Advertisement

ಥಂಪಿ ಭವಿಷ್ಯದ ಬೌಲರ್‌: ಮೆಕ್‌ಗ್ರಾತ್‌ ಪ್ರಶಂಸೆ

10:04 AM Jul 19, 2017 | Team Udayavani |

ಕೊಚ್ಚಿ: ಕೇರಳದ ವೇಗಿ ಬಾಸಿಲ್‌ ಥಂಪಿ ಭಾರತ ತಂಡದ ಭವಿಷ್ಯದ ಬೌಲರ್‌ ಆಗಲಿದ್ದಾರೆ ಎಂದು ಆಸ್ಟ್ರೇಲಿಯನ್‌ ಗ್ರೇಟ್‌ ಗ್ಲೆನ್‌ ಮೆಕ್‌ಗ್ರಾತ್‌ ಪ್ರಶಂಸಿಸಿದ್ದಾರೆ. ಎಂಆರ್‌ಎಫ್ ಪೇಸ್‌ ಫೌಂಡೇಶನ್‌ ಹಾಗೂ ಕ್ರಿಕೆಟ್‌ ಆಸ್ಟ್ರೇ ಲಿಯ ನಡುವಿನ 25 ವರ್ಷಗಳ ಸಂಬಂಧ ಪೂರ್ತಿಗೊಂಡ ಸಂದರ್ಭದಲ್ಲಿ ಏರ್ಪಟ್ಟ ಸಮಾರಂಭದ ವೇಳೆ ಮೆಕ್‌ಗ್ರಾತ್‌ ಭಾರತದ ಯುವ ವೇಗಿಗಳ ಕುರಿತು ಮಾತಾಡಿದರು. 

Advertisement

“ಭಾರತ ತಂಡ ಈಗ ಉತ್ತಮ ದರ್ಜೆಯ ವೇಗದ ಬೌಲರ್‌ಗಳನ್ನು ಹೊಂದಿದೆ. ಪ್ರತಿಭಾನ್ವಿತ ಯುವ ವೇಗಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಬಾಸಿಲ್‌ ಥಂಪಿ ಕೂಡ ಒಬ್ಬರು’ ಎಂದು ಎಂಆರ್‌ಎಫ್ ಪೇಸ್‌ ಫೌಂಡೇಶನ್‌ನ ನಿರ್ದೇಶಕರೂ ಆದ ಮೆಕ್‌ಗ್ರಾತ್‌ ಹೇಳಿದರು.

ಅಂಕಿತ್‌ ರಜಪೂತ್‌, ಅನಿಕೇತ್‌ ಚೌಧರಿ ಕೂಡ ಪ್ರತಿಭಾನ್ವಿತ ವೇಗಿಗಳಾಗಿದ್ದಾರೆ. ಆದರೆ ಬಾಸಿಲ್‌ ಥಂಪಿ ಬಹಳ ವೇಗದಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ, ಈ ಸಲದ ಐಪಿಎಲ್‌ ಪಂದ್ಯಾವಳಿಯೇ ಇದಕ್ಕೆ ಸಾಕ್ಷಿ ಎಂಬುದು ಆಸೀಸ್‌ ಕ್ರಿಕೆಟಿಗನ ಅಭಿಪ್ರಾಯ.

ಕ್ರಿಕೆಟ್‌ ನಿವೃತ್ತಿಯ ಬಳಿಕ ಕೋಚಿಂಗ್‌ ಹುದ್ದೆಯತ್ತ ಹೆಚ್ಚಿನ ಒಲವು ತೋರಿದ ತನ್ನ ನಿರ್ಧಾರ ಈಗ ಸಾರ್ಥಕವೆನಿಸುತ್ತಿದೆ ಎಂದೂ ಮೆಕ್‌ಗ್ರಾತ್‌ ಖುಷಿಯಿಂದ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next