Advertisement

Jamnagar; ಅನಂತ್-ರಾಧಿಕಾ ವಿವಾಹಪೂರ್ವ ಸಂಭ್ರಮೋತ್ಸವಲ್ಲಿ ನೂರಾರು ದಿಗ್ಗಜರು

07:34 PM Mar 01, 2024 | Team Udayavani |

ಜಾಮ್ ನಗರ್ (ಗುಜರಾತ್) : ಉದ್ಯಮ ರಂಗದ ದಿಗ್ಗಜ ಮುಕೇಶ್ ಅಂಬಾನಿ ಮತ್ತು ನೀತಾ ಅವರ ಪುತ್ರ ಅನಂತ್ ಅಂಬಾನಿ ಅವರ ಅದ್ಧೂರಿ ಮೂರು ದಿನಗಳ ಪ್ರಿ ವೆಡ್ಡಿಂಗ್ ಇಂದು ಶುಕ್ರವಾರ (ಮಾರ್ಚ್ 1) ಜಾಮ್‌ನಗರದಲ್ಲಿರುವ ರಿಲಯನ್ಸ್ ಗ್ರೀನ್ಸ್ ಕಾಂಪ್ಲೆಕ್ಸ್‌ನಲ್ಲಿ ಆರಂಭವಾಗಿದ್ದು, ಸಂಭ್ರಮ ಕಳೆಗಟ್ಟಿದ್ದು ವಿಶ್ವದ ಉದ್ಯಮ, ರಾಜಕೀಯ, ಕ್ರೀಡೆ, ಸಿನಿಮಾ ಸೇರಿ ವಿವಿಧ ರಂಗದ ಗಣ್ಯಾತೀಗಣ್ಯರು ಭಾಗಿಯಾಗಿದ್ದಾರೆ.

Advertisement

ವೈಭವಯುತ ಸಾಮಾರಂಭಕ್ಕೆ ಈಗಾಗಲೇ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ, ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್, ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ, ರಶೀದ್ ಖಾನ್, ಸೂರ್ಯಕುಮಾರ್ ಯಾದವ್, ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ರಣಬೀರ್ ಕಪೂರ್ ಸೇರಿದ್ದಾರೆ.

ಪಾಪ್‌ಸ್ಟಾರ್ ರಿಹಾನ್ನಾ ಕೂಡ ಜಾಮ್‌ನಗರಕ್ಕೆ ಬಂದಿಳಿದಿದ್ದು, ಅವರು ಈವೆಂಟ್‌ನಲ್ಲಿ ಪ್ರದರ್ಶನ ನೀಡಲಿದ್ದಾರೆ. ವಿಶ್ವಪ್ರಸಿದ್ಧ ಭ್ರಮೆವಾದಿ ಡೇವಿಡ್ ಬ್ಲೇನ್ ಮತ್ತು ಅಗ್ರ ಭಾರತೀಯ ಕಲಾವಿದರಾದ ಅರಿಜಿತ್ ಸಿಂಗ್, ಅಜಯ್-ಅತುಲ್ ಮತ್ತು ದಿಲ್ಜಿತ್ ದೋಸಾಂಜ್ ಅವರು ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಗಣ್ಯ ಪ್ರೇಕ್ಷಕರನ್ನು ಆಕರ್ಷಿಸಲಿದ್ದಾರೆ.

ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಸ್ಸಿಮ್ ಅಲ್ ಥಾನಿ, ಭೂತಾನ್ ರಾಜ ಮತ್ತು ರಾಣಿ, ಬೊಲಿವಿಯಾದ ಮಾಜಿ ಅಧ್ಯಕ್ಷ ಜಾರ್ಜ್ ಕ್ವಿರೋಗಾ, ಆಸ್ಟ್ರೇಲಿಯದ ಮಾಜಿ ಪ್ರಧಾನಿ ಕೆವಿನ್ ರುಡ್, ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಮತ್ತು ಸ್ವೀಡನ್ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ ಮಹಾಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ದಿಗ್ಗಜರ ಪೈಕಿ ಬ್ಲ್ಯಾಕ್‌ರಾಕ್‌ನ ಸಿಇಒ ಲ್ಯಾರಿ ಫಿಂಕ್,ಡಿಸ್ನಿ ಸಿಇಒ ಬಾಬ್ ಇಗರ್ , ಶ್ವಾರ್ಜ್‌ಮನ್ – ಬ್ಲಾಕ್‌ಸ್ಟೋನ್ ಅಧ್ಯಕ್ಷ ಸ್ಟೀಫನ್ ಎ., ಮೋರ್ಗಾನ್ ಸ್ಟಾನ್ಲಿಯ ಸಿಇಒ ಟೆಡ್ ಪಿಕ್,ಬ್ಯಾಂಕ್ ಆಫ್ ಅಮೆರಿಕ ಅಧ್ಯಕ್ಷ ಬ್ರಿಯಾನ್ ಥಾಮಸ್ ಮೊಯ್ನಿಹಾನ್, ADNOC ಸಿಇಒ ಸುಲ್ತಾನ್ ಅಹ್ಮದ್ ಅಲ್-ಜಾಬರ್, ಇಸ್ರೇಲಿ ಟೆಕ್ ಹೂಡಿಕೆದಾರ ಯೂರಿ ಮಿಲ್ನರ್, ಅಡೋಬ್‌ನ ಸಿಇಒ ಶಂತನು ನಾರಾಯಣ್, ಲೂಪಾ ಸಿಸ್ಟಮ್ಸ್ ಸಿಇಒ ಜೇಮ್ಸ್ ಮುರ್ಡೋಕ್, ಹಿಲ್‌ಹೌಸ್ ಕ್ಯಾಪಿಟಲ್‌ನ ಸ್ಥಾಪಕ ಜಾಂಗ್ ಲೀ, ಬಿಪಿಯ ಸಿಇಒ ಮುರ್ರೆ ಆಚಿನ್‌ಕ್ಲೋಸ್, ಎಕ್ಸಾರ್ ನ ಸಿಇಒ ಜಾನ್ ಎಲ್ಕಾನ್, ಸಿಸ್ಕೋ ಸಿಸ್ಟಮ್ಸ್‌ನ ಮಾಜಿ ಅಧ್ಯಕ್ಷ ಮತ್ತು ಸಿಇಒ ಜಾನ್ ಚೇಂಬರ್ಸ್, ಬ್ರೂಕ್‌ಫೀಲ್ಡ್ ಅಸೆಟ್ ಮ್ಯಾನೇಜ್ಮೆಂಟ್ ಸಿಇಒ ಬ್ರೂಸ್ ಫ್ಲಾಟ್, ಮೆಕ್ಸಿಕನ್ ಬಿಸಿನೆಸ್ ಮ್ಯಾಗ್ನೇಟ್ ಮತ್ತು ಹೂಡಿಕೆದಾರ ಕಾರ್ಲೋಸ್ ಸ್ಲಿಮ್, ಬ್ರಿಡ್ಜ್‌ವಾಟರ್ ಅಸೋಸಿಯೇಟ್ಸ್‌ನ ಸ್ಥಾಪಕ ರೇ ಡಾಲಿಯೊ, ಬರ್ಕ್‌ಷೈರ್ ಹಾಥ್‌ವೇ ವಿಮಾ ಕಾರ್ಯಾಚರಣೆಗಳ ಉಪಾಧ್ಯಕ್ಷ ಅಜಿತ್ ಜೈನ್ ಮತ್ತು ಅಮೇರಿಕನ್-ಬ್ರಿಟಿಷ್ ಉದ್ಯಮಿ ಲಿನ್ ಫಾರೆಸ್ಟರ್ ಡಿ ರಾಥ್‌ಸ್ಚೈಲ್ಡ್ ಅವರು ಸಂಭ್ರಮದಲ್ಲಿ ಭಾಗಿಯಾಗಲಿರುವ ಗಣ್ಯಾತೀಗಣ್ಯರ ಪಟ್ಟಿಯಲ್ಲಿದ್ದಾರೆ.

Advertisement

ಅನಂತ್ ಅಂಬಾನಿ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಜುಲೈ 12 ರಂದು ಮುಂಬೈ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next