ಕೊಚ್ಚಿ (ಕೇರಳ): ಗ್ಲೈಡರ್ ವಿಮಾನ ಪತನವಾಗಿ ನೌಕಾಪಡೆಯ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದ ಘಟನೆ ಕೇರಳದ ಕೊಚ್ಚಿಯಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.
ಮೃತ ಅಧಿಕಾರಿಗಳನ್ನು ಲೆಫ್ಟಿನೆಂಟ್ ರಾಜೀವ್ ಝಾ ಮತ್ತು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ.
ಕೊಚ್ಚಿಯ ತೊಪ್ಪುಂಪಾಡಿ ಸೇತುವೆ ಬಳಿ ಈ ಗ್ಲೈಡರ್ ವಿಮಾನ ಪತನವಾಗಿದೆ. ಐಎನ್ ಎಸ್ ಗರುಡಾದಿಂದ ದಿನನಿತ್ಯದ ತರಬೇತಿಗಾಗಿ ಗ್ಲೈಡರ್ ಹೊರಟಿತ್ತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅಫ್ಘಾನಿಸ್ಥಾನ: ಬಾಂಬ್ ಸ್ಪೋಟದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪಾಯರ್ ನಿಧನ
ರವಿವಾರ ಮುಂಜಾನೆ ಏಳು ಗಂಟೆಯ ಸುಮಾರಿಗೆ ತೊಪ್ಪುಂಪಾಡಿ ಸೇತುವೆ ಬಳಿ ಪತನವಾಗಿ ಬಿದ್ದಿದೆ. ಘಟನೆಯ ನಿಖರ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ನೌಕಾಪಡೆಯ ಅಧಿಕಾರಿಗಳಾದ ರಾಜೀವ್ ಝಾ ಮತ್ತು ಸುನೀಲ್ ಕುಮಾರ್ ಅವರನ್ನು ಕೂಡಲೇ ಸ್ಥಳೀಯ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿತಾದರೂ, ಅವರುಗಳು ಬದುಕಿ ಉಳಿಯಲಿಲ್ಲ ಎಂದು ವರದಿಯಾಗಿದೆ.