Advertisement

ರಾಜಹಂಸ ಮೊಗದಲ್ಲಿ ಮಂದಹಾಸ!

10:27 AM Aug 21, 2017 | |

ಜಡೇಶ್‌ಕುಮಾರ್‌ ನಿರ್ದೇಶನದ  “ರಾಜಹಂಸ’ ಚಿತ್ರದ ಟೀಸರ್‌ಗೆ ಈಗಾಗಲೇ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದ್ದೇ ತಡ, ಚಿತ್ರತಂಡ ಇದೀಗ ಹೊಸತನದ ಟ್ರೇಲರ್‌ವೊಂದನ್ನು ಬಿಟ್ಟಿದ್ದು, ಅದಕ್ಕೂ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ.  ಈಗಿನ ಯೂತ್ಸ್ಗೆ ತಕ್ಕಂತಹ ಕಥೆವುಳ್ಳ ಈ ಚಿತ್ರದಲ್ಲಿ ಗೌರಿಶಿಖರ್‌ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ “ಪುಟ್ಟಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್‌ ನಾಯಕಿಯಾಗಿದ್ದಾರೆ.

Advertisement

ಜೋಶ್ವಾ ಶೀಧರ್‌ ಚಿತ್ರದ ಆರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಈಗಾಗಲೇ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿ ಇದೆ. ಇನ್ನು, ಕನ್ನಡ ರ್ಯಾಪರ್‌ ಚಂದನ್‌ ಶೆಟ್ಟಿ, ರಘು ದೀಕ್ಷಿತ್‌ ಸೇರಿದಂತೆ ಇತರೆ ಗಾಯಕರು ಹಾಡಿದ್ದಾರೆ. ಸದ್ಯಕ್ಕೆ ಚಿತ್ರದ ಟ್ರೇಲರ್‌ಗೆ ಸಿಗುತ್ತಿರುವ ಮೆಚ್ಚುಗೆಯಿಂದ ಚಿತ್ರತಂಡ ಚಿತ್ರವನ್ನು ಸೆಪ್ಟೆಂಬರ್‌ನಲ್ಲಿ ರಿಲೀಸ್‌ ಮಾಡಲು ತುದಿಗಾಲ ಮೇಲೆ ನಿಂತಿದೆ.

“ಇದೊಂದು ಕ್ಲಾಸ್‌ ಮತ್ತು ಮಾಸ್‌ ವರ್ಗದ ವರನ್ನು ರಂಜಿಸುವ ಚಿತ್ರವಾಗಿದ್ದು, ಕನ್ನಡಕ್ಕೊಂದು ಸದಭಿರುಚಿಯ ಸಿನಿಮಾ ಇದಾಗಲಿದೆ’ ಎನ್ನುತ್ತಾರೆ ಗೌರಿಶಿಖರ್‌. ಚಿತ್ರದಲ್ಲಿ ಡಾ.ಶ್ರೀಧರ್‌, ಬಿ.ಸಿ ಪಾಟೀಲ್‌, ಯಮುನಾ, ರಾಜು ತಾಳಿಕೋಟೆ, ತಬಲಾನಾಣಿ, ಬುಲೆಟ್‌ ಪ್ರಕಾಶ್‌, ವಿಜಯ್‌ಚಂಡೂರ್‌ ಇತರರು ನಟಿಸಿದ್ದಾರೆ. ಜನ ಮನ ಸಿನೆಮಾಸ್‌ ಬ್ಯಾನರ್‌ನಲ್ಲಿ ತಯಾರಾಗಿರುವ ಚಿತ್ರಕ್ಕೆ ಧನಂಜಯ್‌ ದಿಡಿಗ ಸಾಹಿತ್ಯ, ಸಂಭಾಷಣೆ ಬರೆದರೆ, ಆರೂರ್‌ ಸುಧಾಕರ್‌ ಕ್ಯಾಮೆರಾ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next