ಬೆಂಗಳೂರು: ಮಹಾರಾಷ್ಟ್ರದಿಂದ ಬೆಂಗಳೂರಿಗೆ ತಂದ ಗ್ಲ್ಯಾಂಡರ್ಸ್ ಸೋಂಕಿತ ಕುದುರೆಯ ಮಾಲೀಕ ಹಾಗೂ ಓರ್ವ ಹ್ಯಾಂಡ್ಲರ್ ಬೆಂಗಳೂರು ಬಿಟ್ಟಿರುವುದು ಆರೋಗ್ಯಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಗ್ಲ್ಯಾಂಡರ್ಸ್ ಸೋಂಕಿತ ಕುದುರೆಗಳ ಸಂಪರ್ಕಕ್ಕೆ ಮಾಲೀಕ ಸೇರಿ ಇಬ್ಬರು ಹ್ಯಾಂಡ್ಲರ್‌ಗಳು ಬಂದಿದ್ದಾರೆ. ಅವರಲ್ಲಿ ಓರ್ವ ಹ್ಯಾಂಡ್ಲರ್ ಮಾದರಿಯನ್ನು ಬಿಬಿ ಎಂಪಿ ಆರೋಗ್ಯಾಧಿಕಾರಿಗಳು ಸಂಗ್ರಹಿಸಿ ದ್ದಾರೆ. ಉಳಿದಂತೆ ಕುದುರೆಯ ಮಾಲೀಕ ಹಾಗೂ ಇನ್ನೊರ್ವ ಹ್ಯಾಂಡ್ಲರ್ ಬೆಂಗ ಳೂರು ತೊರೆದಿದ್ದಾರೆ. ಅವರ ಆರೋಗ್ಯ ಮೇಲ್ವಿಚಾರಣೆ ನಡೆಸಲು ಇಲಾಖೆ ಅಧಿಕಾರಿಗಳು ನಿರಂತರವಾಗಿ ಪ್ರಯತ್ನಿಸುತ್ತಿ ದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗ ಸೂಚಿ ಅನ್ವಯ ಮನುಷ್ಯರಲ್ಲಿ ಗ್ಲ್ಯಾಂ ಡರ್ಸ್ ಲಕ್ಷಣಗಳಿದ್ದರೆ ಮಾತ್ರ ಪರೀಕ್ಷೆಗೆ ಒಳಪಡಿಸಬೇಕು. ಪ್ರಸ್ತುತ ಬೆಂಗಳೂರಿನ ಸೋಂಕಿತ ಕುದುರೆ ಸಂಪ ರ್ಕಕ್ಕೆ ಬಂದವರಲ್ಲಿ ಲಕ್ಷಣಗಳಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಮಾದರಿಯನ್ನು ಸಂಗ್ರಹಿಸಲು ಮುಂದಾಗಿದೆ. 60 ವರ್ಷದ ಕುದುರೆಯ ಮಾಲೀಕ ಹಾಗೂ ಇನ್ನೊರ್ವ ಹ್ಯಾಂಡ್ಲರ್ ಎಷ್ಟೇ ಪ್ರಯತ್ನಿಸಿದರೂ ಇಲಾಖೆಯ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಾಲೀಕ ಏ.19ರಂದು ಬೆಂಗಳೂರಿಗೆ ಬರು ವು ದಾಗಿ ಹೇಳಿದರೂ, ಇದುವರೆಗೆ ಬಂದಿಲ್ಲ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿದರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಮನುಷ್ಯರಲ್ಲಿ ದೃಢವಾಗಿಲ್ಲ: ಬ್ಯಾಕ್ಟೀ ರಿಯಾ ದೇಹ ಸೇರಿದ 1ರಿಂದ 14ದಿನಗಳ ಒಳಗೆ ಮನುಷ್ಯರಲ್ಲಿ ಗ್ಲ್ಯಾಂಡರ್ಸ್ ಸೋಂಕು ದೃಢವಾಗುತ್ತದೆ.ಕೆಲವೊಮ್ಮೆ 12 ವಾರಗಳು ಬೇಕಾಗುತ್ತದೆ. ದೇಶದಲ್ಲಿ ಇದುವರೆಗೆ ಮನುಷ್ಯರಲ್ಲಿ ಗ್ಲ್ಯಾಂಡರ್ಸ್ ಸೋಂಕು ದೃಢವಾಗಿಲ್ಲ.
ಸೋಂಕಿತ ಕುದುರೆಯ ಸಂಪರ್ಕಕ್ಕೆ ಬಂದಿರುವ ವ್ಯಕ್ತಿ ರಕ್ತದ ಮಾದರಿಯು ಹರಿ ಯಾಣದ ಎನ್‌ಆರ್‌ಸಿ ಪ್ರಯೋಗಾಲಯ ತಲುಪಿದೆ. 3 ದಿನಗಳ ಒಳಗೆ ವರದಿ ನೀಡುವು ದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.
-ರಂದೀಪ್, ಆಯುಕ್ತರು ಆರೋಗ್ಯ ಇಲಾಖೆ.
ಸೋಂಕಿತ ಕುದುರೆ ಸಂಪರ್ಕಕ್ಕೆ ಮೂವರು ಬಂದಿದ್ದಾರೆ. ಅವರಲ್ಲಿ ಒಬ್ಬರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಮಾರ್ಗ ಸೂಚಿ ಅನ್ವಯ ಲಕ್ಷಣಗಳಿಲ್ಲದ ವ್ಯಕ್ತಿ ಕ್ವಾರಂಟೈನ್ ಮಾಡಲ್ಲ.-
ಡಾ.ಮದಿನಿ, ಸಿಎಚ್‌ಒ, ಬಿಬಿಎಂಪಿ