Advertisement

ಪರಿಹಾರ ಎಂದರೆ ಬಿಸ್ಕೆಟ್‌ ಅಲ್ಲ

07:00 AM Apr 03, 2018 | Team Udayavani |

ಅಮೃತಸರ: ಇರಾಕ್‌ನ ಮೊಸೂಲ್‌ನಲ್ಲಿ ಐಸಿಸ್‌ ಉಗ್ರರಿಂದ ಹತ್ಯೆಗೀಡಾದ 38 ಮಂದಿ ಭಾರತೀಯರು ಅಕ್ರಮವಾಗಿ ಅಲ್ಲಿಗೆ ತೆರಳಿದ್ದರು ಎಂದಿದ್ದಾರೆ ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್‌. ಮೃತರ ಕುಟುಂಬಗಳಿಗೆ ಉದ್ಯೋಗ ಅಥವಾ ಪರಿಹಾರ ನೀಡುತ್ತೀರಾ ಎಂಬ ವರದಿಗಾರರ ಪ್ರಶ್ನೆಗೆ, “ಅದೇನು ಫ‌ುಟ್ಬಾಲ್‌ ಅಥವಾ ಬಿಸ್ಕೇಟ್‌ ಅಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಹೇಳಿದ್ದಾರೆ. 

Advertisement

ಇರಾಕ್‌ನಿಂದ ಸೋಮವಾರ 38 ಮಂದಿ ಭಾರತೀಯರ ಮೃತದೇಹವನ್ನು ತಂದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದು ಹಲವು ಮಂದಿಗೆ ಸಂಬಂಧಿಸಿದ ವಿಚಾರ. ಹೀಗಾಗಿ ಏಕಾಏಕಿ ಘೋಷಣೆ ಸಾಧ್ಯವಿಲ್ಲ ಎಂದು ಹೇಳಿದರು. ಅಸುನೀಗಿದ ವ್ಯಕ್ತಿಗಳ ಕುಟುಂಬ ಸದಸ್ಯರು, ಕೇಂದ್ರ ಸರ್ಕಾರ ಮಾಹಿತಿ ರಹಸ್ಯವಾಗಿ ಇರಿಸಿತ್ತು ಎಂದು ಆರೋಪಿಸು ತ್ತಿದ್ದಾರೆ. ಇದು ಆರೋಪ ಮಾಡುವ ಸಮಯ ಅಲ್ಲ. ಮೃತರ ಅಂತ್ಯಸಂಸ್ಕಾರಗಳನ್ನು ಜರೂರಾಗಿ ನಡೆಸಬೇಕು. ಅನಗತ್ಯ ರಾಜಕೀಯಕ್ಕೆ ಇಳಿಯಬಾರದು ಎಂದು ಸಲಹೆ ನೀಡಿದ್ದಾರೆ 

ಕೇಂದ್ರ ಸಚಿವ ವಿ.ಕೆ. ಸಿಂಗ್‌, ಪಂಜಾಬ್‌, ಪಾಟ್ನಾ ಮತ್ತು ಕೋಲ್ಕತಾಕ್ಕೆ ತೆರಳಿ ಅಸುನೀಗಿದ ವ್ಯಕ್ತಿಗಳ ಕುಟುಂಬ ಸದಸ್ಯ ರಿಗೆ ಸಾಂತ್ವನ ಹೇಳಿ, ಮೃತದೇಹಗಳನ್ನು ಹಸ್ತಾಂತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next