ಪುಂಜಾಲಕಟ್ಟೆ : ಸ್ಪರ್ಧಾತ್ಮಕ ಸಮಾಜದಲ್ಲಿ ಮಕ್ಕಳ ಸುಪ್ತಪ್ರತಿಭೆ ಅನಾವರಣಗೊಳಿಸಲು ಅವಕಾಶ ದೊರೆಯಬೇಕು. ಜತೆಗೆ ಬಾಲ್ಯದಿಂದಲೇ ಸೌಹಾರ್ದ ಬದುಕಿನ ಮಹತ್ವ ತಿಳಿಸಬೇಕು. ಉತ್ತಮ ಯುವ ಸಂಪತ್ತು ದೇಶಕ್ಕೆ ನಾವು ನೀಡುವ ಮಹತ್ವದ ಕೊಡುಗೆಯಾಗುತ್ತದೆ ಎಂದು ಅಲ್ಲಿಪಾದೆ ಸೈಂಟ್ ಜಾನ್ಸ್ ಚರ್ಚಿನ ಧರ್ಮಗುರು ಗ್ರೆಗರಿ ಪಿರೇರಾ ಹೇಳಿದರು.
ಅವರು ಬಂಟ್ವಾಳ ತಾ| ಅಲ್ಲಿಪಾದೆ ಸೈಂಟ್ ಜಾನ್ಸ್ ಪ್ರೌಢಶಾಲೆಯಲ್ಲಿ ಮಂಗಳವಾರ ಜರಗಿದ ವಾಮದಪದವು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ನಾವೂರ ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರಪಾಡಿ ಗ್ರಾ.ಪಂ. ಸದಸ್ಯ ವಿನ್ಸೆಂಟ್ ಪಿಂಟೊ, ಶಿಕ್ಷಣ ಸಂಯೋಜಕಿ ಸುಜಾತಾ ಶುಭ ಹಾರೈಸಿದರು. ತಾ.ಪಂ. ಸದಸ್ಯೆ ಸ್ವಪ್ನಾ ವಿಶ್ವನಾಥ, ಗ್ರಾ.ಪಂ. ಸದಸ್ಯರಾದ ನಾರಾಯಣ ಕುಲಾಲ್, ಅಸುಂತಾ ಡಿ’ಸೋಜಾ, ಶಶಿಕಲಾ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಲಿಯೋ ಫೆರ್ನಾಂಡಿಸ್, ನಿವೃತ್ತ ಮುಖ್ಯಶಿಕ್ಷಕಿ ಬೆನಡಿಕ್ಟಾ ಫೆರ್ನಾಂಡಿಸ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ವೇಣುಗೋಪಾಲ, ಚಿನ್ನಸ್ವಾಮಿ, ಸುರೇಖಾ, ಶುಭಾ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಜೂಲಿಯಾನ, ಸಿಸ್ಟರ್ ಮಾರ್ಗರೆಟ್ ಮತ್ತಿತರರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿ| ಸಿಲ್ವಿಯಾ ಸ್ವಾಗತಿಸಿದರು, ಶಿಕ್ಷಕಿ ಉಷಾ ವಂದಿಸಿದರು. ಶಿಕ್ಷಕ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.