Advertisement

ಅ. 15 ಜಾಗತಿಕ ಮಟ್ಟದ “ಕೈ ತೊಳೆಯುವ ದಿನ”

10:54 PM Oct 14, 2020 | mahesh |

ಕಾಸರಗೋಡು: ಸಾರ್ವಜನಿಕರು ವೈಜ್ಞಾನಿಕ ರೀತಿ ಕೈತೊಳೆಯುವ ಅಭ್ಯಾಸ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಅಂತಾರಾಷ್ಟ್ರೀಯ ಸಂಘಟನೆಗಳ ಆಶ್ರಯದಲ್ಲಿ ನಡೆಸಲಾಗುವ ಜಾಗತಿಕ ಮಟ್ಟದ ಕೈ ತೊಳೆಯುವ ದಿನಾಚರಣೆ ಅ. 15ರಂದು ನಡೆಯಲಿದೆ.

Advertisement

2008ರಿಂದ ಈ ದಿನಾಚರಣೆ ನಡೆದುಬರುತ್ತಿದೆ. ಕೋವಿಡ್‌ ಮಹಾಮಾರಿಯ ಅವಧಿಯಲ್ಲಿ ಈ ದಿನಾಚರಣೆಗೆ ಅತಿ ಮಹತ್ವವಿದೆ. ‘ಎಲ್ಲರಲ್ಲೂ ನಡೆಯಲಿ ಕೈ ತೊಳೆಯುವ ಮೂಲಕ ಶುಚಿತ್ವ’ ಎಂಬುದು ಈ ವರ್ಷದ ಸಂದೇಶವಾಗಿದೆ. ವೈಜ್ಞಾನಿಕ ರೂಪದಲ್ಲಿ ಕೈ ತೊಳೆಯುವಿಕೆ ಕೋವಿಡ್‌ ಪ್ರತಿರೋಧ ಚಟುವಟಿಕೆಗಳಲ್ಲಿ ಪ್ರಧಾನ ಅಂಗವಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ : ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ದೌತ್ಯಗಳ ಜಂಟಿ ವತಿಯಿಂದ ಕಾಸರಗೋಡು ಜಿಲ್ಲೆಯಲ್ಲೂ ಈ ದಿನಾಚರಣೆ ಅ.15ರಂದು ನಡೆಸಲಾಗುವುದು. ‘ಕೈ ತೊಳೆಯುವಿಕೆಯ ಮಹತ್ವ’ ಎಂಬ ವಿಷಯದಲ್ಲಿ ಜಿಲ್ಲೆಯ ಹೈಯರ್‌ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ರಚನೆ ಸ್ಪರ್ಧೆ ನಡೆಯಲಿದೆ. 200 ಪದಗಳಿಗೆ ಕಡಿಮೆಯಾಗದ, 300 ಪದಗಳಿಗೆ ಮೀರದ ಪ್ರಬಂಧಗಳನ್ನು ಪಿ.ಡಿ.ಎಫ್‌. ಮಾದರಿಯಲ್ಲಿ ಪ್ರಿಂಟ್‌ ಔಟ್‌ನ್ನು ಜಿಲ್ಲಾ ಶಿಕ್ಷಣ ಮೀಡಿಯಾ ಅಧಿಕಾರಿ, ಜಿಲ್ಲಾ ಮೆಡಿಕಲ್‌ ಆಪೀಸ್‌,ಬಲ್ಲ, ಅಂಚೆ- ಚೆಮ್ಮಟ್ಟಂ ವಯಲ್‌, ಪಿನ್‌-671531 ಎಂಬ ವಿಳಾಸಕ್ಕೆ ವಿದ್ಯಾರ್ಥಿಯ ಹೆಸರು, ದೂರವಣಿ ನಂಬ್ರ, ಶಾಲೆಯ ಹೆಸರು ಸಹಿತ ಅ.31ರ ಮುಂಚಿತವಾಗಿ ಕಳುಹಿಸಬೇಕು. ದೂರವಾಣಿ ನಂಬ್ರ: 9946533501.

Advertisement

Udayavani is now on Telegram. Click here to join our channel and stay updated with the latest news.

Next