Advertisement
ಶಾಲೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ: ಮಧುಗಿರಿಯಲ್ಲಿ 30 ಶಾಲೆಗಳು ಶತಮಾನೋತ್ಸವ ಆಚರಿಸುತ್ತಿವೆ. ಸರ್ಕಾರಿ ಶಾಲೆಗಳು ಖಾಸಗಿ ಸಂಸ್ಥೆಗಳಿಗೆ ಯಾವುದಕ್ಕೂ ಕಡಿಮೆಯಿಲ್ಲದೆ ಉತ್ತಮ ಶಿಕ್ಷಣ ನೀಡುತ್ತಿವೆ. ಇದಕ್ಕೆ ಶಿಕ್ಷಕರೇ ಮುಖ್ಯ ಕಾರಣ. ಮಕ್ಕಳಿಗೆ ಒತ್ತಡದಿಂದ ಶಿಕ್ಷಣ ನೀಡಬಾರದು. ಮಕ್ಕಳಲ್ಲಿ ಯಾವುದೇ ಕೀಳರಿಮೆ ಮೂಡಿಸದೆ ವ್ಯಕ್ತಿತ್ವ ರೂಪಿಸುವ ಶಿಕ್ಷಣ ನೀಡಬೇಕು. ನಾನು ಶಿಕ್ಷಣ ಸಚಿವನಾದ ಮೇಲೆ ಪಾವಗಡ, ಚಾಮರಾಜನಗರದ ಗೋಫಿನಾಥಂ, ಹನೂರು ಶಾಲೆಗಳಲ್ಲಿ ವಾಸ್ತವ್ಯ ಮಾಡಿದ್ದು, ಮೂಲಸೌಕರ್ಯ ಕಲ್ಪಿಸಿದ್ದೇನೆ.
Related Articles
Advertisement
ಮುಖ್ಯಶಿಕ್ಷಕಿ ಕಾಂತಮ್ಮ ಶಾಲೆಯ ಅಭಿವೃದ್ಧಿ ಹಾಗೂ ಇತರೆ ವರದಿ ಮಂಡಿಸಿದರು. ಮುಖಂಡ ಲಕ್ಷ್ಮಿನಾರಾಯಣ್ ಗ್ರಾಮದ ಶಾಲೆಗಾಗಿ ಶೃಂಗಾರವನದ ಜಾಗ ಬಿಡಿಸಿಕೊಟ್ಟರೆ, ಮಹಾತ್ಮ ಟ್ರಸ್ಟ್‌ನಿಂದ ಸುಭದ್ರ ಕಟ್ಟಡ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಪಂ ಅಧ್ಯಕ್ಷೆ ಇಂದಿರಾ, ಡಿಡಿಪಿಐ ರೇವಣ್ಣ ಸಿದ್ದಯ್ಯ, ತಹಶೀಲ್ದಾರ್ ನಂದೀಶ್, ಡಿವೈಪಿಸಿ ರಾಜಕುಮಾರ್, ಬಿಇಒ ರಂಗಪ್ಪ, ಬಿಆರ್‌ಸಿ ಆನಂದ್, ಡಯಟ್ ಪ್ರಾಂಶುಪಾಲ ರಾಮಕೃಷ್ಣಯ್ಯ, ಇಒ ದೊಡ್ಡಸಿದ್ದಯ್ಯ, ಸದಸ್ಯ ರಾಮಣ್ಣ, ಗ್ರಾಪಂ ಅಧ್ಯಕ್ಷೆ ಮಂಜಮ್ಮ, ಪುರಸಭೆ ಸದಸ್ಯ ಎಂ.ಆರ್.ಜಗಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ಖಜಾಂಚಿ ಚಿಕ್ಕರಂಗಯ್ಯ, ಪಿಡಿಓ ಗೌಡಯ್ಯ, ಮುಖಂಡರಾದ ಡಾ.ಶ್ರೀನಿವಾಸಮೂರ್ತಿ, ಲಕ್ಷ್ಮೀನಾರಾಯಣ್, ರಂಗಶಾಮಯ್ಯ, ರವೀಶಾರಾಧ್ಯ, ಚಿತ್ರನಟ ಕಲ್ಯಾಣ್, ಸಾವಿರಾರು ಗ್ರಾಮಸ್ಥರು ಇದ್ದರು.
ಪೋಷಕರು ಸರ್ಕಾರಿ ಶಾಲೆ ಮುಂದೆ ಸಾಲು ನಿಲ್ಲುವಂತೆ ಮಾಡ್ತೇನೆ: ಮುಂದಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ದಾಖಲಿಸಲು ಸರ್ಕಾರಿ ಶಾಲೆ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತ ಅಮೂಲ್ಯ ಬದಲಾವಣೆ ತರಲು ಶ್ರಮಿಸುತ್ತೇನೆ. ಪೋಷಕರು ದುಡಿಮೆಯ ಶೇ.40 ಹಣ ಶಿಕ್ಷಣಕ್ಕೆ ವ್ಯಯಿಸುತ್ತಿದ್ದಾರೆ. ಇದನ್ನು ತಪ್ಪಿಸಿ ಸರ್ಕಾರಿ ಶಾಲೆಯಲ್ಲೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಎಲ್ಲ ಅಗತ್ಯ ತಯಾರಿ ನಡೆಯುತ್ತಿದೆ.
ಈಗಾಗಲೇ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಸ್ಥಾಪಿಸಿದ್ದು, ಆಸಕ್ತ ಶಿಕ್ಷಕರು ಮುಂದೆ ಬಂದರೆ ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುವುದು. ನನ್ನ ತಾಯಿ ಸರ್ಕಾರಿ ಶಿಕ್ಷಕಿಯಾಗಿ 30 ವರ್ಷ ಸೇವೆ ಸಲ್ಲಿಸಿದ್ದು, ಇಲಾಖೆ ಋಣ ನನ್ನ ಮೇಲಿದೆ. ಇಂತಹ ಪುಣ್ಯದ ಕಾರ್ಯ ಮಾಡಲು ಅವಕಾಶ ಮಾಡಿಕೊಟ್ಟ ಸಿಎಂಗೆ ಅಭಿನಂದಿಸುವುದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.