Advertisement

ಅಪನಗದೀಕರಣ ವೇಳೆ ಹೆಚ್ಚುವರಿ ಕೆಲಸಕ್ಕೆ ಓಟಿ ಕೊಡಿ

03:45 AM Jan 03, 2017 | Team Udayavani |

ಹೊಸದಿಲ್ಲಿ: ಅಪನಗದೀಕರಣ ಘೋಷಣೆ ಬಳಿಕ ಬ್ಯಾಂಕ್‌ ಉದ್ಯೋಗಿಗಳ ಕರ್ತವ್ಯ ನಿರ್ವಹಿಣೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಸಿದ ಬೆನ್ನಲ್ಲೇ, ನ.8ರಿಂದ ಡಿ.30ರ ವರೆಗಿನ 50 ದಿನಗಳ ಅವಧಿಯಲ್ಲಿ ಓವರ್‌ ಟೈಮ್‌ ಕೆಲಸ ಮಾಡಿದ್ದಕ್ಕೆ ಬ್ಯಾಂಕ್‌ ನೌಕರರಿಗೆ ಹೆಚ್ಚುವರಿ ಭತ್ಯೆ ನೀಡಬೇಕು ಎಂದು ಬ್ಯಾಂಕ್‌ ಯೂನಿಯನ್‌ ಬೇಡಿಕೆ ಇಟ್ಟಿದೆ.

Advertisement

ಈ ಕುರಿತು ರಾಷ್ಟ್ರೀಯ ಬ್ಯಾಂಕ್‌ ನೌಕರರ ಸಂಘ (ಎನ್‌ಒಬಿಡೂ) ಪ್ರಧಾನಿ ಮೋದಿಗೆ ಪತ್ರ ಬರೆದಿದೆ. ಬ್ಯಾಂಕ್‌ ನೌಕರರು ಅಪನಗದೀಕರಣದ 50 ದಿನಗಳ ಅವಧಿಯಲ್ಲಿ ದಿನಕ್ಕೆ 12 ರಿಂದ 18 ಗಂಟೆ ಕೆಲಸ ಮಾಡಿದ್ದಾರೆ. ಕೆಲ ಬ್ಯಾಂಕುಗಳು ಹೆಚ್ಚುವರಿ ಭತ್ಯೆ ನೀಡಲು ತೀರ್ಮಾನಿಸಿವೆ. ಇನ್ನು ಕೆಲವು ತೀರ್ಮಾನಿಸಿಲ್ಲ. ಹೀಗಾಗಿ ಓವರ್‌ ಟೈಮ್‌ ಕೆಲಸವನ್ನು ಪರಿಗಣಿಸಿ ಭತ್ಯೆ ನೀಡುವಂತೆ ಬ್ಯಾಂಕುಗಳ ಆಡಳಿತ ಮಂಡಳಿಗಳಿಗೆ ಸೂಚಿಸಬೇಕು ಎಂದು ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next