ಮುಂಬಯಿ: ಜಗತ್ತಿನ ಬದಲಾವಣೆಗೆ ಪ್ರೇರಕ ಶಕ್ತಿಯಾಗಿದ್ದ ನೆಲ್ಸನ್ ಮಂಡೇಲ ಶ್ರೇಷ್ಠ ಮಾನವತಾವಾದಿ. ಮಾನವ ಹಕ್ಕುಗಳು ಮತ್ತು ಸಮಾನತೆಗೆ ಹೋರಾಡಿದ ಧೀಮಂತ ನಾಯಕ. ಅವರು ತೋರಿದ ಹಾದಿಯಲ್ಲಿ ಎಷ್ಟು ದೂರ ಸಾಗಿದ್ದೇವೆ ಎನ್ನುವುದಕ್ಕಿಂತ, ನಾವು ಆ ಪಥದಲ್ಲಿ ಇನ್ನೆಷ್ಟು ದೂರ ನಡೆಯಬೇಕಾಗಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಜಾಗತಿಕ ವರ್ಣ ನೀತಿ ವಿರೋಧಿ ಹೋರಾಟಗಾರ, ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದ ನೆಲ್ಸನ್ ಮಂಡೇಲ ಅವರು ನಿಜವಾದ ಗಾಂಧಿ ವಾದಿಯಾಗಿದ್ದರು ಎಂದು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಡಬ್ಲ್ಯುಎಚ್‌ಆರ್ ಪೀಪಲ್ಸ್ ಕೌನ್ಸಿಲ್ ವರ್ಲ್ಡ್ ಹ್ಯೂಮನ್ ರೈಟ್ಸ್‌ನ ಅಧ್ಯಕ್ಷ, ಸಮಾಜ ರತ್ನ, ಲಯನ್ ಡಾ| ಕೆ. ಟಿ. ಶಂಕರ ಅವರು ಅಭಿಪ್ರಾಯಪಟ್ಟರು.
ಮಾ. 31ರಂದು ಅಪರಾಹ್ನ ಸಾಂತಾಕ್ರೂಜ್‌ಪೂರ್ವದ ಬಿಲ್ಲವ ಭವನದಲ್ಲಿ ವಿಶ್ವಮಾನವತಾವಾದಿ ಡಬ್ಲ್ಯುಎಚ್‌ಆರ್ ಪೀಪಲ್ಸ್ ಕೌನ್ಸಿಲ… ಇದರ ವತಿಯಿಂದ ಆಯೋಜಿಸಿದ್ದ ಜಾಗತಿಕ ಮಾನವಾಧಿಕಾರ ಪ್ರತಿಭಾ ಮಹಾಸಮ್ಮೇಳನ -2019 ಮತ್ತು ಅಂತಾರಾಷ್ಟ್ರೀಯ ಮಾನವಾಧಿಕಾರ ನೆಲ್ಸನ್ ಮಂಡೇಲ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪ್ರದಾನ ಮತ್ತು ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣ, ಸಾಂಸ್ಕೃತಿಕ, ಕಲೆ, ಕ್ರೀಡೆ, ಸಾಹಿತ್ಯ, ಉದ್ಯಮಶೀಲತೆ, ನಶಾಮುಕ್ತಿ ಅಭಿಯಾನ, ಸ್ವತ್ಛ ಭಾರತ, ಸಾಕ್ಷರ ಭಾರತ, ಸಾಮಾಜಿಕ ಸುರûಾ ರಾಷ್ಟ್ರೀಯ ಕರ್ತವ್ಯ, ಪರ್ಯಾವರಣ, ಸಂಸ್ಕಾರ, ವೈದ್ಯಕೀಯ, ಮತ್ತು ಮೂಲ ಶಿಕ್ಷಣ ಇನ್ನಿತರ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸಮ್ಮಾನಿಸಲಾಗಿದೆ. ಪ್ರಶಸ್ತಿಗೆ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿದ್ದು, ನಿರ್ಣಾಯಕ ಮಂಡಳಿಯ ತೀರ್ಮಾನದಂತೆ ಕೆಲವನ್ನು ಮಾತ್ರ ಆಯ್ಕೆ ಮಾಡಲು ಸಾಧ್ಯವಾಯಿತು. ತಮ್ಮ ಸಾಧನೆ ಜನೋಪಯೋಗಿಯಾಗಿದ್ದು ಲೋಕದ ಶಾಂತಿಯನ್ನು ಕಾಪಾಡಲಿ ಎಂದು ಹಾರೈಸಿದ ಅವರು ಸಹಕರಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬೆಹರೆನ್ ಡಬ್ಲ್ಯುಎಚ್‌ಆರ್‌ಪಿಸಿ ಇದರ ಅಧ್ಯಕ್ಷ ಲೀಲಾಧರ ಬೈಕಂಪಾಡಿ ಮಾತನಾಡಿ, ನಾವು ಮಾಡುವ ಕಾರ್ಯಕ್ಕೆ ಹೆದರಬೇಕೇ ವಿನಃ ಭಗವಂತನಿಗಲ್ಲ. ಭಗವಂತ ನಮ್ಮನ್ನು ಕ್ಷಮಿಸುತ್ತಾನೆ. ಆದರೆ ಮಾಡಿದ ಕೆಟ್ಟ ಕಾರ್ಯ ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ಮಾನವ ಕಲ್ಯಾಣಕ್ಕಾಗಿ ಜಾತಿ, ಧರ್ಮ, ವರ್ಗ, ಭೇದ, ಪಂಗಡಗಳನ್ನು ಮೀರಿನಿಂತ ಮಾನವ ಧರ್ಮ ಇಂದು ಬೇಕಾಗಿದೆ. ಜನಾಂಗೀಯ ತಾರತಮ್ಯದ ವಿರುದ್ಧ ಜೀವನ ತ್ಯಾಗ ಮಾಡಿದ ಶ್ರೇಷ್ಠ ವ್ಯಕ್ತಿತ್ವದ ನೆಲ್ಸನ್ ಮಂಡೇಲ ಅವರ ಬದುಕು ನಮಗೆಲ್ಲ ಆದರ್ಶವಾಗಿದೆ ಎಂದು ನುಡಿದು, ಬೆಹರೇನ್ ಪರವಾಗಿ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಡಬ್ಲ್ಯುಎಚ್‌ಆರ್ ಪೀಪಲ್ಸ… ಕೌನ್ಸಿಲ್ ವರ್ಲ್ಡ್ ಹ್ಯೂಮನ್ ರೈಟ್ಸ್‌ನ ಅಧ್ಯಕ್ಷ ಸಮಾಜ ರತ್ನ, ಲಯನ್ ಡಾ| ಕೆ. ಟಿ. ಶಂಕರ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಿದರು.
