ಮೆಲ್ಬೋರ್ನ್: ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಮತ್ತೆ ಗಾಯಗೊಂಡಿದ್ದಾರೆ. ಮೆಲ್ಬೋರ್ನ್ ನಲ್ಲಿ ವಿಕ್ಟೋರಿಯಾ ಪರ ಆಡುತ್ತಿದ್ದಾಗ ಕೈ ಬೆರಳಿಗೆ ಪೆಟ್ಟು ಮಾಡಿಕೊಂಡ ಮ್ಯಾಕ್ಸ್ ವೆಲ್ ನಂತರ ಮೈದಾನದಿಂದ ಹೊರಗುಳಿಯಬೇಕಾಯಿತು.
ಭಾರತದ ವಿರುದ್ಧದ ಏಕದಿನ ಸರಣಿಗೆ ಕಮ್ ಬ್ಯಾಕ್ ಮಾಡಲಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಇದೀಗ ಮತ್ತೆ ಗಾಯದ ಆತಂಕ ಎದುರಿಸುತ್ತಿದ್ದಾರೆ.
ಮ್ಯಾಕ್ಸ್‌ವೆಲ್ ಮೊದಲ ಸ್ಲಿಪ್ ನಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದರು, ಆದರೆ ಚೆಂಡು ಅವರ ಮುಂದೆಯೇ ಪುಟಿದು ಮುಂದೆ ಹೋದಾಗ ಅವರ ಮಣಿಗಂಟಿಗೆ ಹೊಡೆಯಿತು.
ಇದನ್ನೂ ಓದಿ:ಗ್ಯಾಂಗ್ ಸ್ಟರ್ ತಾಣಗಳ ಮೇಲೆ ಎನ್ಐಎ ದಾಳಿ; ಪಾಕ್ ನಿರ್ಮಿತ ಶಸ್ತ್ರಾಸ್ತ್ರಗಳು ಪತ್ತೆ
ಮ್ಯಾಕ್ಸ್‌ವೆಲ್ ಅವರನ್ನು ತಂಡದ ವೈದ್ಯಕೀಯ ಪರೀಕ್ಷೆ ಮಾಡಿದ್ದಾರೆ. ಸ್ಕ್ಯಾನಿಂಗ್ ಕೂಡಾ ಮಾಡಲಾಗಿದೆ. ಆದರೆ ಯಾವುದೇ ಮುರಿತದ ಬಗ್ಗೆ ವರದಿಯಿಲ್ಲ. ಆದರೆ ಮ್ಯಾಕ್ಸ್ ವೆಲ್ ಗೆ ಬ್ಯಾಟಿಂಗ್ ಮಾಡಲು ಅನುಮತಿಸಲಿಲ್ಲ.
ಕಾಲು ಮುರಿತದಿಂದ ಬಿಗ್ ಬ್ಯಾಶ್ ಕೂಟದಿಂದಲೂ ಗ್ಲೆನ್ ಮ್ಯಾಕ್ಸ್ ವೆಲ್ ಹೊರಬಿದ್ದಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲು ಯತ್ನಿಸುತ್ತಿರುವ ಅವರು ಭಾರತ ವಿರುದ್ಧ ಏಕದಿನ ಸರಣಿ ಆಡುವ ಯೋಚನೆಯಲ್ಲಿದ್ದರು. ಆದರೆ ಗಾಯದ ಸಮಸ್ಯೆ ಮತ್ತೆ ಕಾಡಿದೆ.