಪ್ರಚಾರಾತ್ಮಕ ಪೂರ್ವಭಾವಿ ಶೋಗಳಲ್ಲಿ ಭಾಗವಹಿಸುವ ಪರಿಪಾಠ ಇರಲಿಲ್ಲ. ಈಗ ಸಿನೆಮಾಗಳ ಗುಣಮಟ್ಟ ಹೇಗಿದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ , ಅವರ ಪ್ರಮೋಶನ್ ಪ್ರಕ್ರಿಯೆಯೇ ಎಲ್ಲರನ್ನೂ ಆಕರ್ಷಿಸಿಬಿಡುತ್ತದೆ.
ನಿಮ್ಮ ಆರೋಗ್ಯ ಅಥವಾ ವಾಹನ ವಿಮೆ ಕೊನೆಯ ದಿನ ತಲುಪುತ್ತಿದೆಯೇ? ನೀವು ಮನೆ ಖರೀದಿಸಲು ಹುಡುಕುತ್ತಿರುವಿರೆ ಅಥವಾ ಹಣಹೂಡಿಕೆಯಲ್ಲಿ ಆಸಕ್ತರೆ? ಏನು ಖರೀದಿಸಲು ಯತ್ನಿಸುತ್ತಿರುವಿರಿ? ನಿಮಗೆ ಅನೇಕ ಬಾರಿ ಅರಿಯದ ಕ್ರಮಾಂಕದ ಫೋನ್ ಬರುತ್ತಿರಬಹುದು. ಬಕಪಕ್ಷಿಗೆ ಮೀನಿನಲ್ಲಿ ಕಣ್ಣಿರುವಂತೆ ನಿಮ್ಮನ್ನು ಹಿಡಿಯಲು ಶತಾಯಗತಾಯ ಯತ್ನ ನಡೆದಿರಬಹುದು. ಫೋನ್ ಮಾಡುವವರಿಗೆ ನಿಮ್ಮ ಸಂಖ್ಯೆ ಸಿಕ್ಕಿರುವುದು ಹೇಗೆಂದು ನೀವು ಅಚ್ಚರಿಪಡಬೇಡಿ. ಅವರು ಅಪರಿಚಿತರು ಮತ್ತು ಆಗೋಚಿತರು. ಮಾರುಕಟ್ಟೆಯ ಕಾಲದಿಂದಾಗಿ ನೀವಿಬ್ಬರೂ ಪರಸ್ಪರ ಮಾತನಾಡುತ್ತಿರುವಿರಿ ವಾಸ್ತವದಲ್ಲಿ ಬಳಕೆದಾರರಿಗೆ ಆಯಾಯ ವಸ್ತುವಿನ ಅಗತ್ಯವಿರುವದರಿಂದಲೇ ಅವರು ಮಾರುಕಟ್ಟೆಗೆ ಬರುತ್ತಾರೆ. ಅವರಿಗೆ ಆಯ್ಕೆಗಳಿವೆ. ಗುಣಮಟ್ಟ ಮತ್ತು ದರಗಳ ವಿಚಾರದಲ್ಲಿ ಕೆಲವೊಮ್ಮೆ ದರಕ್ಕೇ ಹೆಚ್ಚಿನ ಮಹತ್ವ ಕೊಡುತ್ತಾರೆ.
ಹಾಗಾಗಿ, ಹೊಸ ಜಗತ್ತಿನ ವಿಶೇಷವೆಂದರೆ ಸೂಕ್ಷ್ಮಜ್ಞತೆ ಮತ್ತು ಕೌಶಲವಿದ್ದರೆ ಏನನ್ನೂ ಮಾರಿಕೊಳ್ಳಬಹುದು! ದೇಹ ದಾಢìÂತೆಯಿದ್ದವನು ವ್ಯಾಯಾಮ ಗುರುವಾಗಬಹುದು. ಸ್ವರದಿಂದ ಸಂಗೀತಗಾರನಾಗಿ, ರೂಪದಿಂದ ಮಾಡೆಲ್ ಆಗಿ ಜಗತøಸಿದ್ಧಿ ಪಡೆಯಬಹುದು. ಚೆನ್ನಾದ ಮಾತುಗಾರರಿಗೆ ವಿಶೇಷ ಬೇಡಿಕೆ ಇದ್ದೇ ಇದೆಯಲ್ಲ- ಅದು ಅವರವರ ಮಾರುಕಟ್ಟೆಯ ಕೌಶಲವನ್ನು ಅನುಸರಿಸಿದೆ.
ನಾನು ರಷ್ಯಾ,ಚೀನಾ, ದಕ್ಷಿಣ ಏಷ್ಯಾ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕ ಸಹಿತ ಹದಿನೆಂಟಕ್ಕೂ ಹೆಚ್ಚು ದೇಶಗಳಲ್ಲಿ ಆಗಾಗ ಪ್ರಯಾಣ ಮಾಡುತ್ತಿರುತ್ತೇನೆ. ಎÇÉೆಲ್ಲೂ ಕಾಣುವುದು ಮಾರುವುದರಲ್ಲಿ ತೊಡಗಿಕೊಂಡ ಜನತೆಯನ್ನು! ವಿವಿಧ ಪ್ರಾಯೋಗಿಕ ವಸ್ತುಗಳನ್ನು ಮತ್ತು ತತ್ವಗಳನ್ನು ಮಾರುತ್ತಲೇ ಇರುತ್ತಾರೆ- ಹಲವು ರೀತಿಗಳಿಂದ, ಹಲವು ರೂಪಗಳಿಂದ. ಮಾರುಕಟ್ಟೆಯ ಮಾಯೆ ಜಗವೆಲ್ಲ ಸುತ್ತಿದೆ. ಮುಕ್ತಿ ಕಷ್ಟವೇ.
– ಎಸ್. ಜಿ. ಹೆಗ್ಡೆ