ಗೋವಾ ರಾಜ್ಯ ಡಬ್ಲ್ಯುಎಚ್‌ಆರ್‌ಪಿಸಿ ಇದರ ಅಧ್ಯಕ್ಷ ಸುನೀಲ್ ಶೇಟ್, ರಾಷ್ಟ್ರೀಯ ಡಬ್ಲ್ಯುಎಚ್‌ಆರ್‌ಪಿಸಿ ಇದರ ಪ್ರಧಾನ ಕಾರ್ಯದರ್ಶಿ ಡಾ| ಎ. ಎನ್. ರಸನ್‌ಕುಟೆ, ತಮಿಳುನಾಡು ರಾಜ್ಯದ ಅಧ್ಯಕ್ಷ, ಡಬ್ಲ್ಯುಎಚ್‌ಆರ್‌ಪಿಸಿ ಇದರ ನಿರ್ದೇಶಕ ಮುಪ್ಪನಾರ ಮುರುಗನ್, ಭಾವುರಾಜ್ ತಯಾಡೆ ಮತ್ತು ರೆಖ್ ರಾಜ್, ಮಹಾರಾಷ್ಟ್ರ ಡಬ್ಲ್ಯುಎಚ್‌ಆರ್‌ಪಿಸಿ ಇದರ ಪಿಅರ್‌ಒ ಆಕಾಶವಾಣಿ ಗಾಯಕಿ ರೇಖಾ ಮಹಾಜನ್, ಉಪಾಧ್ಯಕ್ಷೆಯರಾದ ಸುಜಾತಾ ಕೋಟ್ಯಾನ್ ಮತ್ತು ಆಶಾ ಶೆಟ್ಟಿ, ಮಾನವ ಸೇವಾ ಸಂಘದ ಅಧ್ಯಕ್ಷ ನಂದಾ ಕಿಶೋರ್ ಪಾಟೀಲ…, ನಾಗ್ಪುರ ಡಬ್ಲ್ಯುಎಚ್‌ಆರ್‌ಪಿಸಿ ಇದರ ರಾಷ್ಟೀಯ ಕಾರ್ಯದರ್ಶಿ ಚಂದ್ರಕಾಂತ ವಿಶ್ರೋಜ್ವರ್, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷೆ ಯಶೋದಾ ನಾಗರಾಜ್ ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಚಂದ್ರಕಲಾ ಆರ್. ಶೆಟ್ಟಿ, ಕಾರ್ಯದರ್ಶಿ ಧರ್ಮೇಂದ್ರ ಪ್ರಜಾಪತಿ ಇವರು ಪಾಲ್ಗೊಂಡಿದ್ದರು.
ಸದಾಶಿವ ವಾಲ್ಪಾಡಿ, ವಸಂತಿ ಶೆಟ್ಟಿ, ಜ್ಯೋತಿ ಶೆಟ್ಟಿ, ಶಿರೋಡ್ಕರ್, ಸತೀಶ ಪೂಜಾರಿ, ಸದಾನಂದ ಪೂಜಾರಿ, ಗುಣಕಾಂತ ಶೆಟ್ಟಿ ಕರ್ಜೆ, ಶ್ರೆಯಾಸ್ ಪೂಜಾರಿ, ಪೃಥ್ವೀಶ್ ಶೆಟ್ಟಿ, ಧೃತಿ ಅಶೋಕ ಶೆಟ್ಟಿ, ದಿಶಾ ವೆಂಕಟೇಶ್ ಗೌಡ, ನೀಲಂ ಬಂದೇವಾಡ್ಕರ್ ಅವರು ಸಹಕರಿಸಿದರು. ನ್ಯಾಯವಾದಿ ನಯನ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶ ಭಕ್ತಿಯ ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡಿತು. ದೇಶ ವಿದೇಶಗಳಿಂದ ಅತಿಥಿಗಳು, ಗಣ್ಯರು, ಪದಾಧಿಕಾರಿಗಳು, ಹಿತೈಷಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ ಅಮೀನ್