ನೇತೃತ್ವದಲ್ಲಿ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾನಿರತ ರೈತರು, ಕೇಂದ್ರ ಸರ್ಕಾರ ರೈತ ವಿರೋಧಿ ನೀತು ಅನುಸರಿಸುತ್ತಿರುವುದಾಗಿ ದೂರಿದರು.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಭಗವಾನ್ ರೆಡ್ಡಿ, ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯುವ ತೊಗರಿ ಬೆಳೆಗೆ ಸರ್ಕಾರ 5.500 ರೂ. ಬೆಂಬಲ ಬೆಲೆ ನೀಡುತ್ತಿದೆ. ಇದು ಬೆಳೆಗೆ ತಗಲುವ ಖರ್ಚಿಗೆ ಸರಿದೂಗದ ಕಾರಣ 8 ಸಾವಿರ ರೂ. ಬೆಂಬಲ ಬೆಲೆ ನೀಡಬೇಕು. ಪ್ರತಿ ಗ್ರಾಪಂ ಕೇಂದ್ರದಲ್ಲೇ ಖರೀದಿ ಕೇಂದ್ರ ತೆರೆಯಬೇಕು, ಬೆಳೆ ಖರೀದಿಸಿದ ಹಣವನ್ನು ತ್ವರಿತವಾಗಿ ರೈತರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಈರಪ್ಪ ಹತ್ತಿ, ಬಾಳಾಸಾಬ ಬಿರಾದಾರ, ದಾನೇಶ್ವರಿ ರಾಥೋಡ್, ಕಾಶಿಬಾಯಿ ರಾಠೊಡ, ನಿರ್ಮಲ ಚವ್ಹಾಣ, ನೀಲವ್ವ ರಾಠೊಡ, ಜಯಶ್ರೀ, ಕೆ.ಬಿ ಪಾಟೀಲ, ಮಲ್ಲಿಕಾರ್ಜುನ ಕಲಾದಗಿ ಹಾಗೂ ರತ್ನಾಪುರ, ತಾಜಾಪುರ, ಕಣಮುಚನಾಳ. ಹರನಾಳ, ಕನ್ನಾಳ್, ಗುಣಕಿ, ಡೋಣೂರ, ಬರಟಗಿ ತಾಂಡಾ, ಹಡಗಲಿ, ರಂಭಾಪುರ, ಬಾರಕೋಟ್ರಿ, ತಾಂಡಾ, ಬುರಣಾಪುರ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.