Advertisement

“ಟಿಡಿಆರ್‌ ಕೊಟ್ಟು ರಸ್ತೆ ಅಗಲೀಕರಣ ಆರಂಭಿಸಿ

12:36 PM Dec 23, 2017 | |

ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ರಸ್ತೆಗಳ ಅಗಲೀಕರಣಕ್ಕೆ ಅಭಿವೃದ್ಧಿ ಹಕ್ಕುಗಳ ಹಸ್ತಾಂತರ ಪತ್ರ (ಟಿಡಿಆರ್‌) ಪಡೆದು ಭೂಮಿ ನೀಡಲು ಸಿದ್ಧವಿರುವ ಮಾಲೀಕರಿಗೆ ಪರಿಹಾರ ನೀಡಿ ಭೂಸ್ವಾಧೀನ ಪಡಿಸಿಕೊಳ್ಳುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಶುಕ್ರವಾರ ಬಿಎಂಆರ್‌ಡಿಎನಲ್ಲಿ ನಗರದಲ್ಲಿ ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಂಡಿರುವ ವೈಟ್‌ಟಾಪಿಂಗ್‌, ರಸ್ತೆ ವಿಸ್ತರಣೆ , ಮಳೆನೀರು ಕಾಲುವೆ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೂಡಲೇ ಭೂ ಮಾಲೀಕರಿಗೆ ಟಿಡಿಆರ್‌ ಕೊಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕಾಮಗಾರಿ ಆರಂಭಿಸುವಂತೆ ತಿಳಿಸಿದರು.

ಜನವರಿ ಅಂತ್ಯದೊಳಗೆ ಮುಕ್ತ: ನಗರದ ದಾಲ್ಮಿಯ ಜಂಕ್ಷನ್‌ ಮೇಲ್ಸೇತುವೆಯನ್ನು ಜನವರಿ 1ರ ವೇಳೆಗೆ, ಓಕಳಿಪುರ ಜಂಕ್ಷನ್‌ನ ಅಷ್ಟಪಥಗಳ ಪೈಕಿ ನಾಲ್ಕು ಪಥಗಳನ್ನು ಜನವರಿ ಅಂತ್ಯಗೊಳಗೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಜತೆಗೆ ಉಳಿದ ನಾಲ್ಕು ಪಥಗಳನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಜಾರ್ಜ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next