Advertisement

Thefte Case: ಕೆಲಸಕ್ಕಿದ್ದ ಮನೆಯಲ್ಲೇ ರೂ. 12 ಲಕ್ಷ. ಚಿನ್ನ ಕದ್ದಳು

11:30 AM Nov 13, 2024 | Team Udayavani |

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಯುವತಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯ ನಿವಾಸಿ ಸೋನಿಯಾ(25) ಬಂಧಿತ ಆರೋಪಿ. ಆಕೆಯಿಂದ 12 ಲಕ್ಷ ರೂ. ಮೌಲ್ಯದ 108 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ದೂರುದಾರರಾದ ಭಾವನಾ ಪತಿ ಹಾಗೂ ಅತ್ತೆ ಜತೆ ಕೋಣನಕುಂಟೆಯ ಅಂಜನಾದ್ರಿ ಲೇಔಟ್‌ನಲ್ಲಿ ಅಪಾರ್ಟ್‌ಮೆಂಟ್‌ ವೊಂದರಲ್ಲಿ ವಾಸವಾಗಿದ್ದಾರೆ. ಭಾವನಾ ಅತ್ತೆ ಅನಾರೋಗ್ಯಕ್ಕೊಳಗಾಗಿದ್ದು, ಅವರನ್ನು ನೋಡಿಕೊಳ್ಳಲು ಸೋನಿಯಾ ಸೇರಿ ಇಬ್ಬರು ಯುವತಿಯನ್ನು ನೇಮಿಸಿಕೊಂಡಿದ್ದರು. ಈ ಮಧ್ಯೆ ಅ.7ರಂದು ದಸರಾ ಹಬ್ಬದ ಪ್ರಯುಕ್ತ ಅನಂತಪದ್ಮನಾಭ ದೇವರ ವ್ರತ ಮಾಡಿದ್ದು, ಬೆಳಗ್ಗೆ ಮನೆಯವರು ಚಿನ್ನಾಭರಣ ಧರಿಸಿ, ಸಂಜೆ ರೂಮಿನ ಪೆಟ್ಟಿಗೆಯಲ್ಲಿ ಇರಿಸಿದ್ದರು. ಅ.31ರಂದು ಪೂಜೆ ಸಲುವಾಗಿ ಪೆಟ್ಟಿಗೆ ತೆರೆದಾಗ ಚಿನ್ನಾಭರಣ ಕಳುವಾಗಿರುವುದು ಗೊತ್ತಾಗಿದೆ.

ಈ ಸಂಬಂಧ ಸೋನಿಯಾ ಮೇಲೆ ಅನುಮಾನಗೊಂಡು ಭಾವನಾ ದೂರು ನೀಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next