Advertisement

ಡಾ.ಪ್ರಿಯಾ ಶರತ್‌ಗೆ ಜಾಗತಿಕ ಗೌರವ

11:40 PM Aug 30, 2019 | Team Udayavani |

ಬೆಂಗಳೂರು: ಕೆನಡಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಸೌಂದರ್ಯ ಮೇಳ-2019ರಲ್ಲಿ ಮಂಗಳೂರು ಮೂಲದ ಡಾ. ಕೆ.ಎಸ್‌. ಪ್ರಿಯಾ ಶರತ್‌ ರನ್ನರ್‌ ಅಪ್‌ ವಿಜೇತರಾಗಿ ಸಾಧನೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಐಎಫ್ಎಸ್‌ ನಿವೃತ್ತ ಅಧಿಕಾರಿ ಕೆ.ಸುಂದರ್‌ ಮಾತನಾಡಿ, ಡಾ.ಪ್ರಿಯಾ ಶರತ್‌ ಬೆಂಗಳೂರಿನಲ್ಲಿ ಚರ್ಮರೋಗ ಹಾಗೂ ಸೌಂದರ್ಯ ಚಿಕಿತ್ಸಾ ತಜ್ಞರಾಗಿ ಕೆಲಸ ಮಾಡುತ್ತಿದ್ದು, ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳಿಂದ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ವಿಜೇತರಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Advertisement

ಇದಕ್ಕೂ ಮೊದಲು ಪ್ರಿಯಾ ಅವರು ವಿಶ್ವಸಂಸ್ಥೆ ನೀಡುವ ಅಂತಾರಾಷ್ಟ್ರೀಯ ಮಿಸೆಸ್‌ ಇಂಡಿಯಾ ಪ್ರಶಸ್ತಿ ಹಾಗೂ ಮಿಸೆಸ್‌ ಇಂಡಿಯಾ ಗ್ಯಾಲಕ್ಸಿ-2018 ಪ್ರಶಸ್ತಿಗೂ ಭಾಜನರಾಗಿದ್ದರು. ಈಗ ವಿಶ್ವಮಟ್ಟದ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ವಿಜೇತರಾಗಿ ಹೊಸ ದಾಖಲೆ ಮಾಡಿದ್ದಾರೆಂದು ತಿಳಿಸಿದರು. ಡಾ. ಕೆ.ಎಸ್‌. ಪ್ರಿಯಾ ಶರತ್‌ ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಡಮಾರ್‌ ಹೀಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದು,

ಬಡವರು, ಗ್ರಾಮೀಣ ಜನರಿಗೆ ಆಗಾಗ್ಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ಜಾಗೃತಿ ಮೂಲಕ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿ ಕೊಂಡಿದ್ದಾರೆ. ಈಗ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ವಿಜೇತರಾದ ಬಳಿಕ ತಮ್ಮ ಸಾಮಾಜಿಕ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಯೋಚಿಸಿದ್ದಾರೆ. ಅದರಲ್ಲಿ ಮುಖ್ಯ ವಾಗಿ ಆಸಿಡ್‌ ದಾಳಿಗೆ ತುತ್ತಾದ ಸಂತ್ರಸ್ತ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ಜೊತೆಗೆ ಅವರಿಗೆ ಪುನರ್ವಸತಿ ಕಲ್ಪಿಸಬೇಕೆಂಬ ಉದ್ದೇಶ ಹೊಂದಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next