Advertisement
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಇನ್ನಷ್ಟು ಜನಪ್ರಿಯ ಗೊಳಿಸುವ, ಯೋಗದ ತವರಾದ ಭಾರತದಲ್ಲಿ ಪ್ರತಿ ಹಳ್ಳಿ-ನಗರಗಳಲ್ಲೂ ಯೋಗದ ಮಹತ್ವ, ಯೋಗದಲ್ಲಿ ಅಡಗಿದ ಆರೋಗ್ಯ ಸತ್ವ, ಆಯು ರ್ವೇದ, ಅಧ್ಯಾತ್ಮ, ಭಾರತೀಯ ಸಂಸ್ಕೃತಿ- ಪರಂಪರೆ, ಸಂಸ್ಕಾರವನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ ಯೋಗ ವಿಶ್ವವಿದ್ಯಾಲಯ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಅದಕ್ಕೆ ಪೂರಕವಾಗಿ ಗ್ಲೋಬಲ್ ಹಿಂದೂ ಕಾಲೇಜುಗಳ ಆರಂಭಕ್ಕೆ ಮುಂದಾಗಿದೆ.
Related Articles
Advertisement
ಯೋಗ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಯೋಗದ ಜತೆಗೆ, ಸಂಸ್ಕೃತಿ, ಅಂತಾ ರಾಷ್ಟ್ರೀಯ ಸಂಬಂಧ, ಬಹುಭಾಷೆ, ಕೌಶಲ, ಆಯುರ್ವೇದ…ಇನ್ನಿತರ ವಿಷಯಗಳ ಮನನ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತ ದಿಂದ ವಿಶ್ವದ ವಿವಿಧ ದೇಶಗಳಿಗೆ ಗುಣಮಟ್ಟದ, ಪರಿಪೂರ್ಣ ಯೋಗ ತರಬೇತುದಾರರನ್ನು ಕಳುಹಿಸುವ ಮಹದಾಸೆಯನ್ನು ವಿವಿ ಹೊಂದಿದೆ.
ಆಯುರ್ವೇದ, ಆರೋಗ್ಯ, ಉತ್ತಮ ನಡವಳಿಕೆ, ಹೀಲಿಂಗ್, ಕೌನ್ಸೆಲಿಂಗ್, ನಾದಯೋಗ…ಹೀಗೆ ವಿವಿಧ 100ಕ್ಕೂ ಹೆಚ್ಚು ವಿಷಯಗಳ ಡಿಪ್ಲೊಮಾ ಕೋರ್ಸ್‌ಗಳನ್ನು ಬೆಂಗಳೂರಿನ ಯಲಹಂಕದಲ್ಲಿರುವ ಯೋಗ ವಿವಿ ಹೊಂದಿದೆ. ಯೋಗ ತಜ್ಞರನ್ನು ರೂಪಿಸುವುದರ ಜತೆಗೆ ಸಂಶೋಧನಾಧಾರಿತ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ.
ಯೋಗ ವಿವಿ ಇತರ ವಿವಿಗಳಲ್ಲಿ ಒಂದಾಗದೆ ಪ್ರತ್ಯೇಕ ಹೆಗ್ಗುರುತಿನೊಂದಿಗೆ ಸಾಗಲು ಯೋಜಿಸಿದೆ. ಇಂದಿನ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆ, ಅನ್ವೇಷಣೆಗಳಲ್ಲಿ ಶೇ.1ರಷ್ಟು ಸಹ ಗ್ರಾಮೀಣ ಭಾಗಕ್ಕೆ ತಲುಪುತ್ತಿಲ್ಲವೆಂಬ ನೋವು ಅನೇಕರದ್ದಾಗಿದೆ. ಆದರೆ, ಯೋಗ ವಿವಿಯ ಲಾಭವನ್ನು ಗ್ರಾಮೀಣ ಭಾಗಕ್ಕೆ ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಯೋಗ ವಿವಿ ಗಂಭೀರ ಚಿಂತನೆಗೆ ಮುಂದಾಗಿದೆ.
