ಶಾಸಕನಾದರೆ ಇನ್ನೂ ಕಷ್ಟ. ತಾವು ವಿರೋಧ ಪಕ್ಷದ ಶಾಸಕನಾಗಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದಿಂದ
ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ತಂದಿದ್ದೇನೆ ಎಂದರು. ಇದನ್ನು ಟೀಕೆ ಮಾಡುವ ಜನರು ತಾವೇ ಸರ್ಕಾರದ ಮೇಲೆ ಪ್ರಭಾವ ಬಳಸಿ ಅನುದಾನ ತರಲಿ. ಇತಂಹ ಕಾಮಗಾರಿಗಳಿಗೆ ತಮ್ಮ ಶ್ರಮದಿಂದಲೇ ಅನುದಾನ ಬಂದಿದೆ ಎಂದು ಘೋಷಿಸಲಿ. ಹೃದಯ ವೈಶಾಲ್ಯತೆ ಮೆರೆಯಲಿ ಎಂದು ಪರೋಕ್ಷವಾಗಿ ತಮ್ಮ ಟೀಕಕಾರರಿಗೆ ಚಾಟಿ ಬೀಸಿದರು. ಇಂದು ಭುಮಿ ಪೂಜೆಯಾಗುತ್ತಿರುವ ಸರ್ಕಾರ ಪಾಲಿಟೆಕ್ನಿಕ್ ಕೂಡ ವಿವಾದಾಸ್ಪದ ವಿಷಯವಾಗಿತ್ತು. ಇದರ ಮಂಜೂರಾತಿ ಬಿಜೆಪಿ ಸರ್ಕಾರವಿದ್ದಾಗ ಆಗಿದ್ದು. ಶಾಸಕ ಸಿ.ಟಿ. ರವಿ ಅವರ ಶ್ರಮ ಇದಕ್ಕೆ ಕಾರಣ. ನಂತರದ ದಿನಗಳಲ್ಲಿ ಅ ಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಿಂದಿನ ಸರ್ಕಾರದ ಮಂಜೂರಾತಿಗಳನ್ನು ಕಿತ್ತುಕೊಂಡರು. ಉತ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರ ಮೇಲೆ ಒತ್ತಡ ತಂದು ತಾವು ಈ ಕಾಲೇಜನ್ನು ಮರು ಮಂಜೂರಾತಿ ಮಾಡಿಸಿದೆ. ಈ ಇಬ್ಬರನ್ನು ಸ್ಮರಿಸುತ್ತೇನೆ ಎಂದು ಹೇಳಿದರು. ಮಂಜೂರಾತಿ ನಂತರ ತಾವು ಈ ಕಾಲೇಜನ್ನು ಗ್ರಾಮೀಣ ಭಾಗದ ಚೌಳಹಿರಿಯೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು ನಿಜ. ಅಭಿವೃದ್ಧಿ ವಿಕೇಂದ್ರಿಕರಣ ಮತ್ತು ಗ್ರಾಮೀಣ ಜನರಿಗೆ ನಗರ ಮಟ್ಟದ ಸೌಲಭ್ಯ ಸಿಗಲಿ ಎಂಬುದು ತಮ್ಮ ಮಹದಾಸೆಯಾಗಿತ್ತು. ಆದರೆ ಅದಕ್ಕೆ ಕಾಂಗ್ರೆಸ್ ಪಕ್ಷದ ಮಾಜಿ ವಿಧಾನಪರಿಷತ್ ಸದಸ್ಯೆಯೊಬ್ಬರು ಅಡ್ಡಿಯಾದರೆಂದು ಟೀಕಿಸಿದರು. ಈ ಕಾಲೇಜಿಗಾಗಿ ಅರಣ್ಯ ಭೂಮಿಯನ್ನು
ಕಂದಾಯ ಭೂಮಿಯಾಗಿ ಪರಿವರ್ತಿಸಲು ಹೋರಾಡಿದ್ದೇನೆ. ಕಾಲೇಜು ಕಟ್ಟಲು ಮಾತ್ರ ಭೂಮಿಯನ್ನು ಬಳಸಿಕೊಂಡು ಉಳಿದ ಭಾಗವನ್ನು ಹರುವನಹಳ್ಳಿ ಗ್ರಾಮದ ಜನರ ಮೂಲಭೂತ ಅವಶ್ಯಕತೆಗಳಿಗಾಗಿ ಹಾಗೂ ರುದ್ರಭೂಮಿ ಸ್ಥಾಪಿಸಲು ತಾವು ಬದ್ದ ಎಂದರು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿಶೇಷಾಧಿಕಾರಿ ಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಕಾಲೇಜಿನ ಕಟ್ಟಡಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದ್ದು ಇದಕ್ಕೆ ಶಾಸಕರು ಸಮ್ಮತಿಸಿದರು. ಜಿಪಂ ಸದಸ್ಯೆ ಕಾವೇರಿ ಲಕ್ಕಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷೆ ರೇಣುಕಾ ಉಮೇಶ್, ಸದಸ್ಯೆ ಸವಿತಾ ಆನಂದ್(ಡೆ„ರಿ), ತಂಗಲಿ ಗ್ರಾಪಂ ಅಧ್ಯಕ್ಷ ಟಿ.ಟಿ.ಶ್ರೀನಿವಾಸ್, ಚಿಕ್ಕಮಗಳೂರು ಪಾಲಿಟೆಕ್ನಿಕ್ ಪ್ರಾಂಶುಪಾಲ ಉಮಾಪತಿ, ಜೆಡಿಎಸ್ ಮುಖಂಡರಾದ ಭಂಡಾರಿ ಶ್ರೀನಿವಾಸ್, ಎಂ. ರಾಜಪ್ಪ ಮುಂತಾದವರು ಇದ್ದರು.
Advertisement