Advertisement

ತೊಗರಿಗೆ ಬೆಂಬಲ ಬೆಲೆ ನೀಡಿ

10:40 AM Dec 12, 2017 | |

ವಿಜಯಪುರ: ತೊಗರಿ ಬೆಳೆಗೆ 8 ಸಾವಿರ ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಆರ್‌.ಕೆ.ಎಸ್‌. ಹಾಗೂ ಎಸ್‌ಯುಸಿಐ
ನೇತೃತ್ವದಲ್ಲಿ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾನಿರತ ರೈತರು, ಕೇಂದ್ರ ಸರ್ಕಾರ ರೈತ ವಿರೋಧಿ ನೀತು ಅನುಸರಿಸುತ್ತಿರುವುದಾಗಿ ದೂರಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಭಗವಾನ್‌ ರೆಡ್ಡಿ, ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯುವ ತೊಗರಿ ಬೆಳೆಗೆ ಸರ್ಕಾರ 5.500 ರೂ. ಬೆಂಬಲ ಬೆಲೆ ನೀಡುತ್ತಿದೆ. ಇದು ಬೆಳೆಗೆ ತಗಲುವ ಖರ್ಚಿಗೆ ಸರಿದೂಗದ ಕಾರಣ 8 ಸಾವಿರ ರೂ. ಬೆಂಬಲ ಬೆಲೆ ನೀಡಬೇಕು. ಪ್ರತಿ ಗ್ರಾಪಂ ಕೇಂದ್ರದಲ್ಲೇ ಖರೀದಿ ಕೇಂದ್ರ ತೆರೆಯಬೇಕು, ಬೆಳೆ ಖರೀದಿಸಿದ ಹಣವನ್ನು ತ್ವರಿತವಾಗಿ ರೈತರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.

ಆರ್‌ಕೆಎಸ್‌ ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ವಿವಿಧ ಆಯೋಗಗಳಿಂದ ವರದಿ ಆಧರಿಸಿ ತೊಗರಿ, ಕಡಲೆ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಬೇಕು. ಬೆಂಬಲ ಬೆಲೆ ನೀಡುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ತಮ್ಮ ಪಾಲು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್‌.ಟಿ., ಶಿವಬಾಳಮ್ಮ, ಜ್ಯೋತಿ, ತಿಪ್ಪರಾಯ ಹತ್ತರಕಿ, ಶ್ರೀಶೈಲ ನಿಡೋಣಿ, ಮಹಾದೇವ ಲಿಗಾಡೆ, ಪ್ರಕಾಶ ಕಿಲಾರೆ‌, ಚಿದಾನಂದ ಯಳಮೇಲಿ, ಶ್ರೀಶೈಲ ನಿಮಂಗ್ರೇ, ಕಾಶಿರಾಯಗೌಡ ಪಾಟೀಲ, ಶಿವಪ್ಪ ಬ್ಯಾಕೋಡ್‌,
ಈರಪ್ಪ ಹತ್ತಿ, ಬಾಳಾಸಾಬ ಬಿರಾದಾರ, ದಾನೇಶ್ವರಿ ರಾಥೋಡ್‌, ಕಾಶಿಬಾಯಿ ರಾಠೊಡ, ನಿರ್ಮಲ ಚವ್ಹಾಣ, ನೀಲವ್ವ ರಾಠೊಡ, ಜಯಶ್ರೀ, ಕೆ.ಬಿ ಪಾಟೀಲ, ಮಲ್ಲಿಕಾರ್ಜುನ ಕಲಾದಗಿ ಹಾಗೂ ರತ್ನಾಪುರ, ತಾಜಾಪುರ, ಕಣಮುಚನಾಳ. ಹರನಾಳ, ಕನ್ನಾಳ್‌, ಗುಣಕಿ, ಡೋಣೂರ, ಬರಟಗಿ ತಾಂಡಾ, ಹಡಗಲಿ, ರಂಭಾಪುರ, ಬಾರಕೋಟ್ರಿ, ತಾಂಡಾ, ಬುರಣಾಪುರ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next