ಏ.3ರಿಂದ 5ರವರೆಗೆ ಅಂತಾರಾಷ್ಟ್ರೀಯ ಯೋಗ ಸಮಾವೇಶ: ವಿಶ್ವದ ವಿವಿಧ ಯೋಗ ವಿಶ್ವವಿದ್ಯಾಲಯಗಳು, ಯೋಗ ತಜ್ಞರು, ಅನುಭವಿಗಳು ಒಂದೆಡೆ ಸೇರಿ ಚಿಂತನ-ಮಂಥನ ನಡೆಸುವ ನಿಟ್ಟಿನಲ್ಲಿ ಏ.3ರಿಂದ 5ರವರೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಕೆನಡಾ ಪ್ರಧಾನಿ ಸೇರಿದಂತೆ ವಿಶ್ವದ ವಿವಿಧೆಡೆಯ ಸುಮಾರು 10 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು, 250ಕ್ಕೂ ಹೆಚ್ಚು ಯೋಗ ತಜ್ಞರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂದಿನ ಶತಮಾನದಲ್ಲಿ ಯೋಗದ ದೃಷ್ಟಿಕೋನ, ಸಾಗಬೇಕಾದ ಮಾರ್ಗದ ಕುರಿತಾಗಿ ನಡೆಯುವ ಚಿಂತನ-ಮಂಥನದಲ್ಲಿ ವಿಶ್ವದ ಯೋಗ ತಜ್ಞರು ಬೆಳಕು ಚೆಲ್ಲಲಿದ್ದಾರೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. 21ರಂದು ಸಿಎಂ ಸಮ್ಮುಖದಲ್ಲಿ ವೀರಭದ್ರಾಸನ ಗಿನ್ನಿಸ್ ದಾಖಲೆ ಯತ್ನ: ಡಿ.21ರಂದು ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ವೀರಭದ್ರಾಸನ ಪ್ರದರ್ಶನ ನಡೆಯಲಿದ್ದು, ಇದು ಗಿನ್ನಿಸ್ ದಾಖಲೆ ಯತ್ನವಾಗಿರಲಿದೆ. ಫ್ಲೋರಿಡಾದ ಯೋಗ ವಿವಿ, ಬೆಂಗಳೂರು ಕುಲಪತಿ ಯೋಗಿ ದೇವರಾಜ ಅವರ ಮಾರ್ಗದರ್ಶನದಲ್ಲಿ ನಡೆಯುವ ವೀರಭದ್ರಾಸನ ವಿರಾಟ ಸ್ವರೂಪದಲ್ಲಿ 10ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದು, ದಾಖಲೆ ಪ್ರದರ್ಶನ ನೀಡಲಿದೆ.
ಮೋದಿಯವರ ಯತ್ನದಿಂದಾಗಿ ವಿಶ್ವದ 210ಕ್ಕೂ ಹೆಚ್ಚು ದೇಶಗಳು ಯೋಗ ದಿನಾಚರಣೆ ಕೈಗೊಳ್ಳುತ್ತಿವೆ. ಯೋಗ ಆಸನಗಳ ತರಬೇತಿಗೆ ಸೀಮಿತವಾಗದೆ ಭಾರತೀಯ ಸಂಸ್ಕೃತಿ, ಪರಂಪರೆ, ಸಂಸ್ಕಾರ, ಜೀವನ ಶೈಲಿ, ಆಯುರ್ವೇದ ಪದ್ಧತಿಯ ಪುನರುತ್ಥಾನದ ಕಾರ್ಯ ಮಾಡಬೇಕಾಗಿದೆ. ಯೋಗದಲ್ಲಿ ಏಕರೂಪತೆ ಯೂ ಅವಶ್ಯವಾಗಿದೆ. ಆ ಕಾರ್ಯವನ್ನು ಬೆಂಗಳೂರಿನಲ್ಲಿರುವ ಅಮೆರಿಕ ಫ್ಲೋರಿಡಾದ ಯೋಗ ವಿವಿ ಮಾಡಲಿದೆ. -ಡಾ| ಅರಳುಮಲ್ಲಿಗೆ ಪಾರ್ಥಸಾರಥಿ, ಗೌರವ ಚೇರ್ಮನ್, ಯೋಗ ವಿವಿ ಬೆಂಗಳೂರು * ಅಮರೇಗೌಡ ಗೋನವಾರ