Advertisement
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರದ ವಿದ್ಯಾಮಾನಗಳ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಶನಿವಾರ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ “ಎಂಡಪಂಥೀಯರ ಹತ್ಯೆ ಬಲಪಂಥೀಯರ ಮೇಲೆ ಆರೋಪ ಏಕೆ?’ ಎಂಬ ಸಾರ್ವಜನಿಕ ಜನಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಈಗ ಗೌರಿ ಲಂಕೇಶ್ ಹತ್ಯೆ ವಿಚಾರ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತಿರುವ ನಟ ಪ್ರಕಾಶ್ ರೈಗೆ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕರೆ ಅಚ್ಚರಿಯೇನಲ್ಲ. ಶೋಷಣೆಯ ವಿರುದ್ಧ ಬಲಪಂಥೀಯರು ಧರ್ಮ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತಾರೆ. ಆದರೆ, ಶೋಷಣೆಯ ವಿರುದ್ಧ ಗನ್ ಎತ್ತುವವರು ಬಲಪಂಥೀಯರು. ಸಂಘದ ಪ್ರಮುಖರೊಬ್ಬರು ನಿಧನರಾದಾಗ “ನೋ ಚಿಯರ್, ನೋ ಟಿಯರ್’ ಎಂದು ಗೌರಿ ಲಂಕೇಶ್ ಹೇಳಿದ್ದರು.
ಹಾಗಾದರೆ, ಅವರು ಸತ್ತಾಗ ಇದೇ ರೀತಿಯ ಪ್ರತಿಕ್ರಿಯೆಗಳು ಬಂದಾಗ “ಸಾವಿಗೆ ಸಂಭ್ರಮ’ ಎಂದು ಹೇಳುವುದು ಎಷ್ಟು ಸರಿ ಎಂದು ಸೂಲಿಬೆಲೆ ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಹಿಂದೂ ವಿಧಿಜ್ಞ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ವಕೀಲ ವಿರೇಂದ್ರ ಇಚ್ಚಲ್‌ಕರಂಜೀಕರ್, ಹೈಕೋರ್ಟ್ ವಕೀಲ ಎನ್.ಪಿ. ಅಮೃತೇಶ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ್‌ಗೌಡ ವಿಚಾರಗಳನ್ನು ಮಂಡಿಸಿದರು.
ಸಾಧು-ಸಂತರು, ಹಿಂದೂ ಸಂಘನೆಗಳನ್ನು ಟಾರ್ಗೆಟ್ ಮಾಡುವುದು. ಹಿಂದೂ ವ್ಯಕ್ತಿ ಸತ್ತರೆ ಮೌನ, ಮತ್ತೂಬ್ಬರು ಸತ್ತರೆ ತಕ್ಷಣ ಪ್ರತಿಕ್ರಿಯೆ, ಆತ್ಮಹತ್ಯೆಯನ್ನು ಕೊಲೆಯಂದು, ಕೊಲೆ ಆಗಿದ್ದರೆ ಅದನ್ನು ಆತ್ಮಹತ್ಯೆ ಎಂದು ಬಿಂಬಿಸುವ ವ್ಯವಸ್ಥಿತ ಷಡ್ಯಂತ್ರ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ. ಇತ್ತಿಚಿಗೆ ನಡೆದ ಐಜಿಪಿ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಹಿಂದೂ ಮುಖಂಡರು ಮತ್ತು ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಿ ಎಂದು ಹೇಳಲಾಗಿದೆ.
ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಸುಳಿವು ಸಿಕ್ಕಿದೆ. ಆದರೆ, ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಹಾಸ್ಯಾಸ್ಪದ. ಗೌರಿ ಲಂಕೇಶ್, ಕಲಬುರಗಿ, ಪಾನ್ಸಾರೆ, ದಾಬೋಲ್ಕರ್ ಹತ್ಯೆಗಳ ಹಿಂದೆ ಸನಾತನ ಸಂಸ್ಥೆ ಅಲ್ಲ, ನಕ್ಸಲರ ಕೈವಾಡವಿದೆ, ಪ್ರಗತಿಪರರಿಗೆ ಇರುವಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ನಮಗೂ ಇದೆ.’-ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್ ರಾಜ್ಯ ಸಂಯೋಜಕ