Advertisement

ಜಮಖಂಡಿಗೆ ವಿಶ್ವವಿದ್ಯಾಲಯ ನೀಡಿ; ಡಾ|ತಾತಾಸಾಹೇಬ

05:23 PM Sep 01, 2022 | Team Udayavani |

ಜಮಖಂಡಿ: ಏಳು ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಸಹಿತ ಪಿಜಿ ಕೇಂದ್ರಗಳನ್ನು ವಿಶ್ವವಿದ್ಯಾಲಯಗಳನ್ನು ಪರಿವರ್ತಿಸುವ ಕೈಗೊಂಡ ನಿರ್ಧಾರದಿಂದ ಜಮಖಂಡಿ ವಿಶ್ವವಿದ್ಯಾಲಯ ಲಭಿಸುವ ಅರ್ಹತೆ ಪಡೆದುಕೊಂಡಿದೆ ಎಂದು ವಕೀಲ ಡಾ| ತಾತಾಸಾಹೇಬ ಬಾಂಗಿ ಹೇಳಿದರು.

Advertisement

ನಗರದ ಬಸವಭವನ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರಿಂದ ಸುಸಜ್ಜಿತ ಕಟ್ಟಡದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಗೊಂಡಿದ್ದು, ಅಲ್ಲಿ ವಿಶ್ವವಿದ್ಯಾಲಯಕ್ಕೆ ಎಲ್ಲ ರೀತಿ ಮೂಲಭೂತ ಸೌಕರ್ಯಗಳಿವೆ. ಈಗಾಗಲೇ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯವಿದ್ದು, ಪಿ.ಜಿ.ಸೆಂಟರ್‌ ಲಭ್ಯವಿಲ್ಲ.

ಎಲ್ಲ ರೀತಿಯ ಸೌಲಭ್ಯ ಬಾಗಲಕೋಟೆ ಪಡೆದುಕೊಂಡಿದೆ. ಜಿಲ್ಲಾ ಕೇಂದ್ರ ಸ್ಥಾನಮಾನಕ್ಕೆ ಅರ್ಹತೆ ಹೊಂದಿರುವ ಜಮಖಂಡಿಗೆ ವಿಶ್ವವಿದ್ಯಾಲಯ ಅನುಮತಿ ನೀಡಬೇಕು. ಜಿಲ್ಲೆಗಾಗಿ ಎಲ್ಲ ಅರ್ಹತೆ ಹೊಂದಿದೆ ಎಂದರು. ಜಮಖಂಡಿಗೆ ಜಿಲ್ಲಾ ಸ್ಥಾನಮಾನಕ್ಕಾಗಿ ಹೈಕೋರ್ಟ್‌ದಲ್ಲಿ ರೀಟ್‌ ಪಿಟಿಷೇನ್‌ ಹಾಕಲಾಗಿದೆ. ಬೆಂಗಳೂರು ಹೋಗಿ ಕಂಟೆಂಟ್‌ ಪಿಟಿಷೇನ್‌ ಹಾಕಿದರೆ ಸರ್ಕಾರಕ್ಕೆ ನೋಟಿಸ್‌ ಹೋಗಲಿದೆ.

ಸರ್ಕಾರ ನಮ್ಮ ಮನವಿಗೆ ಸ್ಪಂದಿಸುವ ಕೆಲಸ ಮಾಡದಿದ್ದರೆ ಎಲ್ಲ ರೀತಿ ಹೋರಾಟಗಳಿಗೆ ಸಿದ್ಧರಾಗಬೇಕಾಗುತ್ತದೆ. ಸರಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಎಚ್‌ .ಜಿ.ದಡ್ಡಿ ಮಾತನಾಡಿ, ಜಮಖಂಡಿಗೆ ಎಲ್ಲ ಸರ್ಕಾರಗಳಿಂದ ನಿರಂತರ ಅನ್ಯಾಯವಾಗುತಿದ್ದು, ಜಿಲ್ಲೆಯಾಗುವ ಅರ್ಹತೆಯಿದ್ದರೂ ವಂಚಿತವಾಗಿದೆ. ಈಗಾಗಲೇ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯವಿದೆ. ಅಲ್ಲಿಯೇ ಮತ್ತೂಂದು ವಿಶ್ವವಿದ್ಯಾಲಯ ಸ್ಥಾಪನೆ ಸರಿಯಲ್ಲ.

ಜಮಖಂಡಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದು ಸುಂದರವಾದ ಕಟ್ಟಡದ ಜತೆಗೆ ಅಗತ್ಯ ಮೂಲಭೂತ ಸೌಕರ್ಯವಿದೆ. ಸರ್ಕಾರ ಸಾಕಷ್ಟು ಯೋಜನೆ ಜಾರಿಗೊಳಿಸುವ ಮೂಲಕ ಸರಿಯಾದ ರೀತಿಯಲ್ಲಿ ಅನುಷ್ಟಾನಕ್ಕೆ ತರುವಲ್ಲಿ ವಿಫಲವಾಗುತ್ತದೆ ಎಂದು ಆರೋಪಿಸಿದರು. ಉದ್ಯಮಿ ಜಗದೀಶ ಗುಡಗುಂಟಿ ಮಾತನಾಡಿ, ಪ್ರತಿಯೊಬ್ಬರೂ ಪಕ್ಷಬೇದ ಮರೆತು ವಿಶ್ವವಿದ್ಯಾಲಯ ತರುವಲ್ಲಿ ಕೈ ಜೋಡಿಸಬೇಕು. ಜಮಖಂಡಿಗೆ ವಿಶ್ವವಿದ್ಯಾಲಯ ತರುವ ಪ್ರಯತ್ನ ಮಾಡಬೇಕು. ನಮ್ಮಲ್ಲಿ ಒಕ್ಕಟ್ಟಿದ್ದರೇ ನಮ್ಮ ಬೇಡಿಕೆಗಳು ಲಭಿಸಲಿವೆ.

Advertisement

ನಮ್ಮ ಗುರಿ ಮುಟ್ಟುವರಿಗೆ ಸರಕಾರದ ಮೇಲೆ ಒತ್ತಡ ತರುವ ಮೂಲಕ ಅಗತ್ಯ ಉಗ್ರ ಹೋರಾಟಕ್ಕೂ ಸಿದ್ಧರಾಗೋಣ. ಅಭಿವೃದ್ಧಿ ವಿಷಯದಲ್ಲಿ ಒಂದಾಗಿ ಹೋರಾಟ ಮಾಡಬೇಕು ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್‌ .ನ್ಯಾಮಗೌಡ, ಓಲೇಮಠದ ಡಾ| ಚನ್ನಬಸವ ಶ್ರೀ ಮಾತನಾಡಿದರು. ಕಲ್ಯಾಣಮಠದ ಗೌರಿಶಂಕರ ಶಿವಾರ್ಚಾಯ, ಮುಂತ್ತಿಕಂತಿಮಠದ ಶಿವಲಿಂಗ ಶಿವಾಚಾರ್ಯ, ಡಾ| ಎಚ್‌.ಜಿ.ದಡ್ಡಿ, ದೇವಲ ದೇಸಾಯಿ, ಸಂತೋಷ ತಳಕೇರಿ, ಮಾಹಾದೇವ ನ್ಯಾಮಗೌಡ, ಅಜಯ ಕಡಪಟ್ಟಿ, ಶಂಕರ ಹನಗಂಡಿ, ಮಹಾದೇವ ಇಟ್ಟಿ, ರವಿ ತೇಲಿ, ಎಂ.ಡಿ.ಇಂಡಿ, ರವಿ ಯಡಹಳ್ಳಿ, ನಾಗಪ್ಪ ಸನದಿ, ಎಂ.ಸಿ. ಗೊಂದಿ, ಡಾ. ಮಲ್ಲು ಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next