Advertisement
ಜಲಸಂಪನ್ಮೂಲ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದಿಂದ ವಿಶೇಷವಾಗಿ ಅಣೆಕಟ್ಟು ಸೇರಿದಂತೆ ಬೃಂದಾವನಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಅಣೆಕಟ್ಟೆಯುದ್ದಕ್ಕೂ ಬೀಳುವ ವಿವಿಧ ಬಣ್ಣದ ಲೇಸರ್ ಲೈಟ್ ನೋಡುಗರನ್ನು ಮೂಕವಿಸ್ಮಿತ ಗೊಳಿಸಿದೆ.ಪ್ರವಾಸಿಗರು ಫಿದಾ: ಜಲಾಶಯದ ಕಾರಂಜಿ, ಬೋಟಿಂಗ್ ಪಾಯಿಂಟ್ ಸೇರಿದಂತೆ ಇಡೀ ಬೃಂದಾವನವೇ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಬೆಳಕಿನಲ್ಲಿ ಮಿನುಗುತ್ತಿದೆ. ನೃತ್ಯ ಕಾರಂಜಿಗೆ ಹೊಸ ಮಾದರಿಯ ಸಂಗೀತ ಅಳವಡಿಸಲಾಗಿದೆ. ನೂತನ ಧ್ವನಿ-ಬೆಳಕು ವ್ಯವಸ್ಥೆಗೆ ಪ್ರವಾಸಿಗರು ಫಿದಾ ಆಗಿದ್ದು,
ವಿದ್ಯುತ್ ಬೆಳಕಿನಲ್ಲಿ ಕಂಗೊಳಿಸುತ್ತಿರುವ ಕೆಆರ್‌ಎಸ್ ನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ತಂಡೋಪ ತಂಡವಾಗಿ ಕೆಆರ್‌ಎಸ್‌ಗೆ ಲಗ್ಗೆ ಇಡುತ್ತಿದ್ದಾರೆ.
ತಾಣಗಳ ಕುರಿತು ಐದು ನಿಮಿಷಗಳ ಚಿತ್ರ ಪ್ರದರ್ಶನ ವಿರುತ್ತದೆ ಎಂದು ಕೆಆರ್‌ಎಸ್ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ “ಉದಯವಾಣಿ’ಗೆ ತಿಳಿಸಿದರು.
Related Articles
Advertisement
ನೀರಿನ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ: ಪ್ರವಾಸಿಗರಿಗೆ ಸಾಂಸ್ಕೃತಿಕ ರಸದೌತಣ ನೀಡುವ ಸಲುವಾಗಿ ಬೃಂದಾವನದ ಬೋಟಿಂಗ್ ಕಾರಂಜಿಯ ಬಳಿ ನೀರಿನ ಮೇಲೆ ತೇಲುವ ವೇದಿಕೆ ನಿರ್ಮಿಸಲಾಗಿದೆ. ಅದರ ಮೇಲೆ ಕಲಾವಿದರು ಜನಪದ ಗೀತೆ, ಭಕ್ತಿ ಗೀತೆ, ಚಿತ್ರಗೀತೆ, ನೃತ್ಯ ಸೇರಿದಂತೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ.
ಬೆಳಕಿನ ವ್ಯವಸ್ಥೆ ಯಾವಾಗ?ಕೃಷ್ಣರಾಜಸಾಗರ ಜಲಾಶಯದಲ್ಲಿ ಮೂರು ತಾಸುಗಳ ಕಾಲ ಈ ಬೆಳಕಿನ ವ್ಯವಸ್ಥೆಯನ್ನು ಕಾಣಬಹುದು. ಸಂಜೆ 6 ಗಂಟೆಯಿಂದ ರಾತ್ರಿ 9ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 25ರವರೆಗೆ ಮಾತ್ರ ಈ ಬೆಳಕಿನ ವ್ಯವಸ್ಥೆ ಇರುತ್ತದೆ. ಸಾಮಾನ್ಯ ದಿನಗಳಲ್ಲಿ 6 ಗಂಟೆಯಿಂದ ರಾತ್ರಿ 8 ಗಂಟೆ. ರಜಾ ದಿನಗಳಲ್ಲಿ 6 ಗಂಟೆಯಿಂದ 9 ಗಂಟೆಯ ವರೆಗೆ ವಿದ್ಯುತ್ ದೀಪಗಳ ವೈಭವವನ್ನು ಕಣ್ತುಂಬಿಕೊಳ್ಳಬಹುದು. ನವರಾತ್ರಿ ಮುಗಿದ ಬಳಿಕ ಇನ್ನೊಂದು ವರ್ಷದವರೆಗೆ ಬೃಂದಾವನವನ್ನು.