Advertisement

Baby Boy; ಆಸ್ಟ್ರೇಲಿಯದ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ಗೆ ಗಂಡು ಮಗು

02:29 AM Sep 16, 2023 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ ವೆಲ್‌ ತಂದೆಯಾದ ಸಿಹಿ ಸುದ್ದಿಯನ್ನು ಬಿತ್ತರಿಸಿದ್ದಾರೆ.

Advertisement

ಅವರ ಭಾರತೀಯ ಮೂಲದ ಪತ್ನಿ ವಿನಿ ರಾಮನ್‌ ಸೆ. 11ರಂದು ಗಂಡು ಮಗುವಿಗೆ ಜನ್ಮವಿತ್ತರು. ಮಗುವಿಗೆ ಲೋಗನ್‌ ಮಾವೆರಿಕ್‌ ಎಂದು ಹೆಸರಿಡಲಾಗಿದೆ ಎಂಬುದಾಗಿಯೂ ಮ್ಯಾಕ್ಸ್‌ ವೆಲ್‌ ತಿಳಿಸಿದ್ದಾರೆ.

ಮಗುವಿನ ಚಿತ್ರವೊಂದನ್ನು ವಿನಿ ಸಾಮಾ ಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, “11.09.2023. ಲೋಗನ್‌ ಮಾವೆರಿಕ್‌ ಮ್ಯಾಕ್ಸ್‌ ವೆಲ್‌’ ಎಂಬ ಶೀರ್ಷಿಕೆ ನೀಡಿದ್ದಾರೆ. 2022ರ ಮಾರ್ಚ್‌ 18ರಂದು ಗ್ಲೆನ್‌ ಮ್ಯಾಕ್ಸ್‌ವೆಲ್‌-ವಿನಿ ರಾಮನ್‌ ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದರು. ಸದ್ಯ ಗಾಯಾಳಾಗಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ದಕ್ಷಿಣ ಆಫ್ರಿಕಾ ಪ್ರವಾಸ ದಿಂದ ಬೇರ್ಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next