ನವ ದೆಹಲಿ : ಕಚ್ಚಾ ತೈಲ ದರವು ಬ್ಯಾರೆಲ್‌ಗೆ 67 ಅಮೆರಿಕನ್ ಡಾಲರ್ ಗೆ ಹೆಚ್ಚಳವಾಗಿದೆ. ಭಾರತದಲ್ಲಿ ಕೋವಿಡ್-19 ಸೋಂಕಿನ ಎರಡನೇ ಅಲೆಯ ಕಾರಣದಿಂದಾಗಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದ್ದರ ಪರಿಣಾಮ ಹಾಗೂ ಕೋವಿಡ್ ಸೋಂಕಿನ ಕಟ್ಟು ನಿಟ್ಟಿನ ಲಾಕ್ ಡೌನ್, ಹಾಫ್ ಲಾಕ್ ಡೌನ್, ನೈಟ್ ಕರ್ಫ್ಯೂ ನಂತಹ ನಿರ್ಬಂಧಗಳ ಕಾರಣದಿಂದಾಗಿ ಬೇಡಿಕೆಯು ಕುಸಿದಿದೆ ಮತ್ತು ಜಾಗತಿಕ ಆರ್ಥಿಕ ಚೇತರಿಕೆಯ ಬಗೆಗಿನ ಆಶಾವಾದವು ಸರಿದೂಗಿದ್ದರ ಪರಿಣಾಮ ಕಚ್ಚಾ ತೈಲ ಬೆಲೆ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ತಿಂಗಳಿನಲ್ಲಿ ಕಚ್ಚಾ ತೈಲ ಬೆಲೆಗಳು ಸತತವಾಗಿ ಏರಿಕೆಗೊಂಡ ಪರಿಣಾಮ ಬ್ರೆಂಟ್ ಕಚ್ಚಾ ತೈಲ ಬೆಲೆ ಶೇಕಡಾ 6ರಷ್ಟು ಏರಿಕೆಗೊಂಡಿದೆ.
ಓದಿ : ಎಸ್ ಬಿ ಐ ಗ್ರಾಹಕರು ಈ ಕೆಲಸಕ್ಕಾಗಿ ಬ್ಯಾಂಕ್ ಗೆ ಹೋಗಬೇಕೆಂದಿಲ್ಲ..! ಮಾಹಿತಿ ಇಲ್ಲಿದೆ.
ಇನ್ನು, ಭಾರತದಲ್ಲಿ ಕಳೆದ ವರ್ಷ ಆಗಸ್ಟ್ ನಿಂದ ಗ್ಯಾಸೋಲಿನ್ ಮಾರಾಟದ ಪ್ರಮಾಣವು ಅತ್ಯಂತ ಕುಸಿತ ಕಂಡಿದ್ದು, ಡೀಸೆಲ್ ಮಾರಾಟವು ಅಕ್ಟೋಬರ್ ತಿಂಗಳಿನಿಂದ ಕಡಿಮೆ ಆಗಿದೆ.
ಜಾಗತಿಕ ಮಟ್ಟದಲ್ಲಿ ಕೋವಿಡ್ 19 ಲಸಿಕೆಗಳ ಲಭ್ಯತತೆ ಹೆಚ್ಚಾಗುತ್ತಿದ್ದು, ಜಾಗತಿಕ ವಲಯದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿದೆ. ಹೀಗಾಗಿ 2021 ರಲ್ಲಿ ತೈಲ ಬೇಡಿಕೆಯು ಮರುಕಳಿಸುವ ಸಾಧ್ಯತೆಯ ಮೇಲೆ ಕಚ್ಚಾ ತೈಲ ಬೆಲೆ ಏರಿಕೆಗೊಂಡಿದೆ ಎಂದು ವರದಿಯಾಗಿದೆ.
ಓದಿ : ಕೋವಿಡ್ ನಿರ್ವಹಣೆ ಯುವ ವೈದ್ಯರ ಹೆಗಲಿಗೆ: 4 ತಿಂಗಳ ಕಾಲ ